newsics.com/ನ್ಯೂಸಿಕ್ಸ್
ದಿಲೀಪ್ ರಾಜ್ ಅವರ ಹಠಾತ್ ನಿಧನಕ್ಕೆ ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ಲೋಕ ದಿಗ್ರ್ಭಮೆಗೊಂಡಿದೆ. ಗಟ್ಟಿಮುಟ್ಟಾಗಿದ್ದ, ಪ್ರತಿನಿತ್ಯ ವರ್ಕೌಟ್ ಮಾಡುತ್ತಿದ್ದ ದಿಲೀಪ್ ರಾಜ್ ಹೃದಯಾಘಾತದಿಂದ ಸಾವನ್ನಪ್ಪಿರುವುದು ದುರಂತ.
https://youtube.com/shorts/vd_Fn8drod4?si=CvPPZAJu5QmGONhu
ʼಬಾಯ್ ಫ್ರೆಂಡ್ʼ ಚಿತ್ರದಲ್ಲಿ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 2007ರಲ್ಲಿ ಬಿಡುಗಡೆಯಾದ ಪುನೀತ್ ರಾಜ್‌ಕುಮಾರ್ ನಟನೆಯ ‘ಮಿಲನ’ ಚಿತ್ರದಲ್ಲಿನ ವಿಲನ್ ಪಾತ್ರ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು. 2016ರಲ್ಲಿ ರಿಲೀಸ್ ಆದ ʼಯು ಟರ್ನ್ʼ ಚಿತ್ರದಲ್ಲಿನ ಅವರ ಪಾತ್ರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಇತ್ತೀಚೆಗೆ ತೆರೆಕಂಡ ಡಾರ್ಲಿಂಗ್ ಕೃಷ್ಣ ನಿರ್ದೇಶನ ʼಲವ್ ಮಾಕ್ಟೇಲ್ 3′ ಸಿನಿಮಾದಲ್ಲಿಯೂ ನಟಿಸಿದ್ದರು.
ಕಿರಿತೆರೆಯಲ್ಲಿಯೂ ಮೋಡಿ ಮಾಡಿದ್ದ ದಿಲೀಪ್ ರಾಜ್, ʼಜನನಿʼ, ʼಅರ್ಧ ಸತ್ಯʼ, ʼರಂಗೋಲಿʼ, ʼಕುಂಕುಮ ಬಾಗ್ಯʼ, ʼಮಾಂಗಲ್ಯʼ, ʼಮಳೆಬಿಲ್ಲುʼ, ʼಪ್ರೀತಿಗಾಗಿʼ, ʼಹಿಟ್ಲರ್ ಕಲ್ಯಾಣʼ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರು. ಜತೆಗೆ ʼಹಿಟ್ಲರ್ ಕಲ್ಯಾಣʼ ಸಿರೀಯಲ್ ನಿರ್ಮಾಣವನ್ನೂ ಮಾಡಿದ್ದರು. ಅಲ್ಲದೆ ʼವಿದ್ಯಾ ವಿನಾಯಕʼ, ʼಪಾರುʼ, ನಾ ನಿನ್ನ ಬಿಡಲಾರೆʼ ಮುಂತಾದ ಧಾರಾವಾಹಿಗಳನ್ನೂ ನಿರ್ಮಿಸಿದ್ದರು.
ಕೆಲ ರಿಯಾಲಿಟಿ ಶೋ ಗಳ ನಿರೂಪಕ ಆಗಿ ಕೂಡ ಕೆಲಸ ಮಾಡಿದ್ರು. ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಲೀಡ್ ರೋಲ್ ಮಾಡುವುದರ ಜೊತೆಗೆ ನಿರ್ಮಾಣ ಸಂಸ್ಥೆ ಕೂಡ ಆರಂಭಿಸಿದ್ದರು. ಸದ್ಯ ‘ಕೃಷ್ಣ ರುಕ್ಕು’ ಸೇರಿದಂತೆ ಎರಡು ಧಾರಾವಾಹಿಗಳ ನಿರ್ಮಾಣ ಮಾಡ್ತಾ ಇದ್ದ ದಿಲೀಪ್ ಅನೇಕ ಕಿರುತೆರೆ ಕಲಾವಿದರು, ತಂತ್ರಜ್ಞರ ಪಾಲಿಗೆ ಅನ್ನದಾತ ಆಗಿದ್ದರು.
ಲವ್ ಮಾಕ್ಟೇಲ್ 3 ದಿಲೀಪ್ ನಟಿಸಿದ ಕೊನೆಯ ಸಿನಿಮಾ. ಪ್ರೀತಿಸಿ ಕೈ ಹಿಡಿದ ಪತ್ನಿ ಶ್ರೀ ವಿದ್ಯಾ , ಇಬ್ಬರೂ ಮುದ್ದಿನ ಮಕ್ಕಳು ಜೊತೆಗೆ ತಮ್ಮ ಕಿರುತೆರೆಯ ದೊಡ್ಡ ಕುಟುಂಬವನ್ನು ಅನಾಥವಾಗಿ ಬಿಟ್ಟು ದಿಲೀಪ್ ಕಣ್ಮರೆ ಆಗಿದ್ದಾರೆ.
https://www.newsics.com/2026/05/15/effect-of-hormuz-conflict-cng-price-hiked-by-rs-2-per-kg/