newsics.com/ನ್ಯೂಸಿಕ್ಸ್
ಬೆಳಗಾವಿ : ನಗರದಲ್ಲಿ ವಕೀಲೆಯೊಬ್ಬರ ಮನೆ ಮೇಲೆ ದುಷ್ಕರ್ಮಿಗಳು ಗುಂದಿನ ದಾಳಿ ನಡೆಸಿರುವ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ.
ಶನಿವಾರ ತಂಡರಾತ್ರಿ ವೇಳೆ ದುಷ್ಕರ್ಮಿಗಳು ಏಕಾಏಕಿಯಾಗಿ ಗುಂಡಿನ ದಾಳಿ ಬೆಳಗಾವಿ ನಗರದ ಮಂಡೋಳಿ ರಸ್ತೆಯಲ್ಲಿರುವ ಪೂಜಾ ಕಾಕತಕರ್ ಎಂಬ ವಕೀಲೆಯ ಮನೆಯ ಮೊದಲ ಮಹಡಿ ಮೇಲೆ ದುಷ್ಕರ್ಮಿಗಳು ಫೈರಿಂಗ್ ನಡೆಸಿದ್ದು, ಕಿಡಕಿ ಗಾಜುಗಳು ಪುಡಿಯಾಗಿವೆ ಘಟನೆಯು ನಡೆದಿದೆ.
ವಕೀಲೆ ಮಗಳು ರಾತ್ರಿ ಮನೆಯ ಮೊದಲ ಮಹಡಿಯಲ್ಲಿ ಕುಳಿತಿದ್ದಳು. ತಡ ರಾತ್ರಿ ಯಾದ್ದರಿಂದ ಕೆಳಗೆ ಬರುವಂತೆ ಪೋಷಕರು ಕರೆದಿದ್ದಾರೆ. ಮಗಳು ಕೆಳಗೆ ಬಂದ ಕೆಲ ಸಮಯದಲ್ಲೇ ಗುಂಡಿನ ದಾಳಿ ನಡೆದಿದೆ. ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾರೆ.
ವಕೀಲೆ ಪೂಜಾ ಕಾಕತಕರ್ ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಎಫ್ ಎಸ್ ಎಲ್ ತಂಡ, ಆಗಮಿಸಿ ಗುಂಡನ್ನು ವಶಕ್ಕೆ ಪಡೆದು, ತನಿಖೆ ಮುಂದು ವರೆಸಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಷ್ಯಾ ಅಧ್ಯಕ್ಷ ಪುಟಿನ್ ಜೀವಿತಾವಧಿ 150 ವರ್ಷಕ್ಕೆ ವಿಸ್ತರಿಸಲು ಸಂಜೀವಿನಿ ಕಂಡು ಹಿಡಿದ ವಿಜ್ಞಾನಿಗಳು.!