newsics.com/ನ್ಯೂಸಿಕ್ಸ್
ಬಂಗಾಳದಲ್ಲಿ ಬಿಜೆಪಿಗೆ ಅಧಿಕಾರ ಬಂದ ಬೆನ್ನಲ್ಲೇ ದೆಹಲಿ ಬಿಜೆಪಿ ಪ್ರಧಾನ ಕಚೇರಿ ಮೇಲೆ ಉಗ್ರರ ದಾಳಿ ಸಾಧ್ಯತೆಯನ್ನು ಗುಪ್ತಚರ ಇಲಾಖೆ ನೀಡಿದೆ.
ಬಿಜೆಪಿ ಕಚೇರಿ ಹಾಗೂ ಇತರ ಕೆಲವೆಡೆ ಉಗ್ರರು ದಾಳಿಗೆ ಸಜ್ಜಾಗಿದ್ದಾರೆ. ಐಇಡಿ ಬಾಂಬ್ ದಾಳಿ, ಕಾರು ಬಾಂಬ್, ಆತ್ಮಾ*ಹುತಿ ದಾಳಿ, ಶೂಟೌಟ್ ರೀತಿಯಲ್ಲಿ ದಾಳಿ ನಡೆಸಲು ಉಗ್ರರು ಸಜ್ಜಾಗಿದ್ದಾರೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ.
ದೆಹಲಿಯಲ್ಲಿ ಉಗ್ರರ ದಾಳಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಸರ್ಕಾರ ಭದ್ರತೆ ಹೆಚ್ಚಿಸಿದೆ. ದೆಹಲಿಯ ಎಲ್ಲೆಡೆ ಭದ್ರತೆ ಹಾಗೂ ತಪಾಸಣೆ ನಡೆಯುತ್ತಿದೆ. ಪ್ಯಾರಾಮಿಲಿಟರಿ ಸೇರಿದಂತೆ ಹಲವು ಭದ್ರಾತಾ ಎಜೆನ್ಸಿಗಳ ನಿಯೋಜನೆ ಮಾಡಲಾಗಿದೆ. ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ದೆಹಲಿ ಬಿಜೆಪಿ ಕಚೇರಿ ಜೊತೆಗೆ ಕೆಲ ಸರ್ಕಾರಿ ಕಚೇರಿಗಳು ಉಗ್ರರ ಟಾರ್ಗೆಟ್ ಲಿಸ್ಟ್‌ನಲ್ಲಿದೆ ಅನ್ನೋ ಮಾಹಿತಿಯನ್ನು ಇಂಟಲಿಜೆನ್ಸ್ ನೀಡಿದೆ. ಈ ಮಾಹಿತಿಗಳ ಆಧಾರದಲ್ಲಿ ದೆಹಲಿಯಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಇತ್ತ ದೆಹಲಿ ಮಾತ್ರವಲ್ಲ ಇದೀಗ ಕೇಂದ್ರ ಸರ್ಕಾರ ಇತರ ಕೆಲ ನಗರಗಳಲ್ಲೂ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.