Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > 27 ವರ್ಷದ ಶ್ರೀಮಂತ ಯುವಕನಿಗೆ ಒಂಟಿತನದ ಗೋಳು
ಪ್ರಮುಖ

27 ವರ್ಷದ ಶ್ರೀಮಂತ ಯುವಕನಿಗೆ ಒಂಟಿತನದ ಗೋಳು

Share
2 Min Read
SHARE

newsics.com/ನ್ಯೂಸಿಕ್ಸ್

27 ವರ್ಷದ ಶ್ರೀಮಂತ ಯುವಕನ ಒಂಟಿತನದ ಗೋಳು ಎಲ್ಲರೂ ಅಚ್ಚರಿಪಡುವಂತೆ ಮಾಡಿದೆ.

27 ವರ್ಷದ ವ್ಯಕ್ತಿಯೊಬ್ಬ ರೆಡ್ಡಿಟ್‌ನಲ್ಲಿ ಒಂದು ಪೋಸ್ಟ್ ಮಾಡಿ, ಒಂಟಿತನ ಅನುಭವಿಸುತ್ತಿದ್ದು, ಇದನ್ನು ಕಳೆಯೋದಕ್ಕಾಗಿ ನಿಯಮಿತವಾಗಿ ತನ್ನ ಜೊತೆ ಮಾತನಾಡಿದರೆ ತಿಂಗಳಿಗೆ ₹6,000 ನೀಡುವುದಾಗಿ ಈ ವ್ಯಕ್ತಿ ಹೇಳಿದ್ದಾನೆ.

ಯುವಕನ ಪೋಸ್ಟ್ ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ ದುಡ್ಡಿದ್ದರೂ ಜನ ಯಾವ ರೀತಿ ಒಂಟಿತನದಿಂದ ಬಳಲುತ್ತಿದ್ದಾರೆ ಎಂದು ಯೋಚಿಸುವಂತೆ ಮಾಡಿದೆ. ಶ್ರೀಮಂತ ಕುಟುಂಬದಿಂದ ಬಂದಿರುವ ಮತ್ತು ತನ್ನ ವೃತ್ತಿಜೀವನದಲ್ಲಿ ಒಳ್ಳೆಯ ಪೊಸಿಷನ್‌ನಲ್ಲಿರುವ ಈ ವ್ಯಕ್ತಿ, ತನ್ನ ದೈನಂದಿನ ಆಫೀಸ್ ಕಡೆಗಿನ ಪ್ರಯಾಣದ ಸಮಯದಲ್ಲಿ, ಲಂಚ್ ಬ್ರೇಕ್‌ನಲ್ಲಿ ಮತ್ತು ಮಲಗುವ ಮೊದಲು ಎಮೋಷನಲಿ ಸ್ಟ್ರಾಂಗ್ ಇರುವ, ಪ್ರಬುದ್ಧರಾಗಿರುವ ಯಾರಾದರೂ ತನ್ನೊಂದಿಗೆ ಮಾತನಾಡಬೇಕೆಂದು ? ಬಯಸುತ್ತಿದ್ದಾರೆ.

ತನ್ನ ವಿವರವಾದ ಪೋಸ್ಟ್‌ನಲ್ಲಿ, ಆ ವ್ಯಕ್ತಿ ನಾಲ್ಕು ಷರತ್ತುಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಆ ವ್ಯಕ್ತಿ ಭಾವನಾತ್ಮಕವಾಗಿ ಮೆಕ್ಯೂರ್ಡ್ ಆಗಿರಬೇಕು. ಸಭ್ಯ ಸ್ವರದೊಂದಿಗೆ ಶಾಂತ ಧ್ವನಿಯನ್ನು ಹೊಂದಿರಬೇಕು, ಅವನ ಶಾಂತಿಯನ್ನು ಭಂಗಗೊಳಿಸುವ ಯಾವುದೇ “ಜಗಳವನ್ನು” ಅನ್ನು ಎಂದಿಗೂ ಮಾಡಬಾರದು. ಅವನ ಬಗ್ಗೆ ಕಾಳಜಿ ಇರುವಂತೆ ನಟಿಸಬಾರದು ಎಂದಿದ್ದಾರೆ.

ಆ ವ್ಯಕ್ತಿಯು ತನ್ನ ಆರೋಗ್ಯ, ಆಹಾರ ಪದ್ಧತಿ, ಮಾನಸಿಕ ಆರೋಗ್ಯ, ಕೆಲಸ ಮತ್ತು ಸಾಮಾನ್ಯವಾಗಿ ಜೀವನದ ಬಗ್ಗೆ ಯಾವಾಗಲೂ ಮಾತನಾಡಬೇಕು, ಕೇಳಬೇಕು ಎಂದು ಬಯಸಿದ್ದಾರೆ.

ರಿಲೇಷನ್‌ಶಿಪ್‌ನಲ್ಲಿ ಕೆಟ್ಟ ಅನುಭವ

ಆತನ ಹೆತ್ತವರು ಎಮೋಷನಲಿ ಅವರಿಗೆ ಲಭ್ಯವಿಲ್ಲ ಎಂದು ಆ ವ್ಯಕ್ತಿ ಬಹಿರಂಗಪಡಿಸಿದರು. ತನ್ನ ಕೊನೆಯ ಸಂಬಂಧವು ಅತ್ಯಂತ ಕೆಟ್ಟದಾಗಿತ್ತು ಎಂದು ಅವರು ಹೇಳಿದ್ದಾರೆ. ಅದರ ಬಗ್ಗೆ ಯೋಚಿಸುವಾಗ ಕೂಡಾ ತನಗೆ ಭಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮದುವೆಯ ಬಗ್ಗೆ ಯಾವುದೇ ಸಲಹೆಗಳನ್ನು ತಾನು ಕೇಳಲು ಬಯಸುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಆಫೀಸ್‌ನಲ್ಲಿ ಕೆಲಸ ಮಾಡುವಾಗ, ಯಾವುದಾದರೂ ಮಾನಸಿಕ ಅಸ್ವಸ್ಥತೆಯು ತನ್ನ ನಿದ್ರೆ ಮತ್ತು ಒಟ್ಟು ಸ್ಥಿರತೆಯ ಮೇಲೆ ಪರಿಣಾಮ ಬೀರಬಹುದು ಎಂದು ಭಯಪಡುತ್ತಿರುವುದಾಗಿ ತಿಳಿಸಿದ್ದಾರೆ.

ಅವರು ಪ್ರತಿ 15 ದಿನಗಳಿಗೊಮ್ಮೆ ₹3,000 ಪಾವತಿಸಲು ಯೋಜಿಸಿದ್ದಾರೆ ಮತ್ತು ಎಲ್ಲವೂ ಸರಿಯಾಗಿ ನಡೆದರೆ ಈ ವೇತನವನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ತಿಳಿಸಿದ್ದಾರೆ.

ಅನೇಕ ರೆಡ್ಡಿಟ್ ಬಳಕೆದಾರರು ಈ ಪೋಸ್ಟ್‌ಗೆ ಪ್ರೀತಿಯಿಂದ ಪ್ರತಿಕ್ರಿಯಿಸಿದರು. ಒಬ್ಬ ಬಳಕೆದಾರರು ಕಮೆಂಟ್ ಮಾಡಿ, “ಹೇ, ನಾನು ನಿಮ್ಮೊಂದಿಗೆ ಯಾವುದೇ ಸಮಯದಲ್ಲಿ ಮಾತನಾಡಲು ರೆಡಿ ಇದ್ದೇನೆ, ನೀವು ಅಗತ್ಯವಿರುವ ಯಾರಿಗಾದರೂ ಆ ಹಣವನ್ನು ದಾನ ಮಾಡಬಹುದು ಎಂದಿದ್ದಾರೆ.

ತಮಿಳುನಾಡು ಸಿಎಂ ಆಗಿ ನಾಳೆ ವಿಜಯ್​ ಪ್ರಮಾಣವಚನ

TAGGED:A 27-year-old rich man is lonely
Share This Article
Facebook Twitter Copy Link Print
Previous Article ಪ್ರಮಾಣವಚನಕ್ಕೂ ಮುನ್ನ ದಳಪತಿ ವಿಜಯ್ ಈ ಒಂದು ಕೆಲಸ ಮಾಡಬೇಕೆಂದ ರಾಖಿ ಸಾವಂತ್
Next Article ರೈಲಿನಲ್ಲಿ 6 ವರ್ಷ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಅಂದರ್

Popular Posts

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read

DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?

2 Min Read

Cyber Crime ಎಚ್ಚರ..! ವಾಟ್ಸಾಪ್‌ಗೆ ಬಂದ ಮದುವೆ ಕಾರ್ಡ್ ನೋಡ್ತಿದ್ದಂತೆ ಖಾಲಿಯಾಯ್ತು ₹9 ಲಕ್ಷ ರೂ

2 Min Read

Gold Price ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಇಂದಿನ ದರ ವಿವರ ಇಲ್ಲಿದೆ

1 Min Read

You Might Also Like

ದೇಶಪ್ರಮುಖ

Indian Navy Upgrade | INS ಮಾಲ್ವನ್ ನಾಳೆ ಭಾರತೀಯ ನೌಕಾಪಡೆಗೆ ಸೇರ್ಪಡೆ: ಸಮುದ್ರ ಭದ್ರತೆಗೆ ಮತ್ತೊಂದು ಸ್ವದೇಶಿ ಶಕ್ತಿ

2 Min Read
ಕರ್ನಾಟಕಪ್ರಮುಖ

Karnataka weather Report | ಜುಲೈ 25ರವರೆಗೆ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್: ಬೆಂಗಳೂರಿನಲ್ಲಿ ಮುಂದುವರಿಯಲಿದೆ ಮಳೆ, ಐಎಂಡಿ ಮುನ್ಸೂಚನೆ

2 Min Read
ಕರ್ನಾಟಕಪ್ರಮುಖ

Karnataka Cabinet Expension| ಕಾಂಗ್ರೆಸ್ ಕಲಿಗಳು ಮತ್ತೆ ದೆಹಲಿಗೆ: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಚರ್ಚೆ ತೀವ್ರ

2 Min Read
ಪ್ರಮುಖದೇಶವೈರಲ್

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?