newsics.com
ಹಾವೇರಿ : ಹಿಟ್ಲರ್ ಕಲ್ಯಾಣ ಸೀರಿಯಲ್ನಿಂದ ಪ್ರತಿಭೆ ಪ್ರೂವ್ ಮಾಡಿದ ನಟಿ ಮಲೈಕಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮುದ್ದಾದ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಶ್ವೇತ ವರ್ಣದ ಸುಂದರಿ ಕಪ್ಪು ಬಣ್ಣದ ಔಟ್ಫಿಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ತಲೆಗೆ ಹ್ಯಾಟ್, ಕೈಗೆ ಜಾಳಿಗೆಯಂತ ಗ್ಲೌಸ್ ಬ್ಯೂಟಿಫುಲ್ ಫ್ರಾಕ್, ಅದಕ್ಕೆ ಸೂಟ್ ಆಗೋ ಮುತ್ತಿನ ನೆಕ್ ಪೀಸ್ ಮಲೈಕಾ ಅಂದವನ್ನ ಹೆಚ್ಚಿಸುತ್ತಿದೆ. ಮಲೈಕಾ ಬ್ಲ್ಯಾಕ್ ಆ್ಯಂಡ್ ಬ್ಲ್ಯಾಕ್ನಲ್ಲಿ ಕಣ್ಣು ಕುಕ್ಕುವಂತೆ ಕಂಗೋಳಿಸಿದ್ದಾರೆ.
ಮಲೈಕಾ ಅವರ ಹೊಸ ಲುಕ್ಗೆ ಅಭಿಮಾನಿಗಳು ಮನಸೋತಿದ್ದು, ಕಲಿಯುಗದ ಅಪ್ಸರೆ ಅಂತ ಕಾಮೆಂಟ್ ಮೂಲಕ ನೆಚ್ಚಿನ ನಟಿಯ ಅಂದ ಹೋಗಳುತ್ತಿದ್ದಾರೆ.
