Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ನಟ ಪ್ರಕಾಶ್‌ ರಾಜ್‌ಗೆ ಓಪನ್ ಚಾಲೆಂಜ್ ಹಾಕಿದ ಟಾಲಿವುಡ್‌ ನಿರ್ಮಾಪಕ
ಪ್ರಮುಖಮನರಂಜನೆ

ನಟ ಪ್ರಕಾಶ್‌ ರಾಜ್‌ಗೆ ಓಪನ್ ಚಾಲೆಂಜ್ ಹಾಕಿದ ಟಾಲಿವುಡ್‌ ನಿರ್ಮಾಪಕ

Share
2 Min Read
SHARE

newsics.com/ನ್ಯೂಸಿಕ್ಸ್

ನಟ ಪ್ರಕಾಶ್ ರಾಜ್ ವಿರುದ್ಧ ಈಗ ಟಾಲಿವುಡ್‌ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಮಧುರ ಶ್ರೀಧರ್ ರೆಡ್ಡಿ ಕೆಂಡಕಾರಿದ್ದಾರೆ.

ತಮ್ಮ ಟ್ವಿಟರ್‌ನಲ್ಲಿ ದೀರ್ಘ ಟ್ವೀಟ್‌ಗಳನ್ನು ಮಾಡಿರುವ ಮಧುರ ಶ್ರೀಧರ್‌ ರೆಡ್ಡಿ, ಬಹಿರಂಗ ಚರ್ಚೆಗೆ ಬರುವಂತೆ ಪ್ರಕಾಶ್‌ ರಾಜ್‌ಗೆ ಸವಾಲು ಹಾಕಿದ್ದಾರೆ.

ಮಧುರ ಶ್ರೀಧರ್‌ ಹೇಳಿದ್ದೇನು?

“ನಿಮ್ಮನ್ನು ನೀವು ವಿಶಾಲ ಮನಸ್ಸಿನವರು, ಉದಾರವಾದಿಗಳು, ಬುದ್ಧಿಜೀವಿಗಳು, ಮಹಾನ್ ಮೇಧಾವಿ ಎಂದು ಭಾವಿಸುತ್ತೀರಿ. ಆದರೆ, ವಾಸ್ತವದಲ್ಲಿ ನೀವು ತುಂಬಾ ಸಂಕುಚಿತ ಮನಸ್ಸಿನವರು, ಹುಸಿ ಜಾತ್ಯತೀತವಾದಿ. ಇತರರನ್ನು ‘ದ್ವೇಷ ಬಿತ್ತುವವರು’ (Hate mongers) ಎಂದು ಕರೆಯುವ ನೀವು, ಸ್ವತಃ ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ತೀವ್ರವಾಗಿ ದ್ವೇಷಿಸುತ್ತೀರಿ. ನೀವು ಮೋದಿ ಮತ್ತು ಬಿಜೆಪಿಯನ್ನು ದ್ವೇಷಿಸುವಷ್ಟು, ಯಾರೂ ಯಾರನ್ನೂ ದ್ವೇಷಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ ಮಧುರ ಶ್ರೀಧರ್‌ ರೆಡ್ಡಿ.

ಇದೇನಾ ನಿಮ್ಮ ಉದಾರವಾದ?

“ನೀವು ಒಂದು ಗುಂಪಿನ ಬಗ್ಗೆ ಮಾಡಿದ ದ್ವೇಷ ಭಾಷಣಗಳನ್ನು, ನೀವು ಇನ್ನೊಂದು ಗುಂಪನ್ನು ಗುರಿಯಾಗಿಸಿಕೊಂಡು ಹೇಗೆ ಪ್ರಚೋದಿಸಿದ್ದೀರಿ ಎಂಬುದನ್ನು ಎಲ್ಲರೂ ನೋಡಿದ್ದಾರೆ. ಅದಕ್ಕಾಗಿಯೇ ಈಗ ಜನರು ನಿಮ್ಮ ಬೂಟಾಟಿಕೆಯನ್ನು ಬಹಿರಂಗವಾಗಿ ಪ್ರಶ್ನಿಸುತ್ತಿದ್ದಾರೆ. ಜನರ ತೀರ್ಪು ನಿಮಗೆ ಇಷ್ಟವಾದರೆ ಅದನ್ನು ಪ್ರಜಾಪ್ರಭುತ್ವ ಎನ್ನುತ್ತೀರಿ, ಇಷ್ಟವಾಗದಿದ್ದರೆ ಅದನ್ನು ದ್ವೇಷದ ರಾಜಕಾರಣ ಎನ್ನುತ್ತೀರಿ. ನೀವು ಪ್ರಧಾನಿಯನ್ನು ಪ್ರತಿದಿನ ಪ್ರಶ್ನಿಸಬಹುದು, ಆದರೆ ನಿಮ್ಮನ್ನು ಯಾರಾದರೂ ಪ್ರಶ್ನಿಸಿದರೆ ತಕ್ಷಣ ಬ್ಲಾಕ್ ಮಾಡುತ್ತೀರಿ. ಇದೇನಾ ನಿಮ್ಮ ಉದಾರವಾದ? ನಿಮಗೆ ನಿಜವಾಗಿಯೂ ಧೈರ್ಯವಿದ್ದರೆ ನನ್ನನ್ನು ಅನ್‌ಬ್ಲಾಕ್ ಮಾಡಿ. ಬಹಿರಂಗ ಚರ್ಚೆ ಮಾಡೋಣ” ಎಂದು ಶ್ರೀಧರ್‌ ರೆಡ್ಡಿ ಹೇಳಿದ್ದಾರೆ.

ಚುನಾವಣೆಯಲ್ಲಿ ನಿಮಗೆ ಠೇವಣಿ ಕೂಡ ಸಿಕ್ಕಿಲ್ಲ

“ಪ್ರಕಾಶ್‌ ರಾಜ್‌, ನೀವು ಚಿತ್ರರಂಗದಿಂದ ಬಂದಿದ್ದೀರಿ. ನೀವು ಅವಮಾನಿಸಿದ ಪವನ್ ಕಲ್ಯಾಣ್ ಅವರು ಉಪಮುಖ್ಯಮಂತ್ರಿ ಆಗಿದ್ದಾರೆ. ನಟ ವಿಜಯ್ ಅವರು ಮುಖ್ಯಮಂತ್ರಿ ಆಗಲಿದ್ದಾರೆ. ಆದರೆ ನೀವು ಮಾತ್ರ ಒಂದು ಸಣ್ಣ ‘ಮಾ’ (MAA) ಚುನಾವಣೆಯಲ್ಲಿಯೂ ಸೋತಿದ್ದೀರಿ. ಕರ್ನಾಟಕದ ಚುನಾವಣೆಯಲ್ಲೂ ನಿಮಗೆ ಠೇವಣಿ ಸಿಗಲಿಲ್ಲ. ಮಾತನಾಡುವ ಮೊದಲು ಜನರ ತೀರ್ಪನ್ನು ಗೌರವಿಸುವುದನ್ನು ಕಲಿಯಿರಿ” ಎಂದು ಮಧುರ ಶ್ರೀಧರ್‌ ರೆಡ್ಡಿ ಕುಟುಕಿದ್ದಾರೆ.

ಯಾರು ಈ ಮಧುರ ಶ್ರೀಧರ್‌ ರೆಡ್ಡಿ?

ಮಧುರ ಶ್ರೀಧರ್ ರೆಡ್ಡಿ ಅವರು ಈ ಹಿಂದೆ ‘ಸ್ನೇಹಗೀತೆ’, ‘ಇಟ್ಸ್ ಮೈ ಲವ್ ಸ್ಟೋರಿ’ ಅಂತಹ ಚಿತ್ರಗಳನ್ನು ನಿರ್ದೇಶಿಸಿದ್ದಾರೆ ಮತ್ತು ‘ದೊರಸಾನಿ’, ‘ಒಕ ಮನಸು’ ಮುಂತಾದ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಪ್ರಕಾಶ್ ರಾಜ್ ಮತ್ತು ಶ್ರೀಧರ್ ರೆಡ್ಡಿ ನಡುವಿನ ಈ ಜಗಳ ಈಗ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ. ಕೆಲವರು ಪ್ರಕಾಶ್ ರಾಜ್ ಅವರ ಪ್ರಶ್ನಿಸುವ ಗುಣವನ್ನು ಬೆಂಬಲಿಸಿದರೆ, ಇನ್ನು ಮಧುರ ಶ್ರೀಧರ್ ರೆಡ್ಡಿ ಅವರ ಮಾತುಗಳನ್ನು ಸಮರ್ಥಿಸುತ್ತಿದ್ದಾರೆ. ಅಂದಹಾಗೆ, ಈ ಹಿಂದೆಯೂ ಕೂಡ ಪ್ರಕಾಶ್‌ ರಾಜ್‌ ಅವರನ್ನು ಮಧುರ ಶ್ರೀಧರ್ ರೆಡ್ಡಿ ಟೀಕಿಸಿದ್ದರು.

https://x.com/madhurasreedhar/status/2052337009184944284?ref_src=twsrc%5Etfw%7Ctwcamp%5Etweetembed%7Ctwterm%5E2052337009184944284%7Ctwgr%5Eff8ffd67bdc84879d57bee92de03483695717f52%7Ctwcon%5Es1_c10&ref_url=https%3A%2F%2Fapi-news.dailyhunt.in%2F

https://x.com/madhurasreedhar/status/2052325525226660112?ref_src=twsrc%5Etfw%7Ctwcamp%5Etweetembed%7Ctwterm%5E2052325525226660112%7Ctwgr%5E136a07a659dcfbcfca23928a38c1bf5e320503c1%7Ctwcon%5Es1_c10&ref_url=https%3A%2F%2Fapi-news.dailyhunt.Pin

 

ಸ್ಟೈಲಿಶ್ ಆಗಿ ಹೇರ್ ಕಟ್ ಮಾಡಿಸಿಕೊಂಡ ಕೋತಿ!

 

TAGGED:Tollywood producer issues open challenge to actor Prakash Raj
Share This Article
Facebook Twitter Copy Link Print
Previous Article ಸ್ಟೈಲಿಶ್ ಆಗಿ ಹೇರ್ ಕಟ್ ಮಾಡಿಸಿಕೊಂಡ ಕೋತಿ!
Next Article FIR ಇದ್ದರೆ ಸರ್ಕಾರಿ ಕೆಲಸ ಸಿಗಲ್ವಾ? ಕಾನೂನು ಏನು ಹೇಳುತ್ತೆ?

Popular Posts

Actress Bhvya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?