newsics.com
ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಸಿಐಡಿ ವಶದಲ್ಲಿರುವ ಜೆಡಿಎಸ್ ಎಂಎಲ್‌ಸಿ ಡಾ. ಸೂರಜ್ ರೇವಣ್ಣ ಅಮಾವಾಸ್ಯೆಯಂದು ಬಳೆ ತೊಟ್ಟು, ಸೀರೆ ಉಡುತ್ತಿದ್ದರು ಎಂದು ಪ್ರಕರಣದ ಸಂತ್ರಸ್ಥ ಹೇಳಿಕೆ ನೀಡಿದ್ದಾರೆ.
ಸೂರಜ್ ರೇವಣ್ಣರನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆ ನಡೆಸಲು ಸಿಐಡಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು, ಪ್ರಕರಣದ ದೂರುದಾರ ಜೆಡಿಎಸ್ ಕಾರ್ಯಕರ್ತನಾಗಿರುವ ಸಂತ್ರಸ್ತ, ಸೂರಜ್ ರೇವಣ್ಣ ಬಳೆ ತೊಟ್ಟು, ಸೀರೆ ಉಡುವ ಅಚ್ಚರಿಯ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಸೂರಜ್ ರೇವಣ್ಣಗೆ ಎರಡು ವ್ಯಕ್ತಿತ್ವವಿದ್ದು, ಹೊರಗೆ ಒಂದು ಮುಖ, ಒಳಗೆ ಒಂದು ಮುಖ ಇದೆ. ಸಾರ್ವಜನಿಕ ಜೀವನದಲ್ಲಿರುವುದಕ್ಕೆ ವಿರುದ್ಧವಾಗಿ ಒಳಗಡೆ ಇರುತ್ತಾರೆ. ಸೂರಜ್ ರೇವಣ್ಣ ಕಾಮುಕ. ನಾಲ್ಕು ವರ್ಷದಿಂದ ಎಲ್ಲೂ ಹೇಳಿಕೊಳ್ಳಲು ನನಗೆ ಆಗಿರಲಿಲ್ಲ, ಮನಸ್ಸಿನಲ್ಲಿ ಕಾಡುತ್ತಿತ್ತು.
ಒಂದು ದಿನ ನನ್ನ ಜತೆ ಸೂರಜ್ ರೇವಣ್ಣ ಮಾತಾಡುತ್ತಾ ನನ್ನ ಜೀವನ ಹೇಗೆ ಏನು ಎಂದೆಲ್ಲಾ ಕೇಳಿದರು. ನಾನು ನನ್ನ ಕೆಲಸ, ಕುಟುಂಬದ ಬಗ್ಗೆ ಹೇಳಿದೆ. ಯಾವುದಕ್ಕೂ ಯೋಚನೆ ಮಾಡಬೇಡ. ನಾನು ಇದ್ದೇನೆ ಎಂದು ಹೇಳಿ ರೂಮ್ ಒಳಗೆ ಕರೆದುಕೊಂಡು ಹೋದರು. ಅಲ್ಲಿ ನನ್ನ ಕಾಲು ಒತ್ತುವಂತೆ ಹೇಳಿದರು. ನಾನು ಕಾಲು ಒತ್ತಿದೆ.. ಮುಂದೆ ಏನಾಯ್ತು ಎಂದು ನಾನು ಹೇಳಲು ಸಾಧ್ಯವಿಲ್ಲ ಎಂದು ಸಂತ್ರಸ್ತ ಯುವಕ ಮೌನಕ್ಕೆ ಜಾರಿದ.
ಅಯೋಧ್ಯೆ: 650 ಕೋಟಿ ವೆಚ್ಚದಲ್ಲಿ ದೇಗುಲಗಳ ಮ್ಯೂಸಿಯಂ ನಿರ್ಮಿಸಲು ಮುಂದಾದ ಟಾಟಾ ಸನ್ಸ್
ರಸ್ತೆಗಳು ಸುಸ್ಥಿತಿಯಲ್ಲಿದ್ದರೆ ಮಾತ್ರ ಟೋಲ್: ಹೆದ್ದಾರಿ ಏಜೆನ್ಸಿಗಳಿಗೆ ಸಚಿವ ಗಡ್ಕರಿ ಸೂಚನೆ
ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು