Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಬೆಚ್ಚಿ ಬೀಳಿಸೋ ಮತ್ತೊಂದು ನೀಲಿ ಡ್ರಮ್ ಕಥೆ : ಗಂಡನ ಜೊತೆ ಸೇರಿ ಪ್ರಿಯಕರನ ಕೊಂದ ಮಹಿಳೆ
ದೇಶಪ್ರಮುಖ

ಬೆಚ್ಚಿ ಬೀಳಿಸೋ ಮತ್ತೊಂದು ನೀಲಿ ಡ್ರಮ್ ಕಥೆ : ಗಂಡನ ಜೊತೆ ಸೇರಿ ಪ್ರಿಯಕರನ ಕೊಂದ ಮಹಿಳೆ

Share
2 Min Read
SHARE

newsics.com/ನ್ಯೂಸಿಕ್ಸ್

ಮಹಾರಾಷ್ಟ್ರ: ಮಹಿಳೆಯೊಬ್ಬಳು ತನ್ನ ಗಂಡನ ಜೊತೆ ಸೇರಿ ಪ್ರಿಯಕರಯನ್ನು ಬರ್ಬರವಾಗಿ ಕೊಲೆ ಮಾಡಿ ಬಳಿಕ ಸಿಮೆಂಟ್ ತುಂಬಿದ್ದ ನೀಲಿ ಬಣ್ಣದ ಡ್ರಮ್​ಗೆ ಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿರುವ ಘಟನೆ ಮೀರತ್​ನಲ್ಲಿ ನಡೆದಿದೆ.

https://youtube.com/shorts/qM17NYCF6QQ?si=P9kdXfY-X5l0cveO

ಮಹಾರಾಷ್ಟ್ರದ ಮುಂಬ್ರಾದಲ್ಲಿ ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ವ್ಯಕ್ತಿ, ನೀಲಿ ಡ್ರಮ್​​ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಸದ್ಯ, ಈ ಘಟನೆ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡ ಮಹಾರಾಷ್ಟ್ರ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.

ಪೊಲೀಸರ ಪ್ರಕಾರ, ಅರ್ಬಾಜ್​ ಖಾನ್ 2021 ರಿಂದ ಮಹಾರಾಷ್ಟ್ರದ ವಸೈ ನಿವಾಸಿ ಮೆಹಜಬೀನ್ ಖಾತುನ್ ಎಕ್ರಾನ್ ಶೇಖ್ ಎಂಬಾಕೆಯ ಜೊತೆ ಸಂಬಂಧ ಹೊಂದಿದ್ದನು ಎಂದು ಹೇಳಿದ್ದಾರೆ. ಅರ್ಬಾಜ್​ ಮತ್ತು ಮೆಹಜಬೀನ್​ ಇಬ್ಬರೂ ಆಗಾಗ್ಗೆ ಫೋನ್​, ಮೆಸೇಜ್​ ಮಾಡುತ್ತಿದ್ದರು. ಆದ್ರೆ, ದಿನೇ ದಿನೇ ಇಬ್ಬರ ಮಧ್ಯೆ ಮಾತುಕತೆ ಹೆಚ್ಚಾಗುತ್ತಿದ್ದಂತೆ, ಒಂದು ದಿನ ಆರೋಪಿ ಮೆಹಜಬೀನ್​​ ಅರ್ಬಾಜ್​ ​​ಬಳಿ ಹಣ ಕೇಳಲು ಪ್ರಾರಂಭಿಸಿದ್ದಾಳೆ. ಹೀಗೆ ಅರ್ಬಾಜ್​ ತನ್ನ ಪ್ರೇಯಸಿ ಅಕೌಂಟ್​ಗೆ ಪ್ರತಿ ತಿಂಗಳು ಹಣ ಟ್ರಾನ್ಸ್​ಫರ್​​ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಅರ್ಬಾಜ್​ ಖಾನ್ ಹಣ ಕಳುಹಿಸುವುದನ್ನು ನಿಲ್ಲಿಸಿದ ನಂತರ ಇಬ್ಬರ ಮಧ್ಯೆ ಜಗಳ ಉಂಟಾಗಿದ್ದು, ಅರ್ಬಾಜ್ ಕೊಟ್ಟ ಹಣವನ್ನು ವಾಪಸ್​ ಕೇಳಿದ್ದಾನೆ. ಹಣ ವಸೂಲಿ ಮಾಡಲು ಅರ್ಬಾಕಲ್​ ಕಳೆದ ಏಪ್ರಿಲ್​ 3 ರಂದು ಮೆಹಜಬೀನ್ ಮನೆಗೆ ತೆರಳಿದ್ದಾನೆ. ಈ ವೇಳೆ ಮೆಹಜಬೀನ್​, ತನ್ನ ಪತಿ ಹಸನ್ ಶೇಖ್, ಆಕೆಯ ಸಹೋದರ ತಾರಿಕ್ ಶೇಖ್ ಮತ್ತು ಮೊಜ್ಜಮ್ ಪಠಾಣ್ ಜೊತೆ ಸೇರಿ ಆತನನ್ನು ಕೊಲೆ ಮಾಡಿ ಬಳಿಕ ನೀಲಿ ಡ್ರಮ್​ ಶವವನ್ನು ತುಂಬಿ ಚರಂಡಿಗೆ ಎಸೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ

ಮೃತ ಅರ್ಬಾಜ್​ ಖಾನ್ ಅವರ ತಂದೆ ಮುಂಬ್ರಾ ಪೊಲೀಸ್ ಠಾಣೆಯಲ್ಲಿ ಮಗ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ್ದರು, ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮೃತನ ಮೊಬೈಲ್ ಟವರ್​​ ಮತ್ತು ಕಾಲ್​ ಲಿಸ್ಟ್​​ ಮೂಲಕ ಆರೋಪಿಗಳನ್ನು ಪತ್ತೆಹಚ್ಚಲು ಪ್ರಾರಂಭಿಸಿದರು. ಅರ್ಬಾಜ್​ ಖಾನ್​ ಕೊಲೆ ಆಗುವ ಒಂದು ದಿನ ಮೊದಲು ಮೆಹಜಬೀನ್​ಗೆ 50 ಸಾವಿರ ಹಣವನ್ನು ನೀಡಿದ್ದನು. ಈ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿ ಮೆಹಜಬೀನ್​ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸದ್ಯ ಕೊಲೆ ಪ್ರಕರಣ ಸಂಬಂಧ ಆರೋಪಿ ಮೆಹಜಬೀನ್ ಮತ್ತು ಆಕೆಯ ಸಹೋದರ ತಾರಿಕ್​ನನ್ನು ಕಳೆದ ಮೇ 7 ರಂದು ಬಂಧಿಸಲಾಗಿತ್ತು. ನಾಪತ್ತೆಯಾಗಿರುವ ಇನ್ನಿಬ್ಬರು ಆರೋಪಿಗಳಾದ ಹಸನ್ ಶೇಖ್ ಮತ್ತು ಮೊಜ್ಜಮ್ ಪಠಾಣ್ ಪೊಲೀಸರು ಬಲೆ ಬೀಸಿದ್ದಾರೆ.

https://www.newsics.com/2026/05/17/union-minister-bandi-sanjays-son-arrested-in-pocso-case/

TAGGED:Woman kills lover along with husband
Share This Article
Facebook Twitter Copy Link Print
Previous Article ಪೋಕ್ಸೊ ಪ್ರಕರಣದಲ್ಲಿ ಕೇಂದ್ರ ಸಚಿವ ಬಂಡಿ ಸಂಜಯ್ ಪುತ್ರ ಅರೆಸ್ಟ್
Next Article Women Alert ಪಿರಿಯೆಡ್ಸ್‌ ಮುಂದೂಡಲು ಔಷಧಿ ತೆಗೆದುಕೊಳ್ಳುವ ಮುನ್ನ ಎಚ್ಚರ

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?