newsics.com
ಬರೇಲಿ: ಬಿರಿಯಾನಿಯಲ್ಲಿ ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂಬ ಕಾರಣಕ್ಕೆ ಹೊಡೆದಾಟ ನಡೆದು ಮದುವೆ ಮನೆ ರಣಾಂಗಣವಾದ ಘಟನೆ ಉತ್ತರಪ್ರದೇಶದ ಬರೇಲಿಯ ನವಾಬ್‌ಗಂಜ್ ಬಳಿ ನಡೆದಿದೆ.
ಆದರೆ ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯವರು ಪೊಲೀಸರಿಗೆ ದೂರು ನೀಡಿಲ್ಲ ಎಂದು ನವಾಬ್‌ಗಂಜ್ ಪೊಲೀಸರು ಹೇಳಿದ್ದಾರೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಪರಸ್ಪರರತ್ತ ಚೇರ್ ಎಸೆದು ಹೊಡೆದಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಗಂಡಿನ ಕಡೆಯವರು ಚಿಕನ್ ಬಿರಿಯಾನಿಯಲ್ಲಿ ಲೆಗ್ ಫೀಸ್( ಕೋಳಿ ಕಾಲು) ಇಲ್ಲ ಎಂದು ಆಕ್ಷೇಪವೆತ್ತಿದ್ದು, ಇದರಿಂದ ಸಿಟ್ಟಿಗೆದ್ದ ಹುಡುಗಿ ಕಡೆಯವರು, ವರನ ಕುಟುಂಬದವರು ಹಾಗೂ ಸಂಬಂಧಿಗಳನ್ನು ಹೊಡೆದಿದ್ದಾರೆ.
ಘಟನೆಯಿಂದ ಸಿಟ್ಟಿಗೆದ್ದ ವರನ ಕಡೆಯವರು ಮದುವೆ ಪ್ರಕ್ರಿಯೆ ಮುಂದುವರಿಸುವುದಕ್ಕೆ ನಿರಾಕರಿಸಿದ್ದಾರೆ. ಆದರೆ ನಂತರದಲ್ಲಿ ಅಲ್ಲಿದ್ದ ಸಂಬಂಧಿಗಳು ಹಿರಿಯರು ಸೇರಿ ಮನವೊಲಿಸಿದ ನಂತರ ಎರಡೂ ಕುಟುಂಬಗಳು ಮನವೊಲಿಕೆ ಮಾಡಿ ಮದುವೆ ಶಾಸ್ತ್ರ ಮುಂದುವರಿಸಿದ್ದಾರೆ.
ಈ ಗಲಾಟೆಯಲ್ಲಿ ವರನೂ ಸೇರಿಕೊಂಡಿದ್ದು, ಯಾರೋ ಈ ಘಟನೆಯನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
Bareilly, UP.
Chicken leg pieces in the biryani got over at the wedding dawaat.
So, the groom and his guests were served kicks, punches, and flying chairs.pic.twitter.com/rhmxIAw35m— Abhijit Majumder (@abhijitmajumder) June 24, 2024
ಎಡವಟ್ಟಾಯ್ತು ರೀಲ್ಸ್ ಸ್ಟಂಟ್: ವಿದ್ಯಾರ್ಥಿನಿಯ ಡಿಸ್ಕ್‌ಗೆ ಹಾನಿ, ಆಸ್ಪತ್ರೆಗೆ ದಾಖಲು, ವೈರಲ್ ವಿಡಿಯೋ ನೋಡಿ
ಕೇರಳ ಇನ್ಮುಂದೆ ಕೇರಳಂ: ಹೆಸರು ಬದಲಾವಣೆ ಪ್ರಸ್ತಾವನೆಗೆ 2ನೇ ಬಾರಿ ವಿಧಾನಸಭೆ ಅಂಗೀಕಾರ