ಕೊಡಗು: ಅಕ್ಟೋಬರ್ ನಲ್ಲಿ ಭುವನ್- ಹರ್ಷಿಕಾ ಮನೆಗೆ ಹೊಸ ಅತಿಥಿಯ ಆಗಮನ. ಪೋಷಕರಾಗುತ್ತಿರುವ ಸುದ್ದಿಯನ್ನ ವಿಭಿನ್ನವಾಗಿ ಅನೌನ್ಸ್ ಮಾಡಿದ್ದಾರೆ.
ಕೊಡಗಿನ ಬೆಡಗಿ’ ಹರ್ಷಿಕಾ ಪೂಣಚ್ಚ ಅವರು ಕಳೆದ ವರ್ಷ ಭುವನ್ ಪೊನ್ನಣ್ಣ ಅವರ ಜೊತೆಗೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದರು. ಇದೀಗ ಮದುವೆಯಾಗಿ ವರ್ಷ ತುಂಬುವುದರೊಳಗೆ ಒಂದು ಸಿಹಿ ಸುದ್ದಿಯನ್ನು ಈ ದಂಪತಿ ಹಂಚಿಕೊಂಡಿದ್ದಾರೆ. ಹೌದು, ಹರ್ಷಿಕಾ ಪೂಣಚ್ಚ ಶೀಘ್ರದಲ್ಲೇ ಪುಟಾಣಿ ಕಂದಮ್ಮನಿಗೆ ತಾಯಿ ಆಗಲಿದ್ದಾರೆ.
ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಹರ್ಷಿಕಾ ಪೂಣಚ್ಚ ತಾಯಿಯಾಗುತ್ತಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಹರ್ಷಿಕಾ ಈ ಸಂಭ್ರಮವನ್ನು ವಿಭಿನ್ನವಾಗಿ ಫೋಟೋಶೂಟ್ ಮಾಡಿಸುವ ಮೂಲಕ ಹಂಚಿಕೊಂಡಿದ್ದಾರೆ.
2023, ಆಗಸ್ಟ್ 24ರಂದು ನಟ ಭುವನ್ ಪೊನ್ನಣ್ಣ ಜೊತೆ ಹರ್ಷಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಮದುವೆಯಾಗಿ ವರ್ಷದೊಳಗೆ ಗುಡ್ ನ್ಯೂಸ್ ನೀಡಿದ್ದಾರೆ.