newsics.com
ರತ್ನಗಿರಿ (ಮಹಾರಾಷ್ಟ್ರ): ರತ್ನಗಿರಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರೀ ಮೊಸಳೆಯೊಂದು ರಾತ್ರಿ ವೇಳೆ ಜನನಿಬಿಡ ರಸ್ತೆಗಳಲ್ಲಿ ಓಡಾಡಿದೆ.
ಬೃಹತ್ ಮೊಸಳೆ ಅಡ್ಡಾಡುತ್ತಿರುವುದನ್ನು ಗಮನಿಸಿದ ಜನರು ತೀವ್ರ ಆತಂಕಕ್ಕೊಳಗಾದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮೊಸಳೆ ರಸ್ತೆಯಲ್ಲಿ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರತ್ನಗಿರಿಯ ಚಿಪ್ಲುನ್ ಪ್ರದೇಶದಲ್ಲಿ ಈ ಮೊಸಳೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರತ್ನಗಿರಿಯ ಕರಾವಳಿ ಪ್ರದೇಶದಲ್ಲಿ ಭಾರೀ ಮಳೆ ದಾಖಲಾಗಿದ್ದು, ಸಮೀಪದ ಶಿವನದಿಯಲ್ಲಿ ಮೊಸಳೆ ವಾಸವಾಗಿರುವ ಶಂಕೆ ವ್ಯಕ್ತವಾಗಿದೆ.
ಎಂಟು ಅಡಿ ಉದ್ದದ ಮೊಸಳೆಯ ವಿಡಿಯೋವನ್ನು ಚಿಪ್ಲುನ್‌ನ ಚಿಂಚನಾಕಾ ಪ್ರದೇಶದಲ್ಲಿ ಆಟೋರಿಕ್ಷಾ ಚಾಲಕನೊಬ್ಬ ಸೆರೆ ಹಿಡಿದಿದ್ದಾನೆ ಎಂದು ವರದಿಯಾಗಿದೆ.
ರತ್ನಗಿರಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಈ ಪ್ರದೇಶದಲ್ಲಿ ಕನಿಷ್ಠ ಜುಲೈ 2 ರವರೆಗೆ ಭಾರೀ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Maharashtra's Ratnagiri gets an unexpected visitor – an 8-foot crocodile takes a nighttime stroll through the flooded streets
.
.
.
.#Chiplun #Maharashtra #Ratnagiri #Crocodile #India #IndianMonsoon pic.twitter.com/03a0jqZ4bO— WION (@WIONews) July 1, 2024
ಕೆಜಿಗಟ್ಟಲೆ ಚಿನ್ನಾಭರಣ ಧರಿಸಿ ಗನ್‌ಮ್ಯಾನ್, ಹುಡುಗಿಯರ ಜತೆ ಬೆಂಗಳೂರಲ್ಲಿ ರೀಲ್ಸ್ ಮಾಡುತ್ತಿದ್ದವ ಜೈಲು ಪಾಲು
ಹೆಚ್ಚುತ್ತಲೇ ಇದೆ FedEx ಪ್ರಕರಣ: ಐದು ತಿಂಗಳಲ್ಲಿ 65.19 ಕೋಟಿ ಕಳೆದುಕೊಂಡ ಬೆಂಗಳೂರಿಗರು