Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ರಾಜ್ಯಾದ್ಯಂತ ವ್ಯಾಪಕ ಮಳೆ: ಫಾಲ್ಸ್‌ಗಳಿಗೆ ಪ್ರವೇಶ ನಿರ್ಬಂಧ, ಅಪಾಯ ಮಟ್ಟದಲ್ಲಿ ಕರಾವಳಿ, ಮಲೆನಾಡ ನದಿಗಳು
ಕರ್ನಾಟಕಪ್ರಮುಖ

ರಾಜ್ಯಾದ್ಯಂತ ವ್ಯಾಪಕ ಮಳೆ: ಫಾಲ್ಸ್‌ಗಳಿಗೆ ಪ್ರವೇಶ ನಿರ್ಬಂಧ, ಅಪಾಯ ಮಟ್ಟದಲ್ಲಿ ಕರಾವಳಿ, ಮಲೆನಾಡ ನದಿಗಳು

Share
2 Min Read
SHARE

newsics.com

ಬೆಂಗಳೂರು: ರಾಜ್ಯಾದ್ಯಂತ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಯಲ್ಲಾಪುರ ತಾಲೂಕಿನ ಫಾಲ್ಸ್‌ಗಳಿಗೆ ತೆರಳುವ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಭಾರೀ ಮಳೆಯಿಂದಾಗಿ ಗಂಗಾವಳಿ ನದಿ ನೀರಿ ಪ್ರಮಾಣ ಹೆಚ್ಚಳವಾಗಿದೆ. ಯಲ್ಲಾಪುರ ತಾಲೂಕಿನ ಎಲ್ಲಾ ಜಲಪಾತಗಳ ವೀಕ್ಷಣೆಗೆ ನಿಷೇಧ ಹೇರಲಾಗಿದೆ. ಯಲ್ಲಾಪುರ ತಾಲೂಕಿನ ಶಿರಲೆ ಜಲಪಾತ, ಕಾನೂರು ಫಾಲ್ಸ್, ಕುಳಿ ಮಾಗೋಡು ಜಲಪಾತ ಬಳಿ ತೆರಳದಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.

ಉಡುಪಿಯ ಅಮಾವಾಸ್ಯೆಬೈಲು ವ್ಯಾಪ್ತಿಯಲ್ಲಿ ಸುಂಟರಗಾಳಿಗೆ ಜನಜೀವನ ಅಸ್ತವ್ಯಸ್ತವಾಗಿದೆ. ರಟ್ಟಾಡಿ ಗ್ರಾಮದ ಜನರು ಕಂಗಾಲಾಗಿದ್ದಾರೆ.

ಚಿಕ್ಕಮಗಳೂರಿನ ಕೊಟ್ಟಿಗೆಹಾರ ಬಳಿ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಬಿರುಕು ಉಂಟಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಹಲವೆಡೆ ಶಾಲೆಗಳಿಗೆ ರಜೆ ನೀಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ‌ ಅಬ್ಬರ ಮುಂದುವರಿದಿದೆ. ಜಿಲ್ಲೆಯ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿಯಲ್ಲಿ ಧಾರಾಕಾರ ಮಳೆಗೆ ಘಾಟ್ ರಸ್ತೆಯಲ್ಲಿ ಬಿರುಕು ಉಂಟಾಗಿದೆ. ಪರಿಣಾಮವಾಗಿ ರಸ್ತೆ ಕುಸಿಯುವ ಹಂತ ತಲುಪಿದೆ. ದಕ್ಷಿಣ ಕನ್ನಡ-ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟ್ ರಸ್ತೆ ಇದಾಗಿದೆ.
ಕುಂದಾಪುರ ತಾಲೂಕಿನ ಕಮಲಶಿಲೆಯ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದೊಳಗೆ ಕುಬ್ಜ ನದಿ ನೀರು ಹರಿದಿದೆ. ಬೆಳಗಿನ ಜಾವ ಮೂರುವರೆ ಸುಮಾರಿಗೆ ಕುಬ್ಜಾ ನದಿ ನೀರು ದೇವಿಯ ಚರಣ ಸ್ಪರ್ಶ ಮಾಡಿದೆ. ಗರ್ಭಗುಡಿಗೆ ನೀರು ಬರುತ್ತಿದ್ದಂತೆ ಅರ್ಚಕರು ಮಂಗಳಾರತಿ ಮಾಡಿದರು. ವರ್ಷಂಪತಿ ಒಂದು ಬಾರಿ ಗರ್ಭಗುಡಿಗೆ ಕುಬ್ಜಾ ನದಿ ನೀರು ಹರಿದುಬರುತ್ತದೆ. ಈ ನೈಸರ್ಗಿಕ ಪುಣ್ಯ ಸ್ನಾನಕ್ಕೆ ಭಕ್ತರು ಕಾತರದಿಂದ ಕಾಯುತ್ತಿದ್ದರು.
ಮಲೆನಾಡಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಕೆರೆಕಟ್ಟೆ ಘಟ್ಟಪ್ರದೇಶದಲ್ಲಿ ಬುಧವಾರ ರಾತ್ರಿ ಭಾರೀ ಮಳೆಯಾಗಿದ್ದು, ತುಂಗಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬಂದಿದೆ. ತುಂಗಾ ನದಿ ಅಪಾಯದ ಅಂಚಿನಲ್ಲಿ ಹರಿಯುತ್ತಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾದ ಕಾರಣ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಡ್ಯಾಂನ ನೀರಿನ ಮಟ್ಟ ನೂರು ಅಡಿ ಸನಿಹಕ್ಕೆ ಬಂದಿದೆ. ಒಂದೇ ವಾರದಲ್ಲಿ ಕೆಆರ್‌ಎಸ್ ಡ್ಯಾಂಗೆ 12 ಅಡಿಯಷ್ಟು ನೀರು ಹರಿದುಬಂದಿದೆ. ಸದ್ಯ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ 99.30 ಅಡಿ ತಲುಪಿದೆ.

ದಿಲ್ಲಿಯಲ್ಲಿ ಟೀಂ ಇಂಡಿಯಾಗೆ ಅದ್ಧೂರಿ ಸ್ವಾಗತ, ಪ್ರಧಾನಿ ಮೋದಿ ಭೇಟಿ, ಇಂದು ಸಂಜೆ ಮುಂಬೈನಲ್ಲಿ ಭಾರೀ ರೋಡ್ ಶೋ

ಬಿಜೆಪಿ ಹಿರಿಯ ನಾಯಕ ಎಲ್‌‌‌‌. ಕೆ. ಅಡ್ವಾಣಿ ಮತ್ತೆ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಡೆಂಗ್ಯೂ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ 600 ರೂ. ನಿಗದಿ: ಸರ್ಕಾರ ಆದೇಶ

ಮಕ್ಕಳನ್ನು ಬೆಲ್ಟ್‌ನಿಂದ ಕ್ರೂರವಾಗಿ ಥಳಿಸಿದ ತಾಯಿ; ವಿಡಿಯೋ ಸಹಿತ ಸುದ್ದಿ

TAGGED:malnad area rivers at danger levelWidespread rain across the state: Coastal
Share This Article
Facebook Twitter Copy Link Print
Previous Article ದಿಲ್ಲಿಯಲ್ಲಿ ಟೀಂ ಇಂಡಿಯಾಗೆ ಅದ್ಧೂರಿ ಸ್ವಾಗತ, ಪ್ರಧಾನಿ ಮೋದಿ ಭೇಟಿ, ಇಂದು ಸಂಜೆ ಮುಂಬೈನಲ್ಲಿ ಭಾರೀ ರೋಡ್ ಶೋ
Next Article ವಿಳಂಬವಾಗಿದ್ದಕ್ಕೆ ಇಂಡಿಗೋ ಫ್ಲೈಟ್‌ನಲ್ಲೇ ಡ್ಯಾನ್ಸ್ ಮಾಡಿದ ಮಹಿಳೆ!

Popular Posts

ಡಿವೋರ್ಸ್​ ಕೋರಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಾ ಪೂಂಜಾ-ಸುಮಂತ್

1 Min Read

ರೆಡ್‌ ಝೋನ್‌ಗೆ ಎಂಟ್ರಿ ಕೊಡಲಿದೆ ಜಗತ್ತು, ಜೂನ್‌ನಿಂದ ವಿನಾಶ ಆರಂಭ

3 Min Read

ಮನೆಯ ಈ ದಿಕ್ಕಿನಲ್ಲಿ ಎಂದಿಗೂ ತಪ್ಪಿಯೂ ತುಳಸಿ ಇಡಬೇಡಿ!

1 Min Read

ಸುಚೇಂದ್ರ ಪ್ರಸಾದ್‌ಗೂ ಮುನ್ನ ಮಗಳಿಗಾದ ಅನ್ಯಾಯ ಬಿಚ್ಚಿಟ್ಟ ಪವಿತ್ರಾ ಲೋಕೇಶ್ ತಾಯಿ

3 Min Read

You Might Also Like

ಕರ್ನಾಟಕಪ್ರಮುಖ

ಬರೀ 11 ಸಾವಿರ ಇದ್ರೆ ಸಾಕು, ಮನೆಗೆ ಬರುತ್ತೆ ಟಾಟಾದ ಹೊಚ್ಚ ಹೊಸ ಇವಿ ಕಾರು!

2 Min Read
ಪ್ರಮುಖಕರ್ನಾಟಕ

ನೀವು ಬಿಟ್ಟು ಹೋಗುವಾಗ ಕರ್ನಾಟಕ ಶ್ರೇಷ್ಠವಾಗಿರಲಿ: ಡಿಕೆಶಿಗೆ ನಟ ರಮೇಶ್ ಅರವಿಂದ್ ಟ್ವೀಟ್

2 Min Read
ಕರ್ನಾಟಕಪ್ರಮುಖ

ಪ್ರಮಾಣ ವಚನ ಬಳಿಕ ಪರಮೇಶ್ವರ್, ಎಂಬಿ ಪಾಟೀಲ್ ಗೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದು ಯಾಕೆ?

1 Min Read
ಪ್ರಮುಖ

ಐಪಿಎಲ್‌ ಆಡಿ ಕುಟುಂಬವನ್ನು ಸಾಲದಿಂದ ಮುಕ್ತಿಗೊಳಿಸಿದ ಯುವ ಕ್ರಿಕೆಟಿಗ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?