Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಶಿಲ್ಪಾ ಗಣೇಶ್ ಹೊಸ ಹೆಜ್ಜೆ! ಈಗ ಕೇವಲ ನಿರ್ಮಾಪಕಿಯಲ್ಲ, ಗಾಯಕಿ!
ಪ್ರಮುಖಮನರಂಜನೆ

ಶಿಲ್ಪಾ ಗಣೇಶ್ ಹೊಸ ಹೆಜ್ಜೆ! ಈಗ ಕೇವಲ ನಿರ್ಮಾಪಕಿಯಲ್ಲ, ಗಾಯಕಿ!

Share
4 Min Read
SHARE

newsics.com/ನ್ಯೂಸಿಕ್ಸ್

ನಿರ್ಮಾಪಕಿ ಶಿಲ್ಪಾ ಗಣೇಶ್ ಅವರು ʻಗೋಲ್ಡನ್ ಮೂವೀಸ್ʼ ಬ್ಯಾನರ್‌ ಅಡಿಯಲ್ಲಿ ನಿರ್ಮಿಸಿರುವ ‘ಪಿಚ್ಚರ್’ ಚಿತ್ರದ ಮೂಲಕ ಗಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ‘ಗೋಕುಲದ ರಾಧೆ’ ಎಂಬ ಹಾಡನ್ನು ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿ ಹಾಡುವ ಮೂಲಕ ತಮ್ಮ ಗಾಯನ ಪ್ರತಿಭೆಯನ್ನು ಮೆರೆದಿದ್ದಾರೆ.

ಕನ್ನಡ ಮತ್ತು ತುಳು ಚಿತ್ರರಂಗಕ್ಕೆ ಹೊಸ ಗಾಯಕಿಯೊಬ್ಬರ ಪರಿಚಯವಾಗಿದೆ. ಅವರೇ ಶಿಲ್ಪಾ ಗಣೇಶ್. ತುಳು ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿರುವ ‘ಪಿಚ್ಚರ್‌’ ಚಿತ್ರಕ್ಕೆ ‘ಗೋಕುಲದ ರಾಧೆ’ ಎಂಬ ಹಾಡನ್ನು ಎರಡೂ ಭಾಷೆಯಲ್ಲಿ ಹಾಡಿದ್ದಾರೆ. ಈ ಹಾಡು ಬಿಡುಗಡೆಯಾಗಿ ಇದೀಗ ಭಾರಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಈ ಸಿನಿಮಾವನ್ನು ಗೋಲ್ಡನ್ ಮೂವೀಸ್ ಮೂಲಕ ಶಿಲ್ಪಾ ಗಣೇಶ್ ಅವರೇ ನಿರ್ಮಿಸುತ್ತಿದ್ದಾರೆ. ತನ್ನ ಗಾಯನ ಕನಸಿನ ಕುರಿತು ಅವರು, ‘ನನಗೆ ಚಿಕ್ಕಂದಿನಿಂದಲೂ ಗಾಯನ ಅಂದ್ರೆ ಬಹಳ ಇಷ್ಟ. ಶಾಸ್ತ್ರೀಯವಾಗಿ ಕಲಿತಿಲ್ಲವಾದರೂ ಬಾಲ್ಯದಿಂದಲೇ ನನಗಿಷ್ಟ ಬಂದ ಹಾಡುಗಳನ್ನು ಪ್ರಾಕ್ಟೀಸ್ ಮಾಡುತ್ತಲೇ ಇದ್ದೆ. ಹಾಗೆ ನನ್ನ ಹಾಡು ರೆಕಾರ್ಡ್ ಮಾಡಿರುವ ಬಹಳಷ್ಟು ಸಿಡಿಗಳು ಇನ್ನೂ ನನ್ನ ಬಳಿ ಇವೆ. ಕೇಳಿದವರೆಲ್ಲಾ ಎಷ್ಟು ಚೆನ್ನಾಗಿದೆ ಧ್ವನಿ, ನೀನು ಸಿನಿಮಾದಲ್ಲಿ ಹಾಡಬೇಕು ಅನ್ನುತ್ತಿದ್ದರು. ಅದಕ್ಕೆ ನನ್ನದೇ ನಿರ್ಮಾಣದ ಸಿನಿಮಾದಲ್ಲಿ ಹಾಡಿದ್ದೇನೆ. ಕನಸು ನನಸಾದ ಖುಷಿ ಇದೆ’ ಎನ್ನುತ್ತಾರೆ.

ತುಳು ಚಿತ್ರರಂಗಕ್ಕೆ ಪ್ರವೇಶಿಸಿರುವ ಕುರಿತು ಮಾತನಾಡಿ, ‘ಗೋಲ್ಡನ್‌ ಮೂವೀಸ್‌ನಲ್ಲಿ ತುಳು ಸಿನಿಮಾ ಮಾಡುವ ಯೋಜನೆ ಇತ್ತು. ಈ ವಸ್ತು ಕನ್ನಡಕ್ಕೂ ಸೂಕ್ತವಾಗುತ್ತದೆ ಎಂಬ ಕಾರಣಕ್ಕೆ ಕನ್ನಡದಲ್ಲೂ ಬಿಡುಗಡೆ ಮಾಡುತ್ತಿದ್ದೇವೆ. ನಮ್ಮ ಸಂಸ್ಥೆ ನಿರ್ಮಾಣ ಮಾಡುತ್ತದೆ ಎಂದ ಮೇಲೆ ಕೊಂಚ ವಿಶೇಷತೆ ಇರಬೇಕು ಅಂತ ಆಕರ್ಷಕ ರೀತಿಯಲ್ಲಿ ಸಿನಿಮಾ ಕಟ್ಟಿದ್ದೇವೆ. ಕೌಟುಂಬಿಕ ಕಥಾಹಂದರದ ಸಿನಿಮಾ. ಆರಂಭದಿಂದ ಅಂತ್ಯದವರೆಗೂ ನಗುವಿದೆ. ಎಲ್ಲರನ್ನೂ ಹಗುರಾಗಿಸುವ ಸಿನಿಮಾ ಇದು’ ಎಂದು ಹೇಳುತ್ತಾರೆ.

ಚಿತ್ರ ನಿರ್ಮಾಣ ಪ್ರಕ್ರಿಯೆಯ ಕುರಿತು ಮಾತನಾಡುವ ಅವರು, ‘ಒಳ್ಳೆಯ ಕಂಟೆಂಟ್‌ ಇರುವ ಸಿನಿಮಾ ಮಾಡಬೇಕು ಅನ್ನುವುದು ನಮ್ಮ ಆಸೆಯಾಗಿತ್ತು. ಅದಕ್ಕೆ ತಕ್ಕಂತೆ ಸಿನಿಮಾ ಮೂಡಿಬಂದಿದೆ. ಅದ್ದೂರಿಯಾಗಿ ಚಿತ್ರೀಕರಣ ಮಾಡಿದ್ದೇವೆ. ಅದರಲ್ಲೂ ಹಾಡುಗಳು ಬಹಳ ಸೊಗಸಾಗಿವೆ. ನಮ್ಮ ಸಂಸ್ಥೆಯ ನಿರ್ಮಾಣದ ಚಿತ್ರದ ಹಾಡುಗಳಿಗೆ ನಾನು ಹೆಚ್ಚು ಆಸ್ಥೆ ವಹಿಸುತ್ತೇನೆ. ನನ್ನ ವೈಯಕ್ತಿಕ ಇಷ್ಟದ ವಿಭಾಗ ಅದು. ಈ ಚಿತ್ರದಲ್ಲಿ ಮಂಗಳೂರಿನ ಬಹಳಷ್ಟು ರಂಗಭೂಮಿ ಹಿನ್ನೆಲೆಯ ಉತ್ಕೃಷ್ಟ ಕಲಾವಿದರು ನಟಿಸಿದ್ದಾರೆ’ ಎನ್ನುತ್ತಾರೆ.

ಸಂದೀಪ್ ಬೆದ್ರ ನಿರ್ದೇಶನದ ಈ ಚಿತ್ರದಲ್ಲಿ ನಿತ್ಯಪ್ರಕಾಶ್ ಬಂಟ್ವಾಳ ಮತ್ತು ಅಮೃತಾ ನಾಯಕ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ‘ಪಿಚ್ಚರ್‌’ ಸಿನಿಮಾ ಜು.24ರಂದು ಕನ್ನಡ ಮತ್ತು ತುಳುವಿನಲ್ಲಿ ಬಿಡುಗಡೆಯಾಗುತ್ತಿದೆ.

ಪತಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಪ್ರತಿಕ್ರಿಯೆ ಹೇಗಿತ್ತು ಎಂದು ಕೇಳಿದರೆ, ‘ಹಾಡು ಕೇಳಿ ಗಣೇಶ್‌ ತುಂಬಾ ಇಷ್ಟಪಟ್ಟರು. ಹಿಂದೆಯೆಲ್ಲಾ ನಮ್ಮ ತಂಡ ಒಟ್ಟು ಸೇರಿದಾಗ ನಾನು ಹಾಡುತ್ತಿದ್ದೆ. ಬಳಗವೆಲ್ಲಾ ಸಿನಿಮಾಗೆ ಹಾಡಿಸಬೇಕು ಎಂದು ಹೇಳುತ್ತಿದ್ದರು. ಕಾಲ ಕೂಡಿ ಬಂದಿರಲಿಲ್ಲ. ಈ ಹಾಡಿನ ಮೂಲಕ ಎಲ್ಲರೂ ಮೆಚ್ಚುಗೆ ಸಲ್ಲಿಸುತ್ತಿದ್ದಾರೆ’ ಎಂದು ಶಿಲ್ಪಾ ಗಣೇಶ್ ಹೇಳಿದ್ದಾರೆ.

ರಸ್ತೆ ಅಪಘಾತದಲ್ಲಿ ತೆಲುಗು ನಟ ಸಾವು

TAGGED:but a singer!Shilpa Ganesh takes a new step! Now she is not just a producer
Share This Article
Facebook Twitter Copy Link Print
Previous Article ರಸ್ತೆ ಅಪಘಾತದಲ್ಲಿ ತೆಲುಗು ನಟ ಸಾವು
Next Article BSc student dies herself ಹಾಸ್ಟೆಲ್‌ನಲ್ಲಿ ಜನ್ಮದಿನದಂದೇ ಜೀವ ಕಳೆದುಕೊಂಡ ಬಿಎಸ್ಸಿ ವಿದ್ಯಾರ್ಥಿನಿ! ಎಂಗೇಜ್ಮೆಂಟ್ ಕಾರಣವಾ?

Popular Posts

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?