newsics.com
ಬೆಂಗಳೂರು: ರಾಜ್ಯದಲ್ಲಿ ಹೆಚ್ಚುವರಿ ಡಿಸಿಎಂ ಬೇಡಿಕೆ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಸಿಎಂ ಸಿದರಾಮಯ್ಯ ಮುಂದೆ ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಿ ಎಂದು ಸ್ವಾಮೀಜಿಯೊಬ್ಬರು ಬೇಡಿಕೆ ಇಟ್ಟಿದ್ದಾರೆ.
ಸಿದ್ದರಾಮಯ್ಯ ಮನಸ್ಸು ಮಾಡಿದ್ರೆ ಮಾತ್ರ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲು ಸಾಧ್ಯವಾಗುತ್ತೆ. ಇಲ್ಲಾಂದ್ರೆ ಆಗಲ್ಲ. ದಯವಿಟ್ಟು ಡಿಕೆಶಿಯನ್ನು ಸಿಎಂ ಆಗಿ ಮಾಡಿ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಬಹಿರಂಗವಾಗಿಯೇ ಬೇಡಿಕೆ ಇಟ್ಟಿದ್ದಾರೆ.
ನಗರದಲ್ಲಿ ಗುರುವಾರ ನಡೆದ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರಿಗೆ ಇದುವರೆಗೂ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿಲ್ಲ. ಸಿದ್ದರಾಮಯ್ಯ ಅವರು ಈಗಾಗಲೆ ಮುಖ್ಯಮಂತ್ರಿಯಾಗಿ ಅನುಭವ ಪಡೆದಿದ್ದಾರೆ ಹಾಗಾಗಿ ಸಿದ್ದರಾಮಯ್ಯ ಡಿ ಕೆ ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟು ಕೊಡಬೇಕು ಎಂದು ವೇದಿಕೆ ಮೇಲೆಯೇ ಮನವಿ ಮಾಡಿದರು.
ಬೆಂಗಳೂರು ಒಂದಾಗಿ ಉಳಿಯಬೇಕು. ಅದನ್ನು ಭಾಗ ಮಾಡುವ ಪ್ರಯತ್ನ ಹಿಂದೆ ನಡೆದಿತ್ತು. ಹೋರಾಟದ ಮೂಲಕ ಅದನ್ನು ತಡೆಯಲಾಗಿತ್ತು. ಈಗ ಮತ್ತೆ ಭಾಗ ಮಾಡುವ ಕೂಗು ಎದ್ದಿದೆ. ದಯವಿಟ್ಟು ಭಾಗ ಮಾಡಬಾರದು ಎಂದು ಹೇಳಿದರು.
ಇಬ್ಬಾಗ ಮಾಡಬೇಕು ಎಂದಿದ್ದರೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂದು ಮಾಡಿ. ಆಗ ಉತ್ತರ ಕರ್ನಾಟಕ ಅಭಿವೃದ್ಧಿ ಆಗುತ್ತದೆ. ಈಗ ಉತ್ತರ ಕರ್ನಾಟಕದವರು ಬೆಂಗಳೂರು ಸೇರಿರುವುದರಿಂದ ಅಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಅಭಿಪ್ರಾಯಪಟ್ಟರು.
ಅಮಾವಾಸ್ಯೆಯಂದು ಬಳೆ ತೊಟ್ಟು ಸೀರೆ ಉಡುತ್ತಿದ್ದ ಸೂರಜ್ ರೇವಣ್ಣ! ಸಂತ್ರಸ್ತನಿಂದ ಅಚ್ಚರಿ ವಿಚಾರ ಬಹಿರಂಗ