Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ದಿನ ಭವಿಷ್ಯ > ದಿನ ಭವಿಷ್ಯ 30-06-2024… ಕಟಕ- ಹಠ ಸ್ವಭಾವದಿಂದ ಅಪೂರ್ವ ಅವಕಾಶ ಕೈತಪ್ಪಲಿದೆ, ಮೀನ- ಗೆಲುವಿನತ್ತ ಸಾಗುವಿರಿ, ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?
ದಿನ ಭವಿಷ್ಯಪಂಚಾಂಗ

ದಿನ ಭವಿಷ್ಯ 30-06-2024… ಕಟಕ- ಹಠ ಸ್ವಭಾವದಿಂದ ಅಪೂರ್ವ ಅವಕಾಶ ಕೈತಪ್ಪಲಿದೆ, ಮೀನ- ಗೆಲುವಿನತ್ತ ಸಾಗುವಿರಿ, ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?

Share
5 Min Read
SHARE

newsics.com

ದಿನ ಭವಿಷ್ಯ

30 ಜೂನ್ 2024, ಭಾನುವಾರ

ಮೇಷ
ನೀರಸವಾದ ಜೀವನ ಇಷ್ಟಪಡುವುದಿಲ್ಲ. ಜೀವನದಲ್ಲಿ ಸದಾ ಸವಾಲುಗಳು ಎದುರಾಗಬೇಕೆಂದು ಬಯಸುವಿರಿ. ನಿಮ್ಮಲ್ಲಿರುವ ಆತ್ಮವಿಶ್ವಾಸ ಯಾವುದೇ ರೀತಿಯ ಸನ್ನಿವೇಶಕ್ಕೂ ಹೊಂದಿಕೊಳ್ಳಬಲ್ಲದು. ಅತ್ಯಲ್ಪ ಕಾಲದಲ್ಲಿ ಹೆಚ್ಚಿನ ಕೆಲಸ ಮಾಡಬಲ್ಲಿರಿ. ಆದರೆ ಸಹನೆ ಬಹಳ ಕಡಿಮೆ. ಸಣ್ಣಪುಟ್ಟ ತಪ್ಪುಗಳನ್ನು ಮನ್ನಿಸಲಾರದೆ ಹೋಗುವಿರಿ. ಉದ್ಯೋಗದಲ್ಲಿ ಉನ್ನತ ಮಟ್ಟ ತಲುಪುವಿರಿ. ನಿಮಗೆ ಸಮಾಜದಲ್ಲಿ ನಾಯಕನ ಪಟ್ಟ ದೊರೆಯುತ್ತದೆ. ಮನೆಯಲ್ಲಿ ನೀವಿಲ್ಲದೆ ಯಾವುದೇ ಸರಳ ಕೆಲಸವೂ ನಡೆಯುವುದಿಲ್ಲ.

ವೃಷಭ
ಕಡಿಮೆ ಸಂಖ್ಯೆಯ ಸ್ನೇಹಿತರು ಇರುತ್ತಾರೆ. ಸ್ನೇಹಿತರನ್ನು ಅಭಿಮಾನದಿಂದ ಕಾಣುವಿರಿ. ಸಂತಸ ಸಂಭ್ರಮಕ್ಕೆ ಕೊನೆಗೆ ಇರುವುದಿಲ್ಲ. ಉತ್ತಮ ದೇಹ ದಾಢ್ಯತೆಗಾಗಿ ದೈಹಿಕ ವ್ಯಾಯಾಮವನ್ನು ಅನುಸರಿಸುವಿರಿ. ಸಣ್ಣಪುಟ್ಟ ಸೋಲಿಗೂ ಮಾನಸಿಕವಾಗಿ ಕುಗ್ಗುವಿರಿ. ಅನಾರೋಗ್ಯವಿರುತ್ತದೆ. ಮುಖ್ಯವಾಗಿ ತಲೆನೋವು ನಿಮ್ಮನ್ನು ಬಾಧಿಸುತ್ತದೆ. ಧೈರ್ಯಕ್ಕೆ ಕೊರತೆ ಇರುವುದಿಲ್ಲ. ವಿದ್ಯಾರ್ಥಿಗಳು ಸಹನಾಶೀಲರಾಗಿರುತ್ತಾರೆ. ಸ್ನೇಹಿತರ ಗುಂಪಿನಿಂದ ಹೊರಬಂದು ಏಕಾಂಗಿಯಾಗಿ ಕಲಿಕೆಯನ್ನು ಮುಂದುವರಿಸುತ್ತಾರೆ. ಪ್ರಾಮಾಣಿಕೆಯಿಂದ ನಡೆದುಕೊಳ್ಳುವಿರಿ. ನಿಮ್ಮ ವಯಸ್ಸಿನ ಜನರ ನಡುವೆ ಉನ್ನತ ಪಟ್ಟವನ್ನು ಅಲಂಕರಿಸುವಿರಿ.

ಮಿಥುನ
ವಂಶದ ಆಸ್ತಿ ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ಕುಟುಂಬದಲ್ಲಿ ವಿಶೇಷವಾದ ಕಾರ್ಯಕ್ರಮ ನಡೆಯಲಿದೆ. ಉತ್ತಮ ಆರೋಗ್ಯ ಗಳಿಸಲು ಸರಿಯಾದ ಹಾದಿಯಲ್ಲಿ ನಡೆಯಬೇಕಾಗುತ್ತದೆ. ಕೆಲಸ ಕಾರ್ಯಗಳ ನಡುವೆ ವಿಶ್ರಾಂತಿ ಪಡೆಯುವುದು ಅಸಾಧ್ಯವಾಗುತ್ತದೆ. ಹಣಕಾಸಿನ ತೊಂದರೆ ಕಂಡುಬರುವುದಿಲ್ಲ. ಹಣಕಾಸಿನ ವಿವಾದದಿಂದ ಹೊರಬರಲು ಕಾನೂನು ಕ್ರಮ ಅನುಸರಿಸುವಿರಿ. ಬಂಧು- ಮಿತ್ರರ ಮೇಲೆ ವಿಶೇಷ ಪ್ರೀತಿ, ವಿಶ್ವಾಸ ಇರುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳು ಎದುರಾಗಲಿವೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನ ನೀಡುವಿರಿ.

ಕಟಕ
ಆತ್ಮೀಯರಿಗೆ ಹಣ ಸಹಾಯ ಮಾಡುವಿರಿ. ಮಕ್ಕಳ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಹಠದ ಗುಣದಿಂದಾಗಿ ಅಪೂರ್ವ ಅವಕಾಶ ಕಳೆದುಕೊಳ್ಳುವಿರಿ. ಹಣದ ಕೊರತೆ ಕಂಡುಬರುವುದಿಲ್ಲ. ದಂಪತಿ ನಡುವೆ ಉತ್ತಮ ಅನುಬಂಧ ಇರುತ್ತದೆ. ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ನಡೆದುಕೊಳ್ಳುವಿರಿ. ಮನೆಯ ಸುತ್ತಮುತ್ತಲಿನ ವಾತಾವರಣ ಶುಚಿಯಾಗಿಡುವಿರಿ. ರುಚಿಕರ ಭೋಜನ ಆಸ್ವಾದಿಸುವಿರಿ. ಕಷ್ಟಕರ ಪರಿಸ್ಥಿತಿಯಲ್ಲೂ ಬುದ್ಧಿವಂತಿಕೆಯಿಂದ ಸುಖ ಜೀವನ ನಡೆಸುವಿರಿ.

ಸಿಂಹ
ಬುದ್ಧಿವಂತಿಕೆಯಿಂದ ಅವಶ್ಯಕತೆ ಇರುವಷ್ಟು ಹಣವನ್ನು ಸಂಪಾದಿಸುವಿರಿ. ಯಾವುದೇ ಸಂದರ್ಭ ಎದುರಾದರೂ ಬೇರೆಯವರ ಅಧೀನದಲ್ಲಿ ಇರುವುದಿಲ್ಲ. ಐಷಾರಾಮಿ ಜೀವನಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡುವಿರಿ. ಸರಿಯಲ್ಲದ ಆಹಾರ ಕ್ರಮವು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ದೇಹದ ತೂಕ ಹೆಚ್ಚುವ ಕಾರಣ ನೆಮ್ಮದಿ ಕಳೆದುಕೊಳ್ಳುವಿರಿ. ಗಂಟಲಿಗೆ ಸಂಬಂಧಪಟ್ಟಂತಹ ಅನಾರೋಗ್ಯ ನಿಮ್ಮನ್ನು ಕಾಡಲಿದೆ. ಸಂದಿಗ್ಧಮಯ ಸಮಯ ಸನ್ನಿವೇಶಗಳನ್ನು ಸರಿಪಡಿಸಬಲ್ಲಿರಿ. ಬೇರೆಯವರಿಗೆ ಅಸಾಧ್ಯವಾದ ವಿಚಾರಗಳನ್ನು ಸುಲಭವಾಗಿ ತಿಳಿದುಕೊಳ್ಳುವಿರಿ. ಸೋಲಿಗೆ ಹೆದರುವುದಿಲ್ಲ.

ಕನ್ಯಾ
ಆರಂಭಿಸಿದ ಕೆಲಸ ಕಾರ್ಯಗಳಿಗೆ ವಿಘ್ನ. ಇದರಿಂದ ಬೇಸರಕ್ಕೆ ಒಳಗಾಗುವಿರಿ. ಹಾಸ್ಯ ಪ್ರಿಯರು. ಅನಾವಶ್ಯಕವಾಗಿ ಬೇರೆಯವರನ್ನು ಟೀಕಿಸುವಿರಿ. ಸದಾ ಉತ್ಸಾಹದಿಂದ ಜೀವನ ನಡೆಸುವಿರಿ. ಎಲ್ಲರೂ ಮೆಚ್ಚುವಂತೆ ಮಾತನಾಡುವಿರಿ. ಕುಟುಂಬದಲ್ಲಿ ನಡೆಯಬೇಕಿದ್ದ ವಿವಾಹ ಮುಂದೂಡಲ್ಪಡುತ್ತದೆ. ನಿಮ್ಮ ಮನಸ್ಸನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಾಗದು. ವದಂತಿಯನ್ನು ಹರಡದೆ ಹೋದರೂ ವದಂತಿಯನ್ನು ಇಷ್ಟಪಡುವಿರಿ. ತಾಳ್ಮೆಯಿಂದ ವರ್ತಿಸುವುದಿಲ್ಲ. ಸಂಕೋಚದ ಸ್ವಭಾವ ಇರುವ ಕಾರಣ ನಿಮ್ಮ ಕೆಲಸ ಕಾರ್ಯಗಳು ಅಪೂರ್ಣಗೊಳ್ಳಲಿವೆ. ಅತಿಯಾದ ಬುದ್ಧಿವಂತಿಕೆ ಇರುತ್ತದೆ.

ತುಲಾ
ಯಾವುದೇ ರೀತಿಯ ಸಮಸ್ಯೆಗಳು ಎದುರಾದರೂ ಸಹನೆ ಕಳೆದುಕೊಳ್ಳದೆ ಮಾತುಕತೆಯಿಂದ ಸರಿಪಡಿಸುವಿರಿ. ನಿಮ್ಮ ಮನಸ್ಸಿಗೆ ಒಪ್ಪುವ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಎಲ್ಲರನ್ನೂ ಆಕರ್ಷಿಸುವಂತಹ ಗುಣ ನಿಮಗಿರುತ್ತದೆ. ನಿಮ್ಮ ಮಕ್ಕಳಿಗೆ ನಿಮ್ಮ ಮೇಲೆ ವಿಶೇಷವಾದ ಪ್ರೀತಿ ಇರುತ್ತದೆ. ದಂಪತಿಗಳ ನಡುವೆ ಉತ್ತಮ ಅನುಬಂಧ ಇರುತ್ತದೆ. ದುಡುಕಿನ ಮಾತುಗಳನ್ನಾಡುವಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಬದಲಾವಣೆಗಳು ಕಂಡುಬರಲಿವೆ. ಉದ್ಯೋಗ ಬದಲಿಸುವ ತೀರ್ಮಾನ ಮಾಡುವಿರಿ. ಕುಟುಂಬದ ಹಿರಿಯರ ಜವಾಬ್ದಾರಿಯನ್ನು ಗೌರವದಿಂದ ಒಪ್ಪಿಕೊಳ್ಳುವಿರಿ. ಸ್ವಂತ ಉದ್ದಿಮೆ ಇದ್ದಲ್ಲಿ ನೌಕರರ ಜತೆ ಉತ್ತಮ ಬಾಂಧವ್ಯ ಇರುವುದಿಲ್ಲ.

ವೃಶ್ಚಿಕ
ಮನೆಯ ಜನರಲ್ಲಿ ಪರಸ್ಪರ ಹೊಂದಾಣಿಕೆಯ ಬುದ್ಧಿ ಇರುತ್ತದೆ. ಪ್ರೀತಿ ಮಮತೆಯಿಂದ ಮಕ್ಕಳನ್ನು ನೋಡಿಕೊಳ್ಳುವಿರಿ. ವಿಶೇಷ ಚೇತನರಿಗೆ ಜೀವನ ನಡೆಸಲು ಸಹಾಯ ಮಾಡುವಿರಿ. ಕಲಾವಿದರಿಗೆ ವಿಶೇಷ ವ್ಯಕ್ತಿ ಭೇಟಿಯಾಗುವ ಅವಕಾಶ ದೊರೆಯುತ್ತದೆ. ನಿಮ್ಮಲ್ಲಿರುವ ಜ್ಞಾನ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ಸಮಾನಮನಸ್ಕರೊಂದಿಗೆ ಸ್ನೇಹ ಬೆಳೆಸುವಿರಿ. ಧಾರ್ಮಿಕ ಆಚರಣೆಯಲ್ಲಿ ನಂಬಿಕೆ ಇರುತ್ತದೆ. ಇಲ್ಲಸಲ್ಲದ ಅಪವಾದಗಳು ಎದುರಾಗಲಿವೆ. ಮಕ್ಕಳ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಉಂಟಾಗುತ್ತದೆ. ಮನದಲ್ಲಿ ಕೋಪವಿದ್ದರೂ ಕೆಲಸ ಕಾರ್ಯಗಳಲ್ಲಿ ತೊಂದರೆಯಾಗುವುದಿಲ್ಲ. ನಿಮ್ಮ ಆತ್ಮೀಯ ಸ್ನೇಹಿತರೊಬ್ಬರಿಂದಲೇ ಸಮಸ್ಯೆಯೂ ಉಂಟಾಗುತ್ತದೆ. ಉದ್ಯೋಗದ ವಿಚಾರದಲ್ಲಿ ದೊರಕುವ ಅವಕಾಶಗಳ ಆಯ್ಕೆಯಲ್ಲಿ ಗಲಿಬಿಲಿಗೊಳ್ಳುವಿರಿ.

ಧನುಸ್ಸು
ನಿಮ್ಮಲ್ಲಿರುವ ತರ್ಕದ ಗುಣ ಕೆಲವರಿಗೆ ಬೇಸರ ಮೂಡಿಸುತ್ತದೆ. ನಿಮ್ಮ ಬುದ್ಧಿಶಕ್ತಿಯು ವಿಶೇಷವಾಗಿ ಇರುತ್ತದೆ. ಸೌಂದರ್ಯಕ್ಕೆ ಮರುಳಾಗುವುದಿಲ್ಲ. ಬುದ್ಧಿವಂತರನ್ನು ಮೆಚ್ಚಿ ಅವರಿಗೆ ಸಹಾಯ ಮಾಡುವಿರಿ. ನಿಮ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಸಂಗಾತಿ ಸಿಗುತ್ತಾರೆ. ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣುವಿರಿ. ನಿಷ್ಠೆಯಿಂದ ನಿಮ್ಮ ಕೆಲಸ ಕಾರ್ಯ ಪೂರ್ಣಗೊಳಿಸುವಿರಿ. ಹಣಕಾಸಿನ ಗಳಿಕೆಯೊಂದೇ ಜೀವನವಲ್ಲ ಎಂದು ಪ್ರತಿಬಿಂಬಿಸುವಿರಿ. ಆದರೂ ಮುಂದಿನ ಉತ್ತಮ ಜೀವನಕ್ಕಾಗಿ ಹಣ ಉಳಿಸುವಿರಿ. ಇಂದಿನ ಸೋಲನ್ನು ಮರೆತು ಮುಂದಿನ ಗೆಲುವಿಗೆ ಸಿದ್ಧರಾಗುವಿರಿ.

ಮಕರ
ಮನದಲ್ಲಿ ಅಂಜಿಕೆಯ ಸ್ವಭಾವ ಇರುವುದಿಲ್ಲ. ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಸೌಮ್ಯವಾಗಿದ್ದರೂ ಕೋಪ ಬಂದಾಗ ಉದ್ವೇಗದಿಂದ ವರ್ತಿಸುವಿರಿ. ನಿಮ್ಮ ಹಠದ ಗುಣ ಜತೆಯಲ್ಲಿರುವವರಿಗೆ ಬೇಸರ ಉಂಟುಮಾಡುತ್ತದೆ. ಪ್ರಾಣಿಗಳ ಬಗ್ಗೆ ಕರುಣೆ ಇರುತ್ತದೆ. ನಿಮ್ಮ ಹಣದ ಅಲ್ಪ ಭಾಗವನ್ನು ದಾನ ಧರ್ಮಕ್ಕೆ ಉಪಯೋಗಿಸುವಿರಿ. ಕಷ್ಟ ನಷ್ಟಗಳಿಗೆ ಬಲಿಯಾಗದೆ ಪಾರಾಗುವಿರಿ. ಯಾವುದೇ ಕೆಲಸ ಆರಂಭಿಸಲು ತಡ ಮಾಡುವುದಿಲ್ಲ. ನಿಮ್ಮಲ್ಲಿರುವ ಕ್ರಿಯಾಶೀಲತೆ ಅಚ್ಚರಿಯನ್ನು ಉಂಟುಮಾಡುತ್ತದೆ. ನಿಮ್ಮ ಮನದಲ್ಲಿ ಮೂಡುವ ಯೋಜನೆಗಳಿಗೆ ಜೀವ ತುಂಬುವಿರಿ. ಅವಸರಕ್ಕೆ ಒಳಗಾದರೆ ಕೆಲಸ ಕಾಯಗಳಲ್ಲಿ ಹಿನ್ನಡೆ ಉಂಟಾಗುತ್ತದೆ.

ಕುಂಭ
ಚಂಚಲವಾದ ಮನಸ್ಸಿರುತ್ತದೆ. ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಅನಾವಶ್ಯಕವಾಗಿ ಬದಲಿಸುವಿರಿ. ಮಿತಿಮೀರಿದ ಆಸೆ ಮನಸ್ಸಿನ ನೆಮ್ಮದಿಯನ್ನು ದೂರ ಮಾಡುತ್ತದೆ. ಕೆಲಸ ಕಾರ್ಯಗಳು ಅಪೂರ್ಣವಾಗುತ್ತವೆ. ಕೋಮಲವಾದ ಮನಸ್ಸಿರುತ್ತದೆ. ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ನಡೆದುಕೊಳ್ಳುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಮಟ್ಟ ತಲುಪುವಿರಿ. ಆತ್ಮಗೌರವಕ್ಕೆ ತೊಂದರೆ ಎನಿಸುವ ಕೆಲಸವನ್ನು ಮಾಡುವುದಿಲ್ಲ. ಸಂತಾನ ಲಾಭವಿದೆ. ಮನಸ್ಸಿಲ್ಲದೆ ಹೋದರೂ ಸಂಬಂಧಿಕರಿಗೆ ಹಣದ ಸಹಾಯ ಮಾಡುವಿರಿ. ಹಣಕಾಸಿನ ವಿಚಾರದಲ್ಲಿ ತಪ್ಪಾದ ನಿರ್ಧಾರ ತೆಗೆದುಕೊಳ್ಳುವಿರಿ.

ಮೀನ
ಸ್ವಂತ ಉದ್ದಿಮೆ ಇದ್ದಲ್ಲಿ ಎಚ್ಚರಿಕೆಯಿಂದ ಇರಬೇಕು. ಮಕ್ಕಳಿಗೆ ಕಫದ ತೊಂದರೆ ಇರುತ್ತದೆ. ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುವಿರಿ. ಮನದ ಭಾವನೆಗಳನ್ನು ಹತ್ತಿಕ್ಕಲು ಸಾಧ್ಯವಾಗುವುದಿಲ್ಲ. ಹಳೆಯ ಸೋಲಿಗೆ ಸಮಯ ವ್ಯರ್ಥ ಮಾಡದೆ ಗೆಲುವಿನತ್ತ ಸಾಗುವಿರಿ. ಸಂಗಾತಿಯ ಸುಖ ಸಂತೋಷಕ್ಕಾಗಿ ಯಾವುದೇ ತ್ಯಾಗವನ್ನಾದರೂ ಮಾಡುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ಯಾರಿಗೂ ತಿಳಿಯದಂತೆ ಹಣ ಸಂಗ್ರಹ ಮಾಡುವಿರಿ. ಎಂತಹ ಸಂದರ್ಭ ಬಂದರೂ ಯಾರಿಂದಲೂ ಹಣವನ್ನು ಪಡೆಯುವುದಿಲ್ಲ. ಸೌಂದರ್ಯಪ್ರಿಯರು. ಮನೆ ಮಂದಿಯ ಜತೆ ಬೇಸರ ಕಳೆಯಲು ಮನರಂಜನಾ ಸ್ಥಳಕ್ಕೆ ಭೇಟಿ ನೀಡುವಿರಿ. ಸುಲಭವಾಗಿ ಹಣವನ್ನು ಖರ್ಚು ಮಾಡುವುದಿಲ್ಲ.

TAGGED:Day Prediction 30-06-2024... Cancer- A unique opportunity will be missed due to stubborn naturePisces- You will move towards victorywhat is your zodiac sign in the future?
Share This Article
Facebook Twitter Copy Link Print
Previous Article ಶುಭೋದಯ… ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ನವಮಿ, ‍ಭಾನುವಾರ 30 ಜೂನ್ 2024
Next Article ಯೋಗ… ಈ ಆಸನ ಮಾಡಿ ಲೊ ಬಿಪಿ ಸಮಸ್ಯೆಗೆ ಗುಡ್ ಬೈ ಹೇಳಿ

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಪಂಚಾಂಗಈ ದಿನಜ್ಯೋತಿಷ್ಯಪ್ರಮುಖ

Ceremony bigins ಜೂನ್ 19ರಿಂದ ಶುಭ ಸಮಾರಂಭ ಆರಂಭ: ಸಿಗಲಿವೆ ಉತ್ತಮ ಮುಹೂರ್ತ

1 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 11-06-2026, ಗುರುವಾರ

4 Min Read
ಪಂಚಾಂಗಜ್ಯೋತಿಷ್ಯಪ್ರಮುಖ

ASTRO 59 ವರ್ಷ ಬಳಿಕ ಶುಕ್ರ, ಗುರು, ಬುಧ ಗ್ರಹಗಳ ಮೆರವಣಿಗೆ: ಈ ರಾಶಿ ಜನರಿಗೆ ಭಾರೀ ಅದೃಷ್ಟ

2 Min Read
ಪಂಚಾಂಗಈ ದಿನಜ್ಯೋತಿಷ್ಯಪ್ರಮುಖಪ್ರಮುಖ

ASTRO ಕರ್ಕಾಟಕ ರಾಶಿಗೆ ಶುಕ್ರ ಪ್ರವೇಶ: ಈಗಿನಿಂದಲೇ ಈ ನಾಲ್ಕು ರಾಶಿಯವರಿಗೆ ಬಂಪರ್ ಅದೃಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?