newsics.com/ನ್ಯೂಸಿಕ್ಸ್
ಬೆಂಗಳೂರು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಡೆದ ಸಾರಿಗೆ ನೌಕರರ ಸಂಧಾನ ಸಭೆ ವಿಫಲವಾಗಿದ್ದು , ಈ ಹಿನ್ನಲೆಯಲ್ಲಿ ಸಾರಿಗೆ ನೌಕರರು ಮೇ ೨೦ರಿಂದ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.
https://youtube.com/shorts/A7gPa–K6QY?si=UClQxtCV5fiwGWUd
ಶಾಂತಿನಗರದ ಸಾರಿಗೆ ಇಲಾಖೆಯ ಪ್ರಧಾನ ಕಚೇರಿಯಲ್ಲಿ ಬುಧವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾರಿಗೆ ನೌಕರರ ಬೇಡಿಕೆಯನ್ನು ಆಲಿಸಿ, ನಿಮ್ಮ ಅಹವಾಲನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಆದಷ್ಟು ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಸರ್ಕಾರಕ್ಕೆ ಸಾರಿಗೆ ನೌಕರರ ಬಗ್ಗೆ ನಿಜವಾದ ಕಾಳಜಿ ಇದ್ದೇ ಇದೆ. ಸಾರಿಗೆ ನೌಕರರಿಗೆ ನಾಲ್ಕು ವರ್ಷ ಮೊದಲೇ ೭ನೇ ವೇತನ ಆಯೋಗ ನೇಮಿಸಿ ಶೇ.೨೭.೫ ವೇತನ ಹೆಚ್ಚಳ ಘೋಷಿಸಿರುವ ರಾಜ್ಯ ಸರ್ಕಾರವು ಸಾರಿಗೆ ನೌಕರರ ವಿಷಯದಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿರುವುದು ಸಾರಿಗೆ ನೌಕರರ ಆಕ್ರೋಶಕ್ಕೆ ಕಾರಣವಾಗಿದೆ. ಸಚಿವರೊಂದಿಗೆ ನಡೆದ ಸಭೆ ಬಳಿಕ ಸಾರಿಗೆ ನೌಕರರು ಸಭೆ ನಡೆಸಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.
ನೌಕರರ ಬೇಡಿಕೆ:
ಬಾಟಾ ಮತ್ತಿತರ ಭತ್ಯೆಗಳನ್ನು ಹೆಚ್ಚಿಸಬೇಕು, ೧೨ ತಿಂಗಳ ಉಳಿದಿರುವ ಬಾಕಿ ಹಣವನ್ನು ಸೇವೆಯಲ್ಲಿರುವ ಹಾಗೂ ನಿವೃತ್ತ ನೌಕರರಿಗೆ ಪಾವತಿಸಬೇಕು. ೨೬ ತಿಂಗಳ ಬಾಕಿ ಹಣ ೧೨೭೨ ಕೋಟಿ ರೂ.ಒಂದೇ ಕಂತಿನಲ್ಲಿ ಪಾವತಿಸಬೇಕು.
೪೫೦ ಕೋಟಿ ರೂ. ಬಿಡುಗಡೆ
ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ೨೦೨೧ ಜ.೧ರಿಂದ ೨೦೨೩ ೆ.೨೮ರವರೆಗಿನ ೨೬ ತಿಂಗಳ ವೇತನ ಪರಿಷ್ಕರಣೆ ಬಾಕಿ ಹಣದಲ್ಲಿ ಮೊದಲ ಕಂತಾಗಿ ೪೫೦ ಕೋಟಿ ರೂ. ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದರಲ್ಲಿ ಕೆಎಸ್‌ಆರ್‌ಟಿಸಿ ೧೪೩ ಕೋಟಿ ರೂ., ಬಿಎಂಟಿಸಿ ೧೩೭ ಕೋಟಿ ರೂ., ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ೮೭ ಕೋಟಿ ರೂ. ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ೮೧ ಕೋಟಿ ರೂ. ಸೇರಿದಂತೆ ಒಟ್ಟು ೧೪೦ ಕೋಟಿ ರೂ. ನಾಲ್ಕು ಸಂಸ್ಥೆಯ ಅಧಿಕಾರಿ/ನೌಕರರಿಗೆ ಈ ಅನುದಾನ ವಿತರಣೆಯಾಗಲಿದೆ.