newsics.com
ಅಮೆರಿಕ: ಪಾಕಿಸ್ತಾನದ ವೇಗದ ಬೌಲರ್ ಹಾರಿಸ್ ರೌಫ್ ಅಭಿಮಾನಿಯ ಸೆಲ್ಫಿ ತೆಗೆದುಕೊಳ್ಳುವ ಮನವಿ ತಿರಸ್ಕರಿಸಿದ್ದಲ್ಲದೆ ಆ ಅಭಿಮಾನಿಯನ್ನು ಹೊಡೆಯಲು ಮುಂದಾದ ಘಟನೆ ನಡೆದಿದೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಸ್ತುತ ನಡೆಯುತ್ತಿರುವ T20 ವಿಶ್ವಕಪ್‌ನ ಮೊದಲ ಸುತ್ತಿನಲ್ಲಿ ಪಾಕಿಸ್ತಾನ ಹೊರಬಿದ್ದ ನಂತರ ಹಾರಿಸ್ ರೌಫ್ ತನ್ನ ಕುಟುಂಬದೊಂದಿಗೆ ಯುಎಸ್‌ನಲ್ಲಿ ವಿಹಾರ ಮಾಡುತ್ತಿದ್ದಾರೆ.
ಪಾರ್ಕ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸೆಲ್ಫಿ ಕುರಿತಂತೆ ಅಭಿಮಾನಿ ಹಾಗೂ ಹಾರಿಸ್ ರೌಫ್ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಕೆರಳಿದ ಹ್ಯಾರಿಸ್ ಓಡಿಬಂದು ಅಭಿಮಾನಿ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾನೆ. ಈ ವೇಳೆ ಪತ್ನಿ ಹಾರಿಸ್ ರೌಫ್‌ನನ್ನು ತಡೆಯಲು ಎಷ್ಟೇ ಪ್ರಯತ್ನಿಸಿದರೂ ಆಕೆಯ ಕೈಗಳಿಂದ ಬಿಡಿಸಿಕೊಂಡು ಬಂದ ರೌಫ್ ಅಭಿಮಾನಿ ಮೇಲೆ ಹಲ್ಲೆಗೆ ಮುಂದಾಗುತ್ತಾರೆ. ಈ ವೇಳೆ ಅಲ್ಲೇ ಇದ್ದ ಕೆಲವರು ರೌಫ್‌ನನ್ನು ತಡೆದಿದ್ದಾರೆ.
ಈ ವೇಳೆ ರೌಫ್ ಮತ್ತು ವ್ಯಕ್ತಿಯು ಬೈದಾಡಿಕೊಂಡಿದ್ದಾರೆ. ಸಂಭಾಷಣೆಯ ವೇಳೆ, ಹಾರಿಸ್ ರೌಫ್ ಅಭಿಮಾನಿಗೆ ‘ತೇರಾ ಇಂಡಿಯಾ ನಹೀ ಹೈ ಯೇ'(ಇದು ನಿನ್ನ ಭಾರತ ಅಲ್ಲ) ಎಂದು ಕೂಗುತ್ತಾನೆ. ಅದಕ್ಕೆ ಅಭಿಮಾನಿ “ಪಾಕಿಸ್ತಾನ್ ಸೆ ಹೂನ್”(ನಾನು ಪಾಕಿಸ್ತಾನದವನು) ಎಂದು ಉತ್ತರಿಸುತ್ತಾನೆ.
ಟಿ20 ವಿಶ್ವಕಪ್‌ನಲ್ಲಿ ಹಾರಿಸ್ ರೌಫ್ ಪಾಕಿಸ್ತಾನ ತಂಡದ ಭಾಗವಾಗಿದ್ದರು. ಗ್ರೂಪ್ ಹಂತದಲ್ಲಿ ಅಮೆರಿಕ ಮತ್ತು ಭಾರತ ವಿರುದ್ಧ ಸೋತ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಟೂರ್ನಿಯಲ್ಲಿ ಕೆನಡಾ ಮತ್ತು ಐರ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು.
ಹಾರಿಸ್ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಹಾರಿಸ್ ವಿರುದ್ಧ ಟೀಕೆಗಳ ಸುರಿಮಳೆಯಾಗುತ್ತಿದೆ.
Heat wave ತಾಪಮಾನ ಹೆಚ್ಚಳ, ದೆಹಲಿಯಲ್ಲಿ 50ಕ್ಕೂ ಹೆಚ್ಚು ಮಂದಿ ಸಾವು, ನೆರವಿಗೆ ಮುಂದಾದ ಕೇಂದ್ರ
ಜುಲೈ 22ಕ್ಕೆ ಕೇಂದ್ರ ಬಜೆಟ್ ಮಂಡನೆ ಸಾಧ್ಯತೆ, ದಾಖಲೆ ಮುರಿಯಲು ನಿರ್ಮಲಾ ಸೀತಾರಾಮನ್ ಸಜ್ಜು