Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ದಿನ ಭವಿಷ್ಯ > ಮಿಥುನ- ಸ್ತ್ರೀಯರಿಗೆ ವಿನಾಕಾರಣ ಅಪವಾದ, ಧನು- ಹಣಕಾಸಿನ ವಿಚಾರದಲ್ಲಿ ಎಚ್ಚರ, ಇಂದಿನ ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?
ದಿನ ಭವಿಷ್ಯಪಂಚಾಂಗ

ಮಿಥುನ- ಸ್ತ್ರೀಯರಿಗೆ ವಿನಾಕಾರಣ ಅಪವಾದ, ಧನು- ಹಣಕಾಸಿನ ವಿಚಾರದಲ್ಲಿ ಎಚ್ಚರ, ಇಂದಿನ ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?

Share
6 Min Read
SHARE

newsics.com

ದಿನ ಭವಿಷ್ಯ

27 ಜೂನ್ 2024, ಗುರುವಾರ

ಮೇಷ

ಇಂದು ನೀವು ಎಲ್ಲ ಕಾರ್ಯವನ್ನೂ ಶಿಸ್ತಿನಿಂದ ಮಾಡಲು ಬಯಸುವಿರಿ. ಕಳೆದುಕೊಂಡಿದ್ದರ ಕುರಿತು ಚಿಂತಿಸುವುದನ್ನು ಬಿಡಿ. ಉತ್ತಮವಾದ ಮಾರ್ಗಾನ್ವೇಷಣೆಯಲ್ಲಿ ಇರಿ. ಸ್ವಲ್ಪ ಅಂತರದಲ್ಲಿ ನಿಮಗೆ ಸಿಗಬೇಕಾದ ಹಣವೂ ಬೇರೆಯವರ ಕೈ ಸೇರುವುದು. ವಾಹನ ರಿಪೇರಿಗೆ ಹಣವೂ ಖರ್ಚಾಗಬಹುದು. ಎಂತಹ ಒತ್ತಡದಲ್ಲಿಯೂ ಅದನ್ನು ಸಡಿಲಿಸಿಕೊಳ್ಳುವ ಅರಿವು ನಿಮಗೆ ಗೊತ್ತಿದೆ. ಅವರಿಗೆ ಕೊಟ್ಟುಬಿಡಿ. ಅತಿಯಾದ ಅನಗತ್ಯ ಬಯಕೆಯೂ ನಿಮ್ಮ ನಿತ್ಯ ಜೀವನಕ್ಕೆ ಒಳ್ಳೆಯದಲ್ಲ. ಬಂದ ಹಣವು ಮತ್ತಾವುದೋ ರೀತಿಯಲ್ಲಿ ಹೋಗಲಿದೆ. ನಿಮಗೆ ಯಾರಾದರೂ ಏನಾದರೂ ಮಾಡಿಸಿದ್ದಾರೇನೋ ಎನ್ನುವ ಅನುಮಾನವೂ ಕಾಡಬಹುದು. ಒಂಟಿಯಾಗಿ ಎಲ್ಲಿಗಾದರೂ ಹೋಗುವ ಮನಸ್ಸಾಗುವುದು.

ವೃಷಭ

ನೀವು ಯಾರ ಮಾತನ್ನು ಒಪ್ಪಿದರೂ ನಿಮ್ಮ ಆಲೋಚನೆಯನ್ನು ಬದಲಾಯಿಸುವುದಿಲ್ಲ. ತಂದೆಯಿಂದ ಬರುವ ಧನವು ವಿಳಂಬವಾಗಲಿದೆ. ಸ್ನೇಹಿತರ ಜತೆ ಸೇರಿ ಖರ್ಚು ಮಾಡುವಿರಿ. ಯಾರಾದರೂ ನಿಮ್ಮನ್ನು ಅಳೆಯಬಹುದು. ಅದರೆ ಕಾಣುವಷ್ಟು ಸುಲಭವಾಗಿ ಯಾವುದೂ ಇಲ್ಲವೆಂಬುದು ಗೊತ್ತಾಗಲಿದೆ. ಅಗೌರವ ಸಿಗುವ ಕಡೆ ಸುಮ್ಮನೆ ಹೋಗಬೇಡಿ. ಆಸ್ತಿಯ ವಿಚಾರದಲ್ಲಿ ಯಾರೋ ಮಧ್ಯಸ್ತಿಕೆ ವಹಿಸಿಕೊಳ್ಳಲು ಬರಬಹುದು. ಕಚೆರಿಯಲ್ಲಿ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಲು ಕಷ್ಟವಾದೀತು. ಪರರ ಭಾವನೆಗೆ ನಿರ್ಲಕ್ಷ್ಯ ಬೇಡ. ನಿಮ್ಮಷ್ಟಕ್ಕೆ ನೀವು ಹೇಗೋ ಇರುವಿರಿ. ಸಹೋದರರ‌ ನಡುವೆ ಸೌಹಾರ್ದ ಇರಲಿದೆ. ನಿಮ್ಮ ಮೇಲಿಟ್ಟ ನಂಬಿಕೆಯನ್ನು ಕಷ್ಟಪಟ್ಟು ಉಳಿಸಿಕೊಳ್ಳಬೇಕಾಗುತ್ತದೆ.

ಮಿಥುನ

ತಂದೆಯು ಯಾವುದೋ ಕಾರ್ಯಕ್ಕೆ ಧನವನ್ನು ನಿರೀಕ್ಷಿಸಬಹುದು. ಕುಟುಂಬದ ಸಮಸ್ಯೆಯನ್ನು ಬಗೆಹರಿಸಲಾರದೆ ಕೈಚೆಲ್ಲಿ ಕುಳಿತುಕೊಳ್ಳುವಿರಿ. ಹಣದ ವಿಚಾರದಲ್ಲಿ ನಿಮ್ಮನ್ನು ವಂಚಿಸುವರು. ನಿಮ್ಮ ತಪ್ಪೇ ನಿಮಗೆ ಮುಳ್ಳಾದೀತು. ಸ್ತ್ರೀಯರಿಗೆ ವಿನಾಕಾರಣ ಅಪವಾದ ಬಂದೀತು. ಹೊಸ ಕೆಲಸದ ಉತ್ಸಾಹದಲ್ಲಿ ಇರುವಿರಿ. ಸಂಪಾದನೆಯು ಅಲ್ಪವೆನಿಸಿ ಆದಾಯದ ಮೂಲವನ್ನು ಬದಲಿಸಬೇಕಾಗಬಹುದು. ನೂತನ ವಾಹನ ಖರೀದಿಸಿದ ಖುಷಿ ಇರಲಿದೆ. ಸಂಗಾತಿಯ ಜತೆ ಕಚೇರಿಯ ವಿಚಾರ ಹಂಚಿಕೊಳ್ಳುವಿರಿ. ಸಹೋದರರ ನಡುವೆ ಮನೆಯ ಬಗ್ಗೆ ಚರ್ಚಿಸುವಿರಿ. ದಿನದ ಕೊನೆಯಲ್ಲಿ ಸಂತೃಪ್ತಿ ಇರಲಿದೆ. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಿ. ನಿಮ್ಮ ನೋವಿಗೆ ಯಾರಾದರೂ ಸ್ಪಂದಸುವರು. ಕಷ್ಟಕ್ಕೆ ಸ್ಪಂದಿಸುವ ಮನೋಭಾವವಿರಲಿ. ಸಂಗಾತಿಯ ಖರ್ಚನ್ನು ನಿಭಾಯಿಸುವ ಜವಾಬ್ದಾರಿಯನ್ನು ನೀವೇ ಹೊರಬೇಕಾದೀತು.

ಕಟಕ

ನೀವು ಉದ್ಯೋಗದ ಕಾರಣಕ್ಕೆ ಬೇರೆ ಕಡೆಗೆ ಹೋಗುವಿರಿ. ನಿಮ್ಮ ನಡವಳಿಕೆಯಿಂದ ಮೇಲಧಿಕಾರಿಗಳಿಗೆ ಅಸಮಾಧಾನವಾಗಲಿದೆ. ನಿಮ್ಮ ಸ್ಪಷ್ಟ ನಿರ್ಧಾರವನ್ನು ಮನೆಯಲ್ಲಿ ಹೇಳಿ. ಗೊಂದಲ ಮಾಡಿಕೊಂಡು ಇರಬೇಡಿ. ಬುದ್ಧಿವಂತರೆಂಬ ಅಹಂಕಾರ ಬೇಡ. ಎಡವಿ ಬೀಳುವ ಮೊದಲು ಎಚ್ಚರವಹಿಸಿ. ನಿಮ್ಮ ಪ್ರೇಮ ವಿಚಾರವನ್ನು ಕೇಳಿ ಮನೆಯಲ್ಲಿ ಆಶ್ಚರ್ಯವಾಗಬಹುದು. ಅವರು ಇದನ್ನು ಒಪ್ಪದೇ ಇರಬಹುದು. ಅದಕ್ಕಾಗಿ ನಿಮ್ಮದೇ ನಿರ್ಧಾರ ತೆಗೆದುಕೊಳ್ಳಬೇಡಿ. ವಾತಾವರಣ ತಿಳಿಯಾದ ಮೇಲೆ ಆ ಬಗ್ಗೆ ಚರ್ಚಿಸಿ. ಅಪರಿಚಿತರಿಗೆ ಸಹಾಯ ಮಾಡಲಿದ್ದೀರಿ. ರಾಜಕೀಯ ವ್ಯಕ್ತಿಗಳಿಗೆ ಜನಮನ್ನಣೆ ಹೆಚ್ಚಾಗುವುದು. ಅತಿಯಾಗಿ ಯಾವುದು ಸಿಕ್ಕರೂ ಅದು ತೊಂದರೆಯೇ. ಅಲ್ಪ ಪ್ರಯಾಣದಿಂದಲೂ ನಿಮಗೆ ಆಯಾಸವಾಗಬಹುದು. ಕೆಲವು ವಿಚಾರಗಳಲ್ಲಿ ಕುತೂಹಲ ಇರಲಿದೆ. ದಾಂಪತ್ಯದಲ್ಲಿರುವ ಹೊಂದಾಣಿಕೆಯ ಕೊರತೆ ಕಡಿಮೆ ಮಾಡಿಕೊಳ್ಳಿ.

ಸಿಂಹ

ಉದ್ಯೋಗದಲ್ಲಿ ನಿಮಗೆ ಬದಲಾವಣೆ ಬೇಕು ಎಂದೆನಿಸುವುದು. ಅಪರಿಚಿತ ದೂರವಾಣಿಯ ಕರೆಯಿಂದ ನಿಮಗೆ ಲಾಭವಾಗುವುದು. ವಿದೇಶಿ ವ್ಯಾಪಾರದ ಕುರಿತು ಚರ್ಚಿಸುವಿರಿ. ನಿಮ್ಮ ಭೂಮಿಯು ಸರ್ಕಾರದ ಪಾಲಾಗಬಹುದು. ಅಧಿಕಾರಿಗಳು ನಿಮ್ಮ ಆದಾಯವನ್ನು, ವೃತ್ತಿಯನ್ನು ವಿಚಾರಿಸುವ ಸಾಧ್ಯತೆಯಿದೆ. ಸರಿಯಾದ ಮಾಹಿತಿ ನೀಡಿ. ಇನ್ನೊಬ್ಬರ ಬಗ್ಗೆ ನಿಮ್ಮ ಭಾವನೆಯನ್ನು ಬದಲಿಸಿಕೊಳ್ಳುವುದು ಉತ್ತಮ. ನಿಮಗೆ ಸಂಬಂಧವಿಲ್ಲದ ಕಾರ್ಯವನ್ನೇ ಮಾಡಬೇಕಾಗುವುದು. ಕೆಲಸ ಮುಗಿಯದ ಆತಂಕ ಇರಲಿದೆ. ಏಕಾಂತವನ್ನು ಇಷ್ಟಪಡುವಿರಿ.‌ ಉದ್ಯೋಗದಿಂದ ಬಂದವರೇ ಉದ್ಯಾನವನಕ್ಕೆ ಹೋಗಿ ಧ್ಯಾನಸ್ಥರಾಗುವಿರಿ. ಹಳೆಯ ಸ್ನೇಹಿತರು ಅಕಸ್ಮಾತ್ ಸಿಗಬಹುದು. ಸುಖಜೀವನದ ನಿರೀಕ್ಷೆಯಲ್ಲಿರುವಿರಿ. ಸಮಾರಂಭಗಳಿಗೆ ಆಹ್ವಾನವಿದ್ದರೂ ಹೋಗುವ ಮನಸ್ಸಾಗದು. ಲೆಕ್ಕಪತ್ರದ ವ್ಯವಹಾರದಲ್ಲಿ ಕಲಹವಾಗವುದು. ಯಾರನ್ನೂ ನಿಂದಿಸುವ ಮನೋಭಾವ ಬೇಡ.

ಕನ್ಯಾ

ದಾಂಪತ್ಯದಲ್ಲಿ ಕಲಹ ಸಹಜವೆಂದು ನೀವು ಸುಮ್ಮನಿರಬೇಡಿ. ಬೇಕಾದ ಪರಿಹಾರವೂ ಅಗತ್ಯ. ಹಿರಿಯರಿಂದ ಅವಮಾನವಾಗುವ ಸಾಧ್ಯತೆ ಇದೆ. ಆಪ್ತರ ಜತೆ ಹಣದ ವಿಚಾರವಾಗಿ ಕಲಹವಾಗಲಿದೆ. ಪತ್ನಿಗೋಸ್ಕರ ಚಿನ್ನ ಖರೀದಿಸುವಿರಿ. ಮೋಸಗಾರರು ನಿಮ್ಮ ಜತೆಗೇ ಇರುವರು, ಗುರುತಿಸಿಕೊಳ್ಳಿ. ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳು ಸಹಾಯ ಮಾಡುವರು. ಎಲ್ಲವನ್ನೂ ದೈವದಿಂದ ಮಾಡಲಾಗದು. ನಿಮ್ಮ ಪ್ರಯತ್ನವೂ ಬೇಕು. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲ ಉಂಟಾಗಬಹುದು. ನಿಮ್ಮ ತಪ್ಪಿಗೆ ಮತ್ಯಾರನ್ನೋ ತೋರಿಸುವಿರಿ. ಆರೋಗ್ಯ ಹದಗೆಡಬಹುದು. ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಾಣಲಿದ್ದು ಕುಟುಂಬದಲ್ಲಿ ಅಸಮಾಧಾನ ಇರಲಿದೆ. ಎಲ್ಲವನ್ನೂ ನೀವು ನಿಮ್ಮ ಊಹೆಯ ಆಧಾರದ ಮೇಲೆ ನಿರ್ಣಯಿಸುವಿರಿ. ನಿಮ್ಮ ಉನ್ನತ ಶಿಕ್ಷಣದ ಆಸೆ ಭಗ್ನವಾಗಬಹುದು. ಆಸ್ತಿಯ ಬಗೆಗಿನ ಮಾತು ತಾರಕಕ್ಕೇರಬಹುದು.

ತುಲಾ

ಆಳ ಅರಿಯದೆ ನೀರಿಗೆ ಇಳಿದರೆ ಏನಾಗಬಹುದು? ಎಲ್ಲವೂ ಹಾಗೆಯೇ. ಬಂಧುಗಳ ಮನೆಗೆ ಹೋಗಿ ಬರಲಿದ್ದೀರಿ. ಧನಸಂಗ್ರಹದ ವಿಚಾರ ನಿಮ್ಮ ದಾರಿಯು ಸರಿಯಾಗಿದೆ ಎಂದು ನಿಮ್ಮವರಿಗೆ ಅನ್ನಿಸಬಹುದು. ಕಷ್ಟದಿಂದ ಸಂಪಾದಿಸಿದ ಹಣದ ಸ್ವಲ್ಪ ಭಾಗ ಖರ್ಚಾಗಲಿದೆ. ಹಣವೊಂದೇ ಮುಖ್ಯ ಎನ್ನುವ ನಿರ್ಧಾರಕ್ಕೆ ಬರುವುದು ಸರಿಯಲ್ಲ. ಯಾರಾದರೂ ಕಾನೂನುಬಾಹಿರ ಕಾರ್ಯಕ್ಕೆ ಪ್ರಲೋಭನೆ ಕೊಡಬಹುದು. ಮಾತಿನ ಬಗ್ಗೆ ಆದಷ್ಟು ಗಮನವಿರಲಿ. ಏನನ್ನಾದರೂ ಹೇಳಿ ಅಪಮಾನಕ್ಕೆ ಸಿಲುಕಬಹುದು. ಮನೆಯಲ್ಲಿಯೇ ಕುಳಿತು ಬೇಸರವಾದೀತು. ಪ್ರತೀಕಾರ ಬುದ್ಧಿಯನ್ನು ಬಿಡುವುದು ಉತ್ತಮ.‌ ನಿಮ್ಮ ಕೆಲಸದ ಕಡೆ ಗಮನ ಹೆಚ್ಚಿರಲಿ. ನಿಮ್ಮ ಪ್ರಯತ್ನಕ್ಕೆ ಇಂದೇ ಫಲವು ಸಿಗಬೇಕೆಂಬ ಆತುರ ಬೇಡ. ನಿಮ್ಮನ್ನು ದ್ವೇಷಿಸುವ ಜನರನ್ನು ನೀವು ನಿರ್ಲಕ್ಷಿಸಿ ಮುನ್ನಡೆಯಿರಿ.

ವೃಶ್ಚಿಕ

ನೀವು ಮುಂದೆ ಮಾಡಬೇಕಾದ ಕೆಲವು ಕಾರ್ಯಗಳ ನಿರ್ಧಾರ ಮಾಡುವಿರಿ. ದೂರ ಪ್ರಯಾಣವು ನಿಮಗೆ ಕಷ್ಟವಾಗಬಹುದು. ತಪ್ಪುಗಳು ನಿಮ್ಮ ಸ್ವಭಾವವನ್ನು ತೋರಿಸುವುದು. ನೀವಿಂದು ಕೋಪವನ್ನು ನಿಯಂತ್ರಣಕ್ಕೆ ತರುವುದು ಬಹಳ ಮುಖ್ಯ.‌ ಅಜಾಗರೂಕರಾಗಿರಬೇಡಿ. ಯಾಂತ್ರಿಕತೆಯಿಂದ ನಿಮಗೆ ಬಿಡುಗಡೆ ಬೇಕು ಎನಿಸಬಹುದು. ನಿಮ್ಮನ್ನು ಹತ್ತಾರು ಕಣ್ಣುಗಳು ಗಮನಿಸುತ್ತಿರುತ್ತವೆ. ಸಂಪಾದನೆಗೆ ದಾರಿಗಳು ಅನೇಕವಿದ್ದರೂ ನೀವು ಉತ್ತಮವಾದ ಒಂದನ್ನು ಆರಿಸಿಕೊಂಡು ಮುಂದುವರಿಯಿರಿ. ಒಳ್ಳೆಯದರಲ್ಲಿಯೂ ಕೆಟ್ಟದ್ದನ್ನು ಹುಡುಕುತ್ತ ಇರಬೇಡಿ. ಸಹೋದ್ಯೋಗಿಗಳ ಮಾತನ್ನು ಸಹಿಸಿಕೊಳ್ಳಲು ಕಷ್ಟವಾಗದು. ವೇಗದಲ್ಲಿ ಸಿಗುವ ಯಶಸ್ಸೇ ನಿಮಗೆ ತೊಂದರೆ ಕೊಡುವುದು. ಸ್ನೇಹಿತರ ಜತೆ ಪ್ರವಾಸ ಹೋಗುವಿರಿ. ನಟರಿಗೆ ಅವಕಾಶ ಸಿಗಲಿದೆ. ಎಲ್ಲ ಘಟನೆಗಳನ್ನೂ ಒಂದೇ ರೀತಿಯಲ್ಲಿ ನೋಡುವುದು ಸರಿಯಾಗದು.

ಧನು

ಯಾವುದಾದರೂ ಹಣಕಾಸಿನ ಒಪ್ಪಂದ ಮಾಡಿಕೊಳ್ಳುವಾಗ ಎಚ್ಚರಿಕೆ ಇರಲಿ. ಭೂಮಿಯ ವ್ಯವಹಾರವು ನಿಮಗೆ ಲಾಭ ತರುವುದು. ನಿಮ್ಮ ಕೆಲಸದಿಂದ ನಿಮಗೆ ಅಪಮಾನವಾಗಲಿದೆ. ಇದು ನಿಮಗೆ ಬಹಳ ಮುಜುಗರ ತರಲಿದ್ದು, ಸಹಿಸಿಕೊಳ್ಳುವುದು ಕಷ್ಟವಾಗುವುದು. ತಂದೆಯ ವಿಚಾರದಲ್ಲಿ ನಿಮಗೆ ಸಿಟ್ಟು ಬರಬಹುದು. ಸರಳವಾಗಿ ಸಿಕ್ಕ ಉದ್ಯೋಗವನ್ನು ಬಿಟ್ಟು ನಿಮ್ಮದೇ ಕಲ್ಪನೆಯ ಉದ್ಯೋಗಕ್ಕೆ ಹುಡುಕಾಟ ನಡೆಸುವಿರಿ. ಸರಳ ಜೀವನವು ನಿಮಗೆ ಸಾಕಾಗಿರಬಹುದು. ಇಂದು ಮಾಡುವ ಕೆಲಸವನ್ನು ಮುಂದೂಡಬೇಡಿ. ಅದು ಎಂದೂ ಆಗದೇ ಹೋಗಬಹುದು. ಶತ್ರುವನ್ನು ಸೃಷ್ಟಿಸಿಕೊಳ್ಳುವ ಪ್ರಯತ್ನ ಬೇಡ. ಸತ್ಯವನ್ನು ಮುಚ್ಚಿಡುವ ಪ್ರಯತ್ನ ಮಾಡುವಿರಿ‌. ಬೇಕಾದಷ್ಟಕ್ಕೆ ಮಾತ್ರ ಹಣವನ್ನು ಖರ್ಚು ಮಾಡಿ. ನಿಮ್ಮವರಿಗೆ ನಿಮ್ಮ ನಡತೆಯಲ್ಲಿ ಬದಲಾವಣೆ ಕಂಡೀತು.

ಮಕರ

ನಿಮ್ಮ ಹಠದ ಸ್ವಭಾವಕ್ಕೆ ಎಲ್ಲರೂ ಒಗ್ಗುತ್ತಾರೆ ಎನ್ನಲಾಗದು. ನಿಮಗೆ ಬೇಕಾದುದನ್ನೇ ಮಾಡಿಕೊಳ್ಳುವ ಛಾತಿ ಇರಲಿದೆ. ಹಣಕಾಸಿನ ಕುರಿತು ಅತಿಯಾದ ಆಲೋಚನೆಯು ನಿಮ್ಮನ್ನು ಅತಿಯಾಗಿ ಕಾಡಬಹುದು. ಎಲ್ಲವನ್ನೂ ರಾಜಕೀಯಕ್ಕೆ ಬಳಸಿಕೊಳ್ಳುವುದು ಬೇಡ. ನಿಮ್ಮ ಮಾತು ಪ್ರಜೆಗಳ ಮನಸ್ಸಿಗೆ ಮುಟ್ಟಲಿದೆ. ಸಾಲವಾಗಿ ಯಾರಾದರೂ ಹಣವನ್ನು ಕೇಳಿದರೆ ಕೊಡಬೇಡಿ. ಅದು ದುರುಪಯೋಗವಾಗಿ ನಿಮಗೂ ಸಿಗದು. ಸಂಗಾತಿಯಿಂದ ನಿಮಗೆ ಸಂಪತ್ತು ಸಿಗಲಿದೆ. ನೂತನ ವಸ್ತ್ರಗಳನ್ನು ಖರೀದಿಸುವ ಮನಸ್ಸು ಮಾಡುವಿರಿ. ಹೊರಗಡೆ ಸುತ್ತಾಡಲು ಇಚ್ಛಿಸುವಿರಿ. ವಿದ್ಯಾರ್ಥಿಗಳು ಆಟದಲ್ಲಿ ಹೆಚ್ಚಿನ‌ ಸಮಯ ಕಳೆಯುವಿರಿ. ಅನ್ನಿಸಿದ್ದನ್ನು ಹೇಳಿ ಕೆಲವರಿಂದ ದೂರವಾಗುವಿರಿ. ನಿಮಗೆ ಅರ್ಥವಾಗದ ವಿಚಾರವನ್ನು ಬೇರೆಯವರ ಕಡೆಯಿಂದ ಪಡೆಕೊಳ್ಳುವಿರಿ.

ಕುಂಭ

ನೀವು ಪ್ರಾಮಾಣಿಕ ಎಂದು ತೋರಿಸಲು ಹೋಗಿ ಉದ್ಯೋಗದಲ್ಲಿ ತೊಂದರೆ ಮಾಡಿಕೊಳ್ಳುವಿರಿ. ಎಷ್ಟೋ ದಿನದ ಸಾಲಗಳು ಮುಕ್ತಾಯಗೊಳ್ಳುವುದು. ಸ್ತ್ರೀಯರು ನಿಮ್ಮ ಸಹಾಯಕ್ಕೆ ಬರುವರು‌. ಆರೋಗ್ಯದ ಮೇಲೆ ಗಮನವಿಟ್ಟು ಪ್ರಯಾಣ ಮಾಡಿ. ಇಷ್ಟು ದಿನದ ರಹಸ್ಯವು ಮನೆಯಲ್ಲಿ ಬಹಿರಂಗವಾದೀತು. ಕೇಳಿದರಷ್ಟೇ ಹೇಳಿ, ಯಾರಿಗೂ ಸುಮ್ಮನೇ ಉಪದೇಶ ಮಾಡಬೇಡಿ.‌ ಬಂಧುಗಳು ನಿಮ್ಮನ್ನು ಅಪಹಾಸ್ಯ ಮಾಡಿಯಾರು. ನಿಮಗೆ ಅಸ್ತಿತ್ವ ಎಷ್ಟು ಮುಖ್ಯ ಎನ್ನುವುದನ್ನು ನೀವು ತಿಳಿಸುವ ಅವಶ್ಯಕತೆ ಇಲ್ಲ. ನಿಧಾನವಾಗಿ ಮುಂದಿನ ಜೀವನದ ಜೀವನದ ಬಗ್ಗೆ ಗಮನಹರಿಸಿ. ತಾಯಿಯ ಮೇಲೆ ನೀವು ಸಿಟ್ಟಾಗಬಹುದು. ಖುಷಿಯನ್ನು ನೀವು ಹಂಚಿಕೊಳ್ಳುವ ಮನಸ್ಸು ಮಾಡುವಿರಿ. ಎಲ್ಲದರಲ್ಲಿಯೂ ತಪ್ಪನ್ನು ಹುಡುಕುತ್ತ ಕಾಲಹರಣ ಮಾಡುವುದು ಬೇಡ. ಮನೆ ಹುಡುಕಾಟಕ್ಕೆ ತಿರುಗಾಟ ಮಾಡಲಿದ್ದೀರಿ.

ಮೀನ

ನೀವು ಯಾವುದೇ ಉದ್ವೇಗಕ್ಕೆ ಒಳಗಾಗದೇ ಶಾಂತವಾಗಿ ಇರಬೇಕು ಎನ್ನುವುದನ್ನು ನಿರ್ಧರಿಸುವಿರಿ. ನಿಮ್ಮ ತಮಾಷೆಯಿಂದ ಇನ್ನೊಬ್ಬರಿಗೆ ನೋವುಂಟಾಗಬಹುದು. ನಿಮ್ಮ ಕೆಲಸವು ಬಹಳ ಶ್ರಮದಿಂದ ಕೂಡಿದ್ದು, ಅದಕ್ಕೆ ತಕ್ಕ ಫಲವು ಸಿಗದೇ ಇರಬಹುದು. ಉದ್ಯೋಗದಲ್ಲಿ ನಿಮಗೆ ಕೊಟ್ಟ ಜವಾಬ್ದಾರಿ ಸ್ಥಾನವವನ್ನು ನೀವಾಗಿಯೇ ಬಿಟ್ಟುಕೊಡಲಿದ್ದೀರಿ. ಎಲ್ಲರನ್ನೂ ಸಮಭಾವದಿಂದ ನೋಡಲು ಆಗದಿದ್ದರೂ ಅದು ಅನಿವಾರ್ಯ ಆಗುವುದು. ಅಕಸ್ಮಾತ್ ಆಗಿ ದೊರೆತ ಅಮೂಲ್ಯವಾದ ವಸ್ತುವನ್ನು ಜೋಪಾನವಾಗಿ ಇಟ್ಟುಕೊಳ್ಳಿ. ವಾತಾವರಣವು ಬದಲಾಗಿ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ನಿಮ್ಮ‌ ಸಾಲವು ತೀರಲು ಬಂಧುಗಳು ಸಹಾಯ ಮಾಡುವರು. ಬೇರೆಯಾದ ಮನಸ್ಸನ್ನು ಒಟ್ಟು ಸೇರಿಸಲಿದ್ದೀರಿ. ಆರೋಗ್ಯದ ರಹಸ್ಯವನ್ನು ಇತರರಿಗೂ ತಿಳಿಸುವಿರಿ. ಸಹೋದರರ ಜತೆ ಮನೆಯ ಆಸ್ತಿಯ ಬಗ್ಗೆ ಚರ್ಚಿಸುವಿರಿ.

TAGGED:Gemini- Unreasonable exception to women Sagittarius- Be careful about finances what is your zodiac sign today newsics
Share This Article
Facebook Twitter Copy Link Print
Previous Article ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು
Next Article ರಸ್ತೆಗಳು ಸುಸ್ಥಿತಿಯಲ್ಲಿದ್ದರೆ ಮಾತ್ರ ಟೋಲ್: ಹೆದ್ದಾರಿ ಏಜೆನ್ಸಿಗಳಿಗೆ ಸಚಿವ ಗಡ್ಕರಿ ಸೂಚನೆ

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಪ್ರಮುಖಪಂಚಾಂಗ

Panchak ನಾಳೆಯಿಂದ 5 ದಿನ ಈ ಕೆಲಸ ಮಾಡಬೇಡಿ, ಪಂಚಕದಿಂದ ಸಮಸ್ಯೆ ಫಿಕ್ಸ್

2 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

Today’s Horoscope ಇಂದಿನ ರಾಶಿ ಭವಿಷ್ಯ 01-06-2026, ಸೋಮವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

4 Min Read
ಜ್ಯೋತಿಷ್ಯಪಂಚಾಂಗಪ್ರಮುಖ

VASTU ಈ ಗಿಡಗಳನ್ನು ಯಾವತ್ತೂ ಗಿಫ್ಟ್ ಕೊಡಬೇಡಿ, ಇದರಿಂದ ಅಪಾಯವೇ ಹೆಚ್ಚು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?