newsics.com/ನ್ಯೂಸಿಕ್ಸ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಆರೋಪದಲ್ಲಿ ನಟ ದರ್ಶನ್ ತೂಗುದೀಪ ಅವರು ಜೈಲು ಸೇರಿದರು. ಈ ಹಿಂದೆ ದರ್ಶನ್, ವಿಜಯಲಕ್ಷ್ಮೀ ಸಂಸಾರದಲ್ಲಿ ಸಮಸ್ಯೆ ಆಗಿ, ವಿವಾದ ಎದ್ದಿತ್ತು. ಆಗಲೂ ದರ್ಶನ್ ಜೈಲು ಸೇರಿದ್ದರು. ಈಗ ಕೊ*ಲೆ ಆರೋಪದಲ್ಲಿ ಜೈಲು ಸೇರಿದಾಗ ವಿಜಯಲಕ್ಷ್ಮೀ ಮಾತ್ರ ಸದಾ ದರ್ಶನ್ ಪರವಾಗಿದ್ದರು.
ಕಳೆದ ಎರಡು ವರ್ಷಗಳಿಂದ ವಿಜಯಲಕ್ಷ್ಮೀ ಮಾತ್ರ ದರ್ಶನ್ ಅವರನ್ನು ಹೊರಗಡೆ ಕರೆದುಕೊಂಡು ಬರಲು, ಅವರ ಸಿನಿಮಾ ಪ್ರಚಾರಕ್ಕೆ ಬೆಂಬಲ ನೀಡಿದರು. ಅಷ್ಟೇ ಅಲ್ಲದೆ ಅವಕಾಶ ಸಿಕ್ಕಾಗೆಲ್ಲ ಜೈಲಿಗೆ ಹೋಗಿ ನೋಡಿಕೊಂಡು ಬಂದಿದ್ದಾರೆ, ಆಹಾರ, ಬಟ್ಟೆ ನೀಡಿದ್ದರು.
ಪ್ರತಿಯೊಂದು ಬಿರುಗಾಳಿಯಲ್ಲೂ ಮತ್ತು ಪ್ರತಿಯೊಂದು ಮೌನದಲ್ಲೂ ನಾನು ನಿನ್ನ ಕೈ ಹಿಡಿದು ಮುನ್ನಡೆಸುತ್ತೇನೆ. ಪರಿಸ್ಥಿತಿಗಳು ನಮ್ಮನ್ನು ದೂರ ಮಾಡಲು ಪ್ರಯತ್ನಿಸಿದರೂ, ನನ್ನ ಹೃದಯ ಯಾವಾಗಲೂ ನಿನ್ನನ್ನೇ ಆರಿಸಿಕೊಳ್ಳುತ್ತದೆ… ಮತ್ತು ಇಡೀ ಜಗತ್ತೇ ನಿನಗೆ ಎದುರಾಗಿ ನಿಂತರೂ, ನಾನು ನಿನ್ನ ಪಕ್ಕದಲ್ಲೇ ನಿಲ್ಲುತ್ತೇನೆ, ಎಲ್ಲದರ ನಡುವೆಯೂ ನಿನ್ನನ್ನೇ ಆರಿಸಿಕೊಳ್ಳುತ್ತೇನೆ” ಎಂದು ವಿಜಯಲಕ್ಷ್ಮೀ ದರ್ಶನ್ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ.
2024 ರಲ್ಲಿ ದುಬೈನಲ್ಲಿ ಈ ದಂಪತಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿತ್ತು. ಇವರಿಬ್ಬರು ಉಂಗುರ ಬದಲಾಯಿಸಿಕೊಂಡಿದ್ದರು, ಡ್ಯಾನ್ಸ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಅದಾದ ಬಳಿಕವೇ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್ ಜೈಲು ಸೇರಿದರು.