newsics.com/ನ್ಯೂಸಿಕ್ಸ್
ದಾಂಪತ್ಯ ಜೀವನ ಹಾಲು ಜೇನಿನಂತೆ ಇರಲು, ಗಂಡ ಹೆಂಡತಿ ಹೊಂದಾಣಿಕೆಯಿಂದ ಖುಷಿ ಖುಷಿಯಾಗಿ ಸಂಸಾರ ನಡೆಸಲು ಈ ಕೆಲವೊಂದು ಸೂತ್ರಗಳನ್ನು ಪಾಲಿಸಬೇಕು. ನೀವು ಕೂಡ ಈ ಸರಳ ಸಲಹೆಗಳನ್ನು ಪಾಲಿಸಿದರೆ ಸುಖ ದಾಂಪತ್ಯ ಜೀವನ ನಿಮ್ಮದಾಗುತ್ತದೆ.
ಸುಖಿ ದಾಂಪತ್ಯ ನಿಮ್ಮದಾಗಲು ಈ ಸಲಹೆ ಪಾಲಿಸಿ:
ಪರಸ್ಪರ ಸ್ವಾತಂತ್ರ್ಯ ನೀಡಿ: ಎಲ್ಲರೂ ಸ್ವಾತಂತ್ರ್ಯವನ್ನು ಪ್ರೀತಿಸುತ್ತಾರೆ. ಮದುವೆ ಎಂದರೆ ನಿಮ್ಮ ಸಂಗಾತಿಯನ್ನು ನಿಯಂತ್ರಿಸುವುದು ಎಂದಲ್ಲ. ಇಬ್ಬರೂ ಸಂಗಾತಿಗಳು ತಮ್ಮ ಆಸಕ್ತಿಗಳು ಮತ್ತು ಉತ್ಸಾಹಗಳನ್ನು ಮುಂದುವರಿಸಲು ಸ್ವಾತಂತ್ರ್ಯವನ್ನು ನೀಡಬೇಕು. ಹಾಗೆ ಮಾಡಬೇಡಿ ಹೀಗೆ ಮಾಡಬೇಡಿ ಎಂದು ಸಂಗಾತಿಯನ್ನು ಕಟ್ಟಿಹಾಕಬಾರದು, ಅವರಿಗೂ ಸ್ವಾತಂತ್ರ್ಯವನ್ನು ನೀಡಬೇಕು. ಇದು ಸಂಬಂಧವನ್ನು ತಾಜಾವಾಗಿರಿಸುತ್ತದೆ ಮತ್ತು ಪರಸ್ಪರ ಪ್ರೀತಿ, ಗೌರವವನ್ನೂ ಹೆಚ್ಚಿಸುತ್ತದೆ.
ಸಣ್ಣ ವಿಷಯಗಳಲ್ಲಿ ಸಂತೋಷವನ್ನು ಕಂಡುಕೊಳ್ಳಿ: ಜೀವನದಲ್ಲಿ ಸಂತೋಷದ ಕ್ಷಣಗಳು ದುಃಖದ ಕ್ಷಣಗಳು ಬರುತ್ತಲೇ ಇರುತ್ತವೆ. ಈ ದುಃಖಗಳನ್ನೆಲ್ಲಾ ಬದಿಗಿಟ್ಟು ಸಣ್ಣ ಸಣ್ಣ ಸಂತೋಷಗಳನ್ನು ಆರಿಸಿಕೊಳ್ಳಬೇಕು. ಇದು ದಾಂಪತ್ಯ ಜೀವನದಲ್ಲಿ ಸಂತೋಷವನ್ನು ತರುತ್ತದೆ. ಅದರಲ್ಲೂ ಒಟ್ಟಿಗೆ ಸಮಯ ಕಳೆಯುವಂತಹದ್ದು, ಡಿನ್ನರ್ ಡೇಟ್‌ಗೆ ಹೋಗುವಂತಹದ್ದು, ಟ್ರಿಪ್ಗೆ ಹೋಗುವುದು, ಸರ್‌ಪ್ರೈಸ್ ನೀಡುವುದು ಈ ರೀತಿಯ ಸಣ್ಣಪುಟ್ಟ ವಿಚಾರಗಳು ದಾಂಪತ್ಯ ಜೀವನವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.
ಮನಸ್ತಾಪವನ್ನು ಪರಿಹರಿಸಿ: ಗಂಡ ಹೆಂಡತಿಯ ಮಧ್ಯೆ ಸಣ್ಣಪುಟ್ಟ ಜಗಳಗಳು ಮನಸ್ತಾಪಗಳು ನಡೆಯುತ್ತಲೇ ಇರುತ್ತವೆ. ಈ ಜಗಳಗಳನ್ನು ಮುಂದುವರೆಸಲು ಬಿಡಬೇಡಿ, ಮಲಗುವ ಮುನ್ನ ಮನಸ್ತಾಪಗಳನ್ನು ಪರಿಹಸರಿಸಿಯೇ ಮಲಗಿ. ತಪ್ಪುಗಳನ್ನು ಕ್ಷಮಿಸಿ ಮತ್ತು ಪ್ರೀತಿಯಿಂದ ಮಾತನಾಡಿ. ಈ ರೀತಿ ಮಾಡುವುದರಿಂದ ನಿಮ್ಮ ಬಂಧ ಇನ್ನಷ್ಟು ಬಲಗೊಳ್ಳುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷವೂ ನೆಲೆಸುತ್ತದೆ.
ಪರಸ್ಪರ ಸಹಾಯ ಮಾಡುವುದು: ಗಂಡ ಹೆಂಡತಿ ಕೆಲಸದಲ್ಲಿ ಪರಸ್ಪರ ಸಹಾಯ ಮಾಡಬೇಕು. ಅದರಲ್ಲೂ ಪುರುಷರು ಮನೆಕೆಲಸಗಳಲ್ಲಿ ತಮ್ಮ ಹೆಂಡತಿಗೆ ಕೈಲಾದಷ್ಟು ಸಹಾಯವನ್ನು ಮಾಡಬೇಕು. ಹೀಗೆ ಹಂಚಿಕೊಂಡು ಕೆಲಸ ಮಾಡಿದಾಗ ಇದು ಸಂಬಂಧದಲ್ಲಿ ಸಮಾನತೆ ಮತ್ತು ಪ್ರೀತಿಯನ್ನು ಹೆಚ್ಚಿಸುತ್ತದೆ.
ಪರಸ್ಪರ ಗೌರವ : ಪ್ರೀತಿಯಂತೆ ಸಂಬಂಧದಲ್ಲಿ ಗೌರವವೂ ಮುಖ್ಯ. ನಿಮ್ಮ ಸಂಗಾತಿಯ ಕೆಲಸ ಮತ್ತು ನಿರ್ಧಾರಗಳನ್ನು ನೀವು ಗೌರವಿಸದಿದ್ದರೆ, ಸಂಬಂಧವು ದೀರ್ಘಕಾಲ ಉಳಿಯುವುದಿಲ್ಲ. ಪರಸ್ಪರರ ಸಾಧನೆಗಳ ಬಗ್ಗೆ ಹೆಮ್ಮೆ ಪಡುವುದು ಮತ್ತು ಕಷ್ಟದ ಸಮಯದಲ್ಲಿ ಪರಸ್ಪರರ ಜೊತೆಯಾಗಿ ನಿಲ್ಲುವುದು ಈ ಎಲ್ಲಾ ಪುಟ್ಟ ಅಂಶಗಳು ಸಂಬಂಧವನ್ನು ಬಲಪಡಿಸುತ್ತದೆ.
ಸಂವಹನದ ಮಾರ್ಗಗಳನ್ನು ಮುಕ್ತವಾಗಿಡಿ: ಹೆಚ್ಚಿನ ಸಂಬಂಧಗಳು ಮುರಿದು ಬೀಳುವುದು ಸಂಗಾತಿಗಳು ಪರಸ್ಪರ ಮಾತನಾಡುವುದನ್ನು ನಿಲ್ಲಿಸುವುದರಿಂದಲೇ. ಕೋಪದಲ್ಲಿ ಮಾತು ಬಿಡುವ ಬದಲು, ಇಬ್ಬರೂ ಕುಳಿತು ಮಾತನಾಡಿ. ಸಂವಹನವೇ ಪ್ರತಿಯೊಂದು ಸಮಸ್ಯೆಗೂ ಪರಿಹಾರ.
ಕಡಿಮೆ ನಿರೀಕ್ಷೆ, ಹೆಚ್ಚಿನ ಹೊಂದಾಣಿಕೆ: ಇಲ್ಲಿ ಯಾರೂ ಪರಿಪೂರ್ಣರಲ್ಲ. ನ್ಯೂನತೆಗಳು ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಆದ್ದರಿಂದ ಸಂಗಾತಿಯ ನ್ಯೂನತೆಗಳನ್ನು ಒಪ್ಪಿಕೊಳ್ಳಲು ಕಲಿಯಿರಿ. ಹೊಂದಾಣಿಕೆಯಿಂದ ಜೀವನ ನಡೆಸಿ. ಖಂಡಿತವಾಗಿಯೂ ಈ ವಿಚಾರ ದಾಂಪತ್ಯ ಜೀವನದಲ್ಲಿ ಸಂತೋಷ ನೆಲೆಸುವಂತೆ ಮಾಡುತ್ತದೆ.
ರಷ್ಯಾ ಅಧ್ಯಕ್ಷ ಪುಟಿನ್ ಜೀವಿತಾವಧಿ 150 ವರ್ಷಕ್ಕೆ ವಿಸ್ತರಿಸಲು ಸಂಜೀವಿನಿ ಕಂಡು ಹಿಡಿದ ವಿಜ್ಞಾನಿಗಳು.!