newsics.com/ನ್ಯೂಸಿಕ್ಸ್
ಯುವಕನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದು, ಮಗುವಾದ ಬಳಿಕ ಆತ ಮದುವೆಗೆ ನಿರಾಕರಿಸಿದಾಗ ಯುವತಿ ಅ*ತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಒಪ್ಪಿಗೆಯ ಸಹಬಾಳ್ವೆಯಿಂದ ಹೊರನಡೆಯುವುದು ಕ್ರಿಮಿನಲ್ ಅಪರಾಧವಲ್ಲ ಎಂದು ಸ್ಪಷ್ಟಪಡಿಸಿದೆ.
https://youtube.com/shorts/A7gPa–K6QY?si=UClQxtCV5fiwGWUd
ಇಲ್ಲಿ ಯುವತಿಯೊಬ್ಬಳು ಯುವಕನ ಜೊತೆ ಲಿವ್ ಇನ್ ಸಂಬಂಧದಲ್ಲಿ ಇದ್ದಳು. ಮಗುವೂ ಆಯಿತು. ಕೊನೆಗೆ ಅವನು ಮದುವೆಗೆ ನಿರಾಕರಿಸಿದ. ಏಕೆಂದರೆ ಅಲ್ಲಿಗೆ ಅವನ ಕೆಲಸ ಮುಗಿದಿತ್ತು. ಈಗ ಏನಿದ್ದರೂ ಸವಾಲು ಈ ಯುವತಿಯದ್ದು ಅಷ್ಟೇ. ಬೇರೆ ದಾರಿ ಕಾಣದೇ ರೇ*ಪ್ ಕೇಸ್ ಹಾಕಿದಳು. ಅದು ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಅದು ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರ ಪೀಠದ ಮುಂದೆ ವಿಚಾರಣೆ ಬಂದಿತ್ತು. ಇಂಥ ಸಂಬಂಧಗಳ ಬಗ್ಗೆ ನ್ಯಾಯಮೂರ್ತಿಗಳು ಏನು ಹೇಳಿದ್ದಾರೆ ನೋಡಿ.
ವಿವಾಹ ಬಂಧವಿಲ್ಲದೆಯೇ ಲಿವ್-ಇನ್ ಸಂಬಂಧದಿಂದ ಹೊರನಡೆಯುವುದು ಕ್ರಿಮಿನಲ್ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಿವಾಹದ ಸುಳ್ಳು ನೆಪದಲ್ಲಿ ಪುರುಷನೊಬ್ಬ ತನ್ನ ಮೇಲೆ ಅ*ತ್ಯಾಚಾರ ಮತ್ತು ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಒಪ್ಪಿಗೆಯ ಲಿವ್-ಇನ್ ಸಂಬಂಧಗಳು ಮತ್ತು ಕ್ರಿಮಿನಲ್ ಲೈಂ*ಗಿಕ ಅಪರಾಧಗಳ ನಡುವಿನ ವ್ಯತ್ಯಾಸಗಳನ್ನು ಕೋರ್ಟ್ ಒತ್ತಿಹೇಳಿದೆ.
ಮಗುವಿಗೆ ಜೀವನಾಂಶವನ್ನು ಪಡೆಯಬಹುದು, ಆದರೆ ಲಿವ್-ಇನ್ ಸಂಬಂಧದ ಸ್ಥಗಿತವು ಕ್ರಿಮಿನಲ್ ಅಪರಾಧಕ್ಕೆ ಕಾರಣವಾಗುವುದಿಲ್ಲ ಎಂದಿದ್ದಾರೆ.