newsics.com
ಮಾಸ್ಕೊ: ಇಲ್ಲೊಬ್ಬ ಭೂಪ ತನ್ನ ಗೆಳತಿಯನ್ನು ಖುಷಿಪಡಿಸಲು ಕಂತೆ ಕಂತೆ ನೋಟುಗಳ ಕಾರ್ಪೆಟ್ ಹಾಸಿದ್ದಾನೆ.
ಸಾಮಾನ್ಯವಾಗಿ ಪ್ರೀತಿಪಾತ್ರರನ್ನು ಸ್ವಾಗತಿಸಲು ಹೂವಿನ ಕಾರ್ಪೆಟ್ ಹಾಸಿರುವುದನ್ನು ನೋಡಿರುತ್ತೀರಿ. ಆದರೆ ಈ ಉದ್ಯಮಿ ತನ್ನ ಗೆಳತಿ ಹೆಲಿಕಾಪ್ಟರ್‌ನಿಂದ ಇಳಿಯುತ್ತಿದ್ದಂತೆ ಆಕೆಯ ಸ್ವಾಗತಕ್ಕೆ ನೋಟುಗಳ ಕಾರ್ಪೆಟ್ ಅನ್ನೇ ಹಾಸಿದ್ದಾನೆ.
ರಷ್ಯಾದ ಉದ್ಯಮಿ ಸೆರ್ಗೆಯ್ ಕೊಸೆಂಕೊ ಎಂಬುವನು ತನ್ನ ಗರ್ಲ್‌ಫ್ರೆಂಡ್ ಸ್ವಾಗತಿಸಲು ಕಂತೆ ಕಂತೆ ನೋಟುಗಳ ಕಾರ್ಪೆಟ್ ಹಾಸಿದ್ದು, ಈ ಹಳೆಯ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿದೆ.
@mr.thank.you ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋದಲ್ಲಿ ಸೆರ್ಗೆಯ್ ಕೊಸೆಂಕೊ ತನ್ನ ಗೆಳತಿಗಾಗಿ ನೋಟಿನ ಕಾರ್ಪೆಟ್ ಹಾಸಿರುವುದನ್ನು ಕಾಣಬಹುದು.
ಗೆಳತಿ ಹೆಲಿಕಾಪ್ಟರ್‌ನಿಂದ ಇಳಿಯುತ್ತಿದ್ದಂತೆ ಕೊಸೆಂಕೊ, ಕಂತೆ ಕಂತೆ ನೋಟುಗಳ ಮೇಲೆ ಆಕೆಯ ಕೈ ಹಿಡಿದು ನಡೆಸಿಕೊಂಡು ಬಂದಿದ್ದಾನೆ.
ಕೆಲ ಸಮಯದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 39.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದ್ದು, ಎಲ್ಲವೂ ದುಡ್ಡಿನ ಮಹಿಮೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
https://www.instagram.com/reel/CvSmE34M3nB/?igsh=bTRremI1Z21maG9n
ಸಿದ್ದರಾಮಯ್ಯ ಡಿಕೆಶಿಗೆ ಅಧಿಕಾರ ಬಿಟ್ಟು ಕೊಡಲಿ; ವೇದಿಕೆ ಮೇಲೆಯೇ ಬಹಿರಂಗವಾಗಿ ಬೇಡಿಕೆ ಇಟ್ಟ ಸ್ವಾಮೀಜಿ