newsics.com/ನ್ಯೂಸಿಕ್ಸ್
ಬೆಂಗಳೂರು: ಪತ್ನಿಯ ನಡತೆಯ ಮೇಲೆ ಸಂಶಯಗೊಂಡು ಆಕೆಯ ಕೊಲೆಗೆ ಯತ್ನಿಸಿದ ಪತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಬೆಂಗಳೂರಿನ ದಾಸನಪುರದಲ್ಲಿ ನಡೆದಿದೆ.
https://youtube.com/shorts/gjYZnQ_VPsc?si=qVOf4mHBsp6RN8ZV
ಮೂಲತಃ ಬಿಹಾರದ ದಂಪತಿಗಳಾದ ಸೋನಾಲಿ ಮತ್ತು ಸಂಜಯ್ ಅವರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ಇಲ್ಲಿನ ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರಿಗೂ ಇದು ಎರಡನೇ ವಿವಾಹವಾಗಿತ್ತು ಎನ್ನಲಾಗಿದೆ. ಸಂಜಯ್ ಸದಾ ಮದ್ಯಪಾನ ಮಾಡಿ ಸೋನಾಲಿ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ.
ಪತಿಯ ಕಿರುಕುಳ ತಾಳಲಾರದೆ ಸೋನಾಲಿ ಅವರು ಬೇರೆಯಾಗಿ ವಾಸಿಸುವ ನಿರ್ಧಾರ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಸಂಜಯ್, ತನ್ನ ಬೈಕ್‌ನಲ್ಲಿ ಬಂದು ರಸ್ತೆಯಲ್ಲೇ ಸೋನಾಲಿ ಜೊತೆ ಜಗಳವಾಡಿದ್ದಾನೆ. ವಾಗ್ವಾದ ತಾರಕಕ್ಕೇರಿದಾಗ ತನ್ನ ಬಳಿಯಿದ್ದ ಚಾಕು ತೆಗೆದು ಸೋನಾಲಿ ಕುತ್ತಿಗೆಯ ಬಳಿ ಹಿಡಿದು ಹಲ್ಲೆ ನಡೆಸಲು ಮುಂದಾಗಿದ್ದಾನೆ.
ಇದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ತಕ್ಷಣವೇ ಧಾವಿಸಿ ಬಂದು ಸಂಜಯ್‌ನನ್ನು ತಡೆದಿದ್ದಾರೆ. ಚಾಕು ಕಸಿದುಕೊಂಡು ಮಹಿಳೆಯ ಪ್ರಾಣ ಕಾಪಾಡಿದ ಸ್ಥಳೀಯರು, ಬಳಿಕ ಆತನನ್ನು ಕಟ್ಟಿಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.