ಮುಂಬೈ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಇತ್ತೀಚೆಗೆ ತಮ್ಮ ಗೆಳೆಯ ಝಹೀರ್ ಇಕ್ಬಾಲ್ ಅವರೊಂದಿಗೆ ವಿವಾಹವಾದರು. ಮದುವೆಯಾದ ಒಂದು ವಾರದಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ವಿಡಯೋ ಒಂದು ಭಾರಿ ವೈರಲ್ ಆಗಿದೆ.
ಏಳು ವರ್ಷ ಪ್ರೀತಿ ಮಾಡಿದ್ದ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಕೈ ಕೈ ಹಿಡಿದುಕೊಂಡು ಸುತ್ತಾಡಿದ್ದರು. ಇದೀಗ ಮದುವೆಗೂ ಮುನ್ನದ ಮತ್ತೊಂದು ವಿಡಿಯೋ ಹೊರ ಬಂದಿದ್ದು, ಇದರಲ್ಲಿ ಪ್ರಾಂಕ್ ಮಾಡಲು ಬಂದ ಜಹೀರ್‌ಗೆ ಒದ್ದು ಕಬರ್ಡ್‌ನಲ್ಲಿ ಕೂಡಿ ಹಾಕಿದ್ದಾರೆ.
ಸೋನಾಕ್ಷಿ ಸಿನ್ಹಾ ಬ್ಯಾಗ್‌ನಲ್ಲಿ ಏನೋ ಹುಡುಕುತ್ತಿರುತ್ತಾರೆ. ಈ ವೇಳೆ ತಮ್ಮ ಮುಂದಿರುವ ವ್ಯಕ್ತಿ ನಿಮಗೇನಾದರೂ ಗೊತ್ತಿದೆಯಾ ಎಂದು ಕೇಳುತ್ತಾರೆ. ಅದಕ್ಕೆ ಆ ವ್ಯಕ್ತಿ ವಿಡಿಯೋ ಮಾಡುತ್ತಾ ಕಬರ್ಡ್‌ನಲ್ಲಿ ಇರಬಹುದು ನೋಡು ಎಂದು ಹೇಳುತ್ತಾನೆ. ನಿಜಾನಾ, ಎಂದು ಹೇಳುತ್ತಾ ಕಬರ್ಡ್ ತೆರೆದಾಗ ಒಳಗೆ ಅವಿತಿದ್ದ ಜಹೀರ್ ಜೋರು ಧ್ವನಿ ಮಾಡಿ ಹೆದರಿಸಿ ಪ್ರಾಂಕ್ ಮಾಡುತ್ತಾನೆ. ಒಂದು ಕ್ಷಣ ಸೋನಾಕ್ಷಿ ಸಿನ್ಹಾ ಹೆದರಿಕೊಳ್ಳುತ್ತಾರೆ. ಈ ವೇಳೆ ಅಲ್ಲಿದ್ದ ಎಲ್ಲರೂ ಜೋರಾಗಿ ನಗುತ್ತಾರೆ. ಕೂಡಲೇ ಜಹೀರ್‌ಗೆ ಒದ್ದು, ಕಬರ್ಡ್ ಒಳಗೆ ತಳ್ಳಿ ಸೋನಾಕ್ಷಿ ಸಿನ್ಹಾ ಬಾಗಿಲು ಹಾಕುತ್ತಾರೆ.