newsics.com
ಮುಂಬೈ : 9 ವರ್ಷಗಳಾಯ್ತು ನಾನು ಯಾರೊಂದಿಗೂ ಸೆಕ್ಸ್ ಮಾಡಿಲ್ಲ. ಇರ್ಫಾನ್ ಪಠಾಣ್ ಜತೆ ಬ್ರೇಕಪ್ ಆದ ನಂತರ ಯಾರೊಂದಿಗೂ ಸೆಕ್ಸ್ ಮಾಡಲಿಲ್ಲ ಎಂದು ನಟಿ ಹಾಗೂ ರಾಜಕಾರಣಿ ಪಾಯಲ್ ಘೋಷ್ ಪೋಸ್ಟ್ ಹಂಚಿಕೊಂಡಿದ್ದಾರೆ.
ನಟಿ ಪೋಸ್ಟ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ʻʻ9 ವರ್ಷಗಳಾದವು. ನಾನು ಯಾರೊಂದಿಗೂ ಸೆಕ್ಸ್ ಮಾಡಿಲ್ಲ. ಇರ್ಫಾನ್ ಪಠಾಣ್ ಜೊತೆ ಬ್ರೇಕಪ್ ಆದ ನಂತರ ಯಾರೊಂದಿಗೂ ಸೆಕ್ಸ್ ಮಾಡಲಿಲ್ಲ. ಇದು ಸುಳ್ಳು ಅಂತ ಅನಿಸಬಹುದು. ಆದರೆ ಇದುವೇ ನಿಜ ಎಂದು ನಟಿ ತಮ್ಮ ಇನ್ಸ್ಟಾ ಪೋಸ್ಟ್ನಲ್ಲಿ ಹೇಳಿದ್ದಾರೆ.ನಟಿ ತಾನು ಹಾಗೂ ಇರ್ಫಾನ್ ಪಠಾಣ್ ಲವ್ ಮಾಡುತ್ತಿದ್ದೆವು ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವು ಪೋಸ್ಟ್ ಮಾಡಿ ಹೇಳಿದ್ದಾರೆ.
ಪೋಸ್ಟ್ ನೋಡಿ ಸಾಕಷ್ಟು ಮಂದಿ ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ. ಇರ್ಫಾನ್ ಪಠಾಣ್ ಸಾಂಪ್ರದಾಯಿಕ ಕುಟುಂಬ , ಹಾಗಾಗಿ ನಾನು ಬ್ರೇಕಪ್ ಆದೆ ಎಂದು ಹೇಳಿಕೊಂಡಿದ್ದಾರೆ. ಇದೀಗ ನೆಟ್ಟಿಗರು ಒಂದು ಕುಟುಂಬವನ್ನು ಹಾಳು ಮಾಡಬೇಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ.