Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ದಿನ ಭವಿಷ್ಯ > ದಿನ ಭವಿಷ್ಯ… ಮಿಥುನ- ಪ್ರಾಣಿಗಳಿಂದ ಹಾನಿ, ಧನಸ್ಸು- ಹೊಗಳಿಕೆ ಮಾತಿನಿಂದ ತೊಂದರೆ, ನಿಮ್ಮ ರಾಶಿಯಲ್ಲೇನಿದೆ?
ದಿನ ಭವಿಷ್ಯಪಂಚಾಂಗ

ದಿನ ಭವಿಷ್ಯ… ಮಿಥುನ- ಪ್ರಾಣಿಗಳಿಂದ ಹಾನಿ, ಧನಸ್ಸು- ಹೊಗಳಿಕೆ ಮಾತಿನಿಂದ ತೊಂದರೆ, ನಿಮ್ಮ ರಾಶಿಯಲ್ಲೇನಿದೆ?

Share
4 Min Read
SHARE

newsics.com

ದಿನ ಭವಿಷ್ಯ

24 ಜೂನ್ 2024

ಮೇಷ

ಹಠದಿಂದ ಕುಟುಂಬದವರ ಅವಕೃಪೆಗೆ ಗುರಿಯಾಗುವಿರಿ. ಸದಾ ನಿಮ್ಮಲ್ಲಿ ಉತ್ಸಾಹ ಮತ್ತು ಲವಲವಿಕೆ ಕಂಡುಬರುತ್ತದೆ. ಉತ್ಸಾಹದಿಂದ ಬೇರೆಯವರ ಜವಾಬ್ದಾರಿಯನ್ನೂ ನಿರ್ವಹಿಸುತ್ತೀರಿ. ಆದರೆ, ನಿಮ್ಮಲ್ಲಿರುವ ಗುಟ್ಟನ್ನು ಉಳಿಸಿಕೊಳ್ಳಲು ವಿಫಲರಾಗುವಿರಿ. ನಿಮ್ಮನ್ನು ನಂಬಿ ಬಂದವರಿಗೆ ಸಹಾಯ ಮಾಡುವಿರಿ. ದಾನ ಧರ್ಮ ಕಾರ್ಯದಲ್ಲಿ ನಿರತರಾಗುವಿರಿ. ಎಲ್ಲರನ್ನೂ ಸೋದರ ಪ್ರೇಮದಿಂದ ಕಾಣುವಿರಿ. ಆದರೆ ನಿಮ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳುವವರು ಕಡಿಮೆ.

ವೃಷಭ

ನಿಮ್ಮಲ್ಲಿ ಸಹನೆ ಮತ್ತು ನಾಯಕತ್ವದ ಗುಣಗಳಿವೆ. ಆದರೆ ಎಲ್ಲರೊಡನೆ ನಿಷ್ಠುರವಾಗಿ ನಡೆದುಕೊಳ್ಳುವಿರಿ. ಇದರಿಂದ ಅನಾವಶ್ಯಕ ವಾದ ವಿವಾದಗಳು ಉಂಟಾಗುತ್ತವೆ. ಅನಾರೋಗ್ಯವಿರುತ್ತದೆ. ಸದಾ ಕಾಲ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ಚಿಂತೆ ಇರುತ್ತದೆ. ಕರುಳಿನ ತೊಂದರೆ ನಿಮ್ಮನ್ನು ಬಾಧಿಸಬಹುದು. ನಿಮ್ಮ ಆಪ್ತ ಸ್ನೇಹಿತರಿಂದಲೇ ನಿಮ್ಮ ಕೆಲಸ ಕಾರ್ಯಗಳಿಗೆ ತೊಡಕುಂಟಾಗುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆಯಿಲ್ಲ.

ಮಿಥುನ

ಪ್ರಾಣಿಗಳಿಂದ ಹಾನಿ ಇದೆ. ಮೂತ್ರದ ಸೋಂಕು ನಿಮ್ಮನ್ನು ಬಾಧಿಸಲಿದೆ. ಬಂಧು- ಬಳಗದವರೊಬ್ಬರಿಂದ ನಿಮ್ಮ ಪ್ರಗತಿಗೆ ಅಡಚಣೆ ಉಂಟಾಗುತ್ತದೆ. ಸಮಾಜದ ಶ್ರೇಷ್ಠ ಪದವಿ ಪುರಸ್ಕಾರ ನಿಮಗೆ ದೊರೆಯಲಿದೆ. ಕುಟುಂಬದಲ್ಲಿ ಪರಸ್ಪರ ಬೇಧ ಭಾವದ ವಾತಾವರಣ ಉಂಟಾಗುತ್ತದೆ. ಸಂಬಂಧಿಕರ ಜತೆ ನಡೆಯಬೇಕಾದ ವಿವಾಹ ಮುಂದೂಡಲ್ಪಡುತ್ತದೆ. ಹೊಸ ವಾಹನ ಕೊಳ್ಳುವಿರಿ. ಆದಾಯದ ಮಿತಿಗಿಂತಲೂ ಹೆಚ್ಚಿನ ಖರ್ಚು ವೆಚ್ಚ ತಲೆದೋರುತ್ತದೆ. ಹಣದ ಕೊರತೆ ಉಂಟಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಯಾರನ್ನೂ ನಂಬುವುದಿಲ್ಲ. ನಿಮಗೆ ಪ್ರವಾಸ ಇಷ್ಟ. ಆದರೆ ಪ್ರಯಾಣ ಸಾಧ್ಯವಾಗುವುದಿಲ್ಲ.

ಕಟಕ
ನಿಮ್ಮ ಚುರುಕುತನ ಮೆಚ್ಚಿ ಸ್ನೇಹಿತರೊಬ್ಬರು ಸಹಾಯ ಮಾಡುತ್ತಾರೆ. ನಿಮ್ಮ ಜೀವನದಲ್ಲಿ ಪ್ರಮುಖ ಬದಲಾವಣೆಗಳು ಕಾಣಲಿವೆ. ನಿಮ್ಮಲ್ಲಿನ ಜಾಣ್ಮೆಯ ನಡೆ ನುಡಿ ಜೀವನದಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ. ಅಡೆತಡೆಗಳನ್ನು ನಿವಾರಿಸಿಕೊಳ್ಳುವಿರಿ. ಯಾರ ಸಹಾಯವನ್ನೂ ಬಯಸುವುದಿಲ್ಲ. ಅಲಂಕಾರಕ್ಕೆ ವೇಳೆಯನ್ನು ಮೀಸಲಿಡುತ್ತಾರೆ. ಹೊಸ ವಿಚಾರಗಳನ್ನು ಕಲಿಯಬೇಕೆಂಬ ಮನಸಿರುತ್ತದೆ.

ಸಿಂಹ

ಸಮಯ ವ್ಯರ್ಥ ಮಾಡದೆ ಕೆಲಸ ಕಾರ್ಯದಲ್ಲಿ ನಿರತರಾಗುವಿರಿ. ಗೃಹಿಣಿಯರಿಗೆ ವಿಶೇಷ ಅನುಕೂಲತೆಗಳು ದೊರೆಯುತ್ತವೆ. ಬಂಧು ಬಳಗದವರ ಜತೆ ಉತ್ತಮ ಅನುಬಂಧ ಇರುತ್ತದೆ. ಅದರೆ ನಿಮ್ಮ ಮೇಲೆ ಅದೇ ಭಾವನೆ ಅವರಿಗಿರುವುದಿಲ್ಲ. ಕಷ್ಟ ನಷ್ಟದ ಸಂದರ್ಭದಲ್ಲಿ ಬುದ್ಧಿವಂತಿಕೆಯಿಂದ ಪಾರಾಗುವಿರಿ. ಕುಟುಂಬದಲ್ಲಿ ಅನಗತ್ಯ ಮನಸ್ತಾಪ ಇರುತ್ತದೆ. ಅತಿಯಾದ ಊಹೆ ಸಮಸ್ಯೆಗೆ ಕಾರಣವಾಗುತ್ತದೆ. ಉತ್ತಮ ಆದಾಯವಿದ್ದರೂ ಹಣವನ್ನು ಉಳಿಸಲು ವಿಫಲರಾಗುವಿರಿ.

ಕನ್ಯಾ
ನಿಮ್ಮ ಪ್ರಾಮಾಣಿಕತೆಗೆ ಎಲ್ಲರ ಮೆಚ್ಚುಗೆ ಸಿಗುತ್ತದೆ. ಉದ್ಯೋಗದಲ್ಲಿ ನಿಮ್ಮಲ್ಲಿನ ಕಾರ್ಯದಕ್ಷತೆಗೆ ಉನ್ನತ ಗೌರವ ದೊರೆಯುತ್ತದೆ. ಬೇರೊಬ್ಬರ ಅಧೀನಕ್ಕೆ ಒಳಪಡದ ಸ್ವತಂತ್ರ ಜೀವನ ಇಷ್ಟಪಡುವಿರಿ. ಕುಟುಂಬದಲ್ಲಿ ಸದಾ ಕಾಲ ಸಂತೋಷ ಸಂಭ್ರಮವಿರಲು ಕಾರಣರಾಗುವಿರಿ. ನೆರೆಹೊರೆಯವರ ಜತೆ ಉತ್ತಮ ಸ್ನೇಹ, ನಂಬಿಕೆ ಇರುತ್ತದೆ. ಸತ್ಯ ಹೇಳಲು ಇಷ್ಟಪಡುವಿರಿ. ಶಿಸ್ತುಬದ್ಧ ಜೀವನದಿಂದ ಎಲ್ಲರ ಗಮನ ಸೆಳೆಯುವಿರಿ. ನೀವಿರುವ ಕಡೆ ಹಾಸ್ಯಕ್ಕೆ ಬರವಿಲ್ಲ.

ತುಲಾ
ನಿಮ್ಮ ಕುಟುಂಬವಲ್ಲದೆ ಸುತ್ತಮುತ್ತಲಿನ ವಾತಾವರಣ ಸಂತೋಷವಾಗಿರಲು ಕಾರಣವಾಗುವಿರಿ. ಹೊಗಳಿಕೆಗೆ ಮರುಳಾಗುವುದಿಲ್ಲ. ತಪ್ಪಾಗಿ ಅರ್ಥ ಮಾಡಿಕೊಂಡು ನೀವೇ ಅಪಾಯ ಆಹ್ವಾನಿಸಿಕೊಳ್ಳುತ್ತೀರಿ. ಯಾವುದೇ ಬೆದರಿಕೆಗೆ ಬಗ್ಗುವುದಿಲ್ಲ. ಅವಿವಾಹಿತರಿಗೆ ಸಂಬಂಧ ಅಥವಾ ಪರಿಚಯದವರೊಂದಿಗೆ ವಿವಾಹ ನಿಶ್ಚಯವಾಗುತ್ತದೆ. ನವದಂಪತಿಗೆ ವಿಶೇಷ ಅನುಕೂಲತೆಗಳು ದೊರೆಯಲಿವೆ. ಗೃಹಿಣಿಯರಿಗೆ ಅನಾರೋಗ್ಯ ಉಂಟಾಗುತ್ತದೆ. ವಾಹನ ಚಾಲನೆ ವೇಳೆ ಎಚ್ಚರಿಕೆ ಇರಲಿ. ಗಂಟಲಿನಲ್ಲಿ ತೊಂದರೆ ಉಂಟಾಗಬಹುದು. ಮಕ್ಕಳ ವಿದ್ಯಾಭ್ಯಾಸ ತೊಂದರೆ ಇಲ್ಲದೆ ನಿರಂತರವಾಗಿ ಸಾಗುತ್ತದೆ.

ವೃಶ್ಚಿಕ
ಶಿಸ್ತುಬದ್ಧ ಜೀವನ ಇಷ್ಟಪಡುವಿರಿ. ನಿಮ್ಮ ಮಕ್ಕಳಿಗೆ ಶಿಸ್ತಿನ ಪಾಠ ಕಲಿಸುವಿರಿ. ಆದರೆ ಸಣ್ಣ ಪುಟ್ಟ ತಪ್ಪಿಗೂ ಸಿಡುಕುವಿರಿ. ಶಾಂತಿ ಸಂಯಮ ಕಾಪಾಡಿಕೊಂಡರೆ ಯಶಸ್ಸಿನ ಜೀವನ ನಿಮ್ಮದಾಗುತ್ತದೆ. ನಿಮಗೆ ವಿಶೇಷ ಜನಾಕರ್ಷಕ ಶಕ್ತಿ ಇರುತ್ತದೆ. ಇತರರು ಅನುಕರಿಸಬೇಕಾದ ವಿಶೇಷ ಗುಣಗಳು ನಿಮ್ಮಲ್ಲಿರುತ್ತವೆ. ಸಹೋದ್ಯೋಗಿಗಳಿಗೆ ಸಹಾಯ ಮಾಡುವಿರಿ. ಕುಟುಂಬಕ್ಕೆ ಹಾನಿಯಾಗಲು ಬಿಡುವುದಿಲ್ಲ. ಹಣಕಾಸಿನ ತೊಂದರೆ ಇರುವುದಿಲ್ಲ. ಸಮಾಜದಲ್ಲಿ ನಿಮ್ಮ ಮಾತಿಗೆ ಗೌರವ ಲಭಿಸುತ್ತದೆ.

ಧನಸ್ಸು

ಹೊಗಳಿಕೆಯ ಮಾತುಗಳಿಗೆ ಮರುಳಾಗಿ ತೊಂದರೆ ಅನುಭವಿಸುವಿರಿ. ಸುಲಭವಾಗಿ ಮನಸ್ಸಿಟ್ಟು ಯಾವುದೇ ಕೆಲಸ ಆರಂಭಿಸುವುದಿಲ್ಲ. ಸೋಮಾರಿತನ ನಿಮ್ಮನ್ನು ಕಾಡುತ್ತದೆ. ತೆಗೆದುಕೊಂಡ ತೀರ್ಮಾನಗಳನ್ನು ಬದಲಾಯಿಸದೆ ಹೋದಲ್ಲಿ ಯಶಸ್ಸು ದೊರೆಯುತ್ತದೆ. ಕುಟುಂಬದಲ್ಲಿ ಉತ್ತಮ ಬಾಂಧವ್ಯ ಇರಲಿದೆ. ಸಂಗಾತಿಯಿಂದ ನಿಮಗೆ ಹಣದ ಸಹಾಯ ದೊರೆಯುತ್ತದೆ. ಕೈ ಕಾಲುಗಳಿಗೆ ಪೆಟ್ಟಾಗುವ ಸಂಭವವಿದೆ. ಕೋಪ ಬಂದಷ್ಟೇ ವೇಗವಾಗಿ ಮರೆಯಾಗುತ್ತದೆ. ಕುಟುಂಬದ ಸದಸ್ಯರ ಜತೆ ಕಿರು ಪ್ರವಾಸ ಕೈಗೊಳ್ಳುವಿರಿ.

ಮಕರ
ದಂಪತಿ ನಡುವೆ ಉತ್ತಮ ಬಾಂಧವ್ಯ ಇರುತ್ತದೆ. ವಿದ್ಯಾರ್ಥಿಗಳು ವಿನೂತನ ಸಾಧನೆ ಮಾಡಲಿದ್ದಾರೆ. ಮಕ್ಕಳಿಗೆ ಉದ್ಯೋಗ ಲಭಿಸಲಿದೆ. ಕಷ್ಟ- ನಷ್ಟಗಳು ಮರೆಯಾಗಲಿವೆ. ಸಮಾಜದ ಬಗ್ಗೆ ವಿಶೇಷ ಗೌರವ ಇರುತ್ತದೆ. ಸಮಾಜದ ನಾಯಕತ್ವ ನಿಮ್ಮದಾಗುತ್ತದೆ. ಧಾರ್ಮಿಕ ಆಚರಣೆಯಲ್ಲಿ ಆಸಕ್ತಿ ತೋರವಿರಿ. ನಿಮ್ಮ ಹಿರಿಯ ಅಧಿಕಾರಿಗಳು ಸಹ ನಿಮ್ಮನ್ನು ಗೌರವಿಸುತ್ತಾರೆ.

ಕುಂಭ

ನಿಮಗೆ ಒಪ್ಪಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ಕಷ್ಟಪಟ್ಟು ಕೆಲಸ ಮಾಡಲು ಹಿಂಜರಿಯುವುದಿಲ್ಲ. ಶಾಂತಿ ಸಂಯಮದಿಂದ ಜೀವನ ನಡೆಸುವಿರಿ. ಚಿಕ್ಕ ಮಕ್ಕಳು ಸಹ ತಂದೆಯೊಡನೆ ಕೆಲಸ ನಿರ್ವಹಿಸಲು ಆರಂಭಿಸುತ್ತಾರೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಜತೆ ಅನಾವಶ್ಯಕ ವಾದ ವಿವಾದ ಇರುತ್ತದೆ. ಸಹನೆಯಿಂದ ಬಾಳುವಿರಿ. ಆತ್ಮೀಯರ ಬಗ್ಗೆ ಸಂಶಯ ವ್ಯಕ್ತಪಡಿಸುವಿರಿ. ತಪ್ಪು ತಿಳುವಳಿಕೆಯಿಂದ ಹಣಕಾಸಿನ ವಿವಾದ ಎದುರಿಸಬೇಕಾಗುತ್ತದೆ. ಸಂಬಂಧಿಕರೊಬ್ಬರ ಸಹಾಯದಿಂದ ಎದುರಾಗುವ ಕಷ್ಟದಿಂದ ಪಾರಾಗುವಿರಿ. ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆಯಿರುತ್ತದೆ.

ಮೀನ
ಯಾವುದೇ ಹಂತದಲ್ಲಿಯೂ ಆರಂಭಿಸಿದ ಕೆಲಸ ಕಾರ್ಯಗಳನ್ನು ನಿಲ್ಲಿಸುವುದಿಲ್ಲ. ಆದರೆ ಅನಾವಶ್ಯಕವಾಗಿ ತೀರ್ಮಾನಗಳನ್ನು ಬದಲಿಸುವಿರಿ. ನಿಮ್ಮ ಮನಸ್ಸು ತಿಳಿ ನೀರಿನಂತೆ ಶುಭ್ರವಾಗಿರುತ್ತದೆ. ಆದರೆ ಮನಸ್ಸಿಟ್ಟು ಯಾವುದೇ ಕೆಲಸ ಮಾಡುವುದಿಲ್ಲ. ಹಿರಿಯ ಸೋದರಿ ಅಥವಾ ಸೋದರನಿಂದ ಅನುಕೂಲವಿರುತ್ತದೆ. ನಿಮಗೆ ಶೀತದಿಂದ ತಲೆನೋವು ಬರುವ ಸಾಧ್ಯತೆಗಳಿವೆ. ಬಂಧು-ಬಳಗದವರಿಂದ ಸಹಾಯ ದೊರೆಯುವುದಿಲ್ಲ. ಸಹಾಯ ಪಡೆದವರು ನಿಮ್ಮಿಂದ ದೂರ ಸರಿಯುತ್ತಾರೆ. ಸಂಗಾತಿ ಮತ್ತು ಮಕ್ಕಳ ಜತೆ ಮನರಂಜನಾ ಸ್ಥಳಕ್ಕೆ ಭೇಟಿ ನೀಡುವಿರಿ.

TAGGED:Day Prediction Gemini- Harm from animals Dhansus- Trouble from words of praise what is in your sign? horoscope newsics
Share This Article
Facebook Twitter Copy Link Print
Previous Article ರಾಜ್ಯದಲ್ಲಿ ಮುಂಗಾರು‌ ಮತ್ತಷ್ಟು ಚುರುಕು: ಇಂದು ಕರಾವಳಿ, ಮಲೆನಾಡಿನ 7 ಜಿಲ್ಲೆಗಳಿಗೆ ರೆಡ್ ಅಲರ್ಟ್
Next Article ಶುಭೋದಯ… ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ತೃತೀಯ, ಸೋಮವಾರ, 24‌ ಜೂನ್ 2024

Popular Posts

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read

You Might Also Like

ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read
ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read
ಪಂಚಾಂಗಆಲಾಪ

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?