newsics.com/ನ್ಯೂಸಿಕ್ಸ್
ಬಾಲಿವುಡ್ ಪ್ರೇಮಿಗಳನ್ನು ಆಕರ್ಷಿಸಿದ್ದ 2012ರ ಹಿಟ್ ಸಿನಿಮಾ ‘ಕಾಕ್‌ಟೇಲ್’ ಈಗ ಸೀಕ್ವೆಲ್ ಮೂಲಕ ಮತ್ತೆ ಪರದೆಯ ಮೇಲೆ ಬರಲಿದೆ. ಬಹು ನಿರೀಕ್ಷಿತ ಕಾಕ್‌ಟೇಲ್ 2 ಚಿತ್ರದಲ್ಲಿ ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ಮಿಂಚಲಿದ್ದಾರೆ.
ಇದರ ಹಾಡಿನ ಬಿಡುಗಡೆ ಸಮಾರಂಭದಲ್ಲಿ, ಸಹನಟಿ ಕೃತಿ ಸನೂನ್ ಅವರನ್ನು ಹೊಗಳುವ ಬರದಲ್ಲಿ ರಶ್ಮಿಕಾ ಆಕಸ್ಮಿಕವಾಗಿ ಇಂಗ್ಲಿಷ್‌ನ ‘F’ ಪದ ಬಳಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಜೂನ್ 19ರಂದು ರಿಲೀಸ್ ಆಗಲಿರುವ ಈ ಚಿತ್ರದ ಹಾಡಿನ ಬಿಡುಗಡೆ ಸಮಾರಂಭ ಭಾನುವಾರ (ಮೇ 17) ರಾತ್ರಿ ಅದ್ಧೂರಿಯಾಗಿ ನೆರವೇರಿತು. ವೇದಿಕೆಯಲ್ಲಿ ರಶ್ಮಿಕಾ ಮಂದಣ್ಣ, ಶಾಹಿದ್ ಕಪೂರ್ ಕಾಕ್‌ಟೇಲ್ 2 ಚಿತ್ರದಲ್ಲಿ ಏನೋ ಒಂದು ವಿಶೇಷತೆ ಇದೆ. ಕೃತಿ ನೀವು ತುಂಬಾ ಹಾಟ್ ಆಗಿ ಕಾಣಿಸುತ್ತಿದ್ದೀರಾ ಎಂಬುದು ಇಡೀ ಜಗತ್ತಿಗೇ ಗೊತ್ತು. ನೀವು ನಿಜಕ್ಕೂ F****** ಹಾಟ್’ ಎಂದುಬಿಟ್ಟರು. ತಾವು ಆಡಿದ ಮಾತು ಅರಿವಿಗೆ ಬರುತ್ತಿದ್ದಂತೆ ಕೈಯಿಂದ ಬಾಯಿ ಮುಚ್ಚಿಕೊಂಡ ರಶ್ಮಿಕಾ, ‘ನನ್ನನ್ನು ಕ್ಷಮಿಸಿ! ಆ ಪದವನ್ನು ಸೈಲೆನ್ಸ್ ಮಾಡಿಬಿಡಿ’ ಎಂದು ವಿನಂತಿಸಿಕೊಂಡರು.
ಇಡೀ ಸಿನಿಮಾದಲ್ಲಿ ಪ್ರತಿಯೊಂದು ದೃಶ್ಯವೂ ಮ್ಯಾಜಿಕಲ್ ಆಗಿ ಮೂಡಿಬಂದಿದೆ. ಈಗ ರಿಲೀಸ್ ಆಗಿರುವುದು ಕೇವಲ ಟ್ರೈಲರ್‌ನಂತಹ ತುಣುಕು ಅಷ್ಟೇ. ಮುಂದೆ ಚಿತ್ರದಲ್ಲಿ ನೋಡಲು ತುಂಬಾ ವಿಷಯಗಳಿವೆ’ ಎಂದು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದರು.
https://x.com/TheGossipQueeen/status/2056092344404136024?ref_src=twsrc%5Etfw%7Ctwcamp%5Etweetembed%7Ctwterm%5E2056092344404136024%7Ctwgr%5Ee80bc654a9a63a5f1c36286137b6ca4d4d38998d%7Ctwcon%5Es1_c10&ref_url=https%3A%2F%2Ftv9kannada.com%2Fentertainment%2Fbollywood%2Frashmika-mandannas-f-word-viral-moment-at-cocktail-2-song-launch-after-marriage-1187494.html
VD Satheesan Kerala new CM ಕೇರಳದ ನೂತನ ಸಿಎಂ ಆಗಿ ವಿಡಿ ಸತೀಶನ್ ಪ್ರಮಾಣ ವಚನ ಸ್ವೀಕಾರ