newsics.com/ನ್ಯೂಸಿಕ್ಸ್
ಸ್ಯಾಂಡಲ್ ವುಡ್ನ ಸ್ಟಾರ್ ನಟ ದರ್ಶನ್ಗೆ ಇದೆಂಥಾ ಸ್ಥಿತಿ ಬಂದಿದೆ ಅಂದ್ರೆ. ಹೊರಗೆ ಐಷಾರಾಮಿ ಬದುಕು ಕಂಡಿದ್ದ ದಾಸ, ಈಗ ಕಂಬಿ ಹಿಂದೆ ಕಣ್ಣೀರು ಹಾಕ್ತಿದ್ದಾರೆ.
ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ 23ನೇ ವಿವಾಹ ವಾರ್ಷಿಕೋತ್ಸವ. ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ಅವರು ಇಂದು ಮಧ್ಯಾಹ್ನ ಪುತ್ರ ವಿನೀಶ್ ಜೊತೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದರು. ಈ ವೇಳೆ ನಟ ದರ್ಶನ್ ಅವರು ಪತ್ನಿ ಹಾಗೂ ಮಗನನ್ನು ಅಪ್ಪಿಕೊಂಡು ಭಾವುಕರಾದರು ಎನ್ನಲಾಗಿದೆ.
ಜೈಲಿನಲ್ಲಿ ಹೆಂಡ್ತಿ-ಮಗನನ್ನ ಕಂಡು ತಬ್ಬಿ ಕಣ್ಣೀರಿಟ್ಟ ದರ್ಶನ್, ಮನಸ್ಸಿನ ಭಾರ ಇಳಿಸಿಕೊಂಡು ಪತ್ನಿ ಹಾಗೂ ಮಗನಿಗೆ ಧೈರ್ಯ ಹೇಳಿದ್ದಾರೆ. ನೀವೇನು ಬೇಜಾರಾಗ್ಬೇಡಿ, ಧೈರ್ಯವಾಗಿರಿ. ನಾನು ಇಲ್ಲಿ ಆರಾಮಾಗಿದ್ದೀನಿ ಅಂತ ಹೆಂಡತಿ ಮಗನಿಗೆ ಧೈರ್ಯ ತುಂಬಿದ ದರ್ಶನ್, ವಿಶೇಷ ಸಂದರ್ಶನಕ್ಕೆ ಅವಕಾಶ ಕೊಟ್ಟಿರೋದು ಸಮಾಧಾನ ತಂದಿದೆ ಎಂದಿದ್ದಾರಂತೆ.
ಜೈಲಿನಲ್ಲಿದ್ರು ಪತ್ನಿ ಹಾಗೂ ಪುತ್ರನ ಕಣ್ಣೀರು ಒರೆಸಿದ ದರ್ಶನ್, ನಿಮ್ಮಿಬ್ರನ್ನ ಹತ್ತಿರದಿಂದ ಮಾತಾಡಿಸಿ ಮನಸ್ಸು ಹಗುರವಾಯ್ತು. ಹೇಗೋ ಇಷ್ಟು ದಿನ ಕಳೆದಿದ್ದೇನೆ. ಭಗವಂತ ಇದ್ದಾನೆ, ಇನ್ನೊಂದು ವರ್ಷ ಕಳೀತಿನಿ” ಎಂದು ಪತ್ನಿ- ಮಗನಿಗೆ ದರ್ಶನ್ ಧೈರ್ಯ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಕುಟುಂಬ ಕುರಿತ ಚರ್ಚೆ ಬಳಿಕ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಬಳಿ ಈ ಒಂದು ಪ್ರಶ್ನೆ ಕೇಳಿದ್ದಾರೆ ಎನ್ನಲಾಗ್ತಿದೆ. ಜಾಮೀನು ನಿರೀಕ್ಷೆಯಲ್ಲಿದ್ದ ದರ್ಶನ್ಗೆ ಸುಪ್ರೀಂ ಕೋರ್ಟ್ ಬೇಲ್ ರಿಜೆಕ್ಟ್ ಮಾಡಿದ್ದು ಬೇಸರ ತರಿಸಿದೆ. ಹೀಗಾಗಿ ವಿಜಯಲಕ್ಷ್ಮಿ ಬಳಿ ಸುಪ್ರೀಂನಲ್ಲಿ ಬೇಲ್ ರಿಜೆಕ್ಟ್ ಆಗಿದ್ದು ಯಾಕೆ? ಎಂದು ದರ್ಶನ್ ಪ್ರಶ್ನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಒಂದು ಅವಕಾಶ ಇರ್ತಿತ್ತು ಎಂದು ದರ್ಶನ್ ಅಸಮಾಧಾನ ವ್ಯಕ್ತಪಡಿಸಿದ್ದು, ಇದೀಗ ಏನು ಮಾಡಲು ಸಾಧ್ಯವಿಲ್ಲ ಎಂದು ಬೇಸರದ ಮಾತಾಡಿದ್ರು ಎನ್ನಲಾಗ್ತಿದೆ.
ಮಾತುಕತೆ ಬಳಿಕ ಹೆಂಡತಿ ತಂದಿದ್ದ ಡ್ರೈಫ್ರೂಟ್ಸ್ ಹಾಗೂ ಹಣ್ಣುಗಳನ್ನ ಪಡೆದ ದರ್ಶನ್, ಕೊನೆಯಲ್ಲಿ ಹೆಂಡ್ತಿ-ಮಗನನ್ನ ಪ್ರೀತಿಯಿಂದ ಮಾತಾಡಿಸಿ ಕಳಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಪೋಷಕರಿಗೆ ಬೆಲೆ ಏರಿಕೆ ಬರೆ : ಶಾಲಾ ಶುಲ್ಕ ಹೆಚ್ಚಳ ಬೆನ್ನಲ್ಲೇ ನೋಟ್ ಬುಕ್, ವರ್ಕ್ ಬುಕ್ ಗಳ ಬೆಲೆಯೂ ಏರಿಕೆ