newsics.com
ಹಾಸನ: ಮದುವೆಗೆ ಬಂದಿದ್ದ ಎಂಟು ಮಂದಿ ಮೇಲೆ ಕೋತಿ ದಾಳಿ ಮಾಡಿರುವ ಘಟನೆ ಚನ್ನರಾಯಪಟ್ಟಣ (Channarayapatna) ತಾಲೂಕಿನ ಹಿರಿಸಾವೆ ಗ್ರಾಮದಲ್ಲಿ ನಡೆದಿದೆ.
ಹಿರಿಸಾವೆಯ ನುಗ್ಗೆಹಳ್ಳ ರಸ್ತೆಯಲ್ಲಿನ ಕಲ್ಯಾಣ ಮಂಟಪದಲ್ಲಿ ಸೋಮವಾರ ಮದುವೆ ಸಮಾರಂಭ ನಡೆಯಿತು.
ಮದುವೆ ಮನೆಗೆ ಕೋತಿಯೊಂದು ನುಗ್ಗಿ ರಂಪಾಟ ಮಾಡಿದೆ. ಕೋತಿ ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದೆ. ಅಲ್ಲದೆ, ಊಟದ ಹಾಲ್‌ಗೆ ತೆರಳಿ ಊಟ ಮಾಡುತ್ತಿದ್ದವರಿಗೆ ತೊಂದರೆ ಕೊಟ್ಟಿದೆ.
ಮದುವೆಗೆ ಬಂದಿದ್ದ ಸುಶೀಲಮ್ಮ, ಲೀಲಾವತಿ, ನಿಂಗೇಗೌಡ, ಗೌರಮ್ಮ, ಗಿರಿಜಮ್ಮ, ತಿಮ್ಮೇಗೌಡ, ಗಿರಿಗೌಡ ಎಂಬುವರಿಗೆ ಕೋತಿ ಕಚ್ಚಿದೆ. ಗಾಯಾಳುಗಳಿಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಮದುವೆ ಮನೆಯಲ್ಲಿ ಮಂಗನಾಟಕ್ಕೆ ಜನರು ಹೈರಾಣಾಗಿದ್ದಾರೆ. ಈ ಕೋತಿ ಹಳ್ಳಿಯ ಜನಕ್ಕೆ ಆಗಾಗ್ಗೆ ಕಾಟ ಕೊಡುತ್ತಿದ್ದು, ಇದೀಗ ಮದುವೆ ಮನೆಗೆ ಬಂದವರಿಗೂ ಕಾಟ ಕೊಟ್ಟಿದೆ. ಹೀಗಾಗಿ ಕೋತಿಯನ್ನು ಹಿಡಿದು ಸ್ಥಳಾಂತರ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಅನಿಮಲ್ ಬಳಿಕ ಬಾಲಿವುಡ್ನಲ್ಲಿ ನಟಿ ತೃಪ್ತಿ ದಿಮ್ರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್!
ಕ್ರಿಕೆಟ್ ಗಾಗಿ ನಾಲ್ಕೂವರೆ ವರ್ಷ ಸ್ಮಶಾನದಲ್ಲಿ ಕಳೆದಿದ್ದ ಕುಮಟಾದ ಈ ಹುಡುಗ ಈಗ ಟೀಂ ಇಂಡಿಯಾದ ಪ್ರಮುಖ ಶಕ್ತಿ!