Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಪ್ರಮುಖ > ಟಾಕ್ಸಿಕ್’ ಸಿನಿಮಾದ ಬಗ್ಗೆ ನಟ ಯಶ್ ಹೇಳಿದ್ದೇನು?
ಮನರಂಜನೆಪ್ರಮುಖ

ಟಾಕ್ಸಿಕ್’ ಸಿನಿಮಾದ ಬಗ್ಗೆ ನಟ ಯಶ್ ಹೇಳಿದ್ದೇನು?

Share
2 Min Read
SHARE

ಟಾಕ್ಸಿಕ್ ಟೀಸರ್‌ನಲ್ಲಿ ‘ಸೆಕ್ಸ್ ಪ್ರಚೋದಿಸುವ ಅಶ್ಲೀಲ  ದೃಶ್ಯಗಳಿವೆ. ಅವು ಅಪ್ರಾಪ್ತ ವಯಸ್ಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂಬ ಚರ್ಚೆಗಳು ಆಗಿತ್ತು. ಈ ಬಗ್ಗೆ ಭಾರಿ ಟೀಕೆಗೆ ಗುರಿಯಾಗಿತ್ತು. ಈ ಬಗ್ಗೆ ಈಗ ಯಶ್‌ (Yash) ಕ್ಲಾರಿಟಿ ಕೊಟ್ಟಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ‘ಟಾಕ್ಸಿಕ್’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕನ್ನಡ ಜೊತೆಗೆ ಇಂಗ್ಲೀಷ್‌ನಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಿದೆ. ಅಮೆರಿಕಾ ಸೇರಿ ಹೊರ ದೇಶಗಳಲ್ಲಿ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ಅಮೇರಿಕನ್ ಕಂಟೆಂಟ್ ಕ್ರಿಯೇಟರ್ ಮತ್ತು ಹೋಸ್ಟ್ ಸಬೀನ್ ಫಹೀಮ್ ಇತ್ತೀಚೆಗೆ ಸಿನಿಮಾಕಾನ್‌ನಲ್ಲಿ ಯಶ್ ಅವರೊಂದಿಗೆ ಸಂವಾದ ನಡೆಸಿದರು. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಸಂವಾದದ ವೀಡಿಯೊದಲ್ಲಿ, ಗೀತು ಅವರಂತಹ ಮಹಿಳಾ ನಿರ್ದೇಶಕಿ ಟಾಕ್ಸಿಕ್‌ನಂತಹ ಆಕ್ಷನ್ ಚಿತ್ರವನ್ನು ನಿರ್ದೇಶಿಸುವುದನ್ನು ಭಾರತದಲ್ಲಿ ನೋಡುವುದು ಅಪರೂಪ ಎಂದು ಅವರು ಹೇಳಿದ್ದಾರೆ.

ದಕ್ಷಿಣ ಭಾರತದ ಸಿನಿ ರಸಿಕರು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಸಿನಿಮಾ ಅಂದ್ರೆ ಅದು ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’. ನಟಿ ಗೀತು ಮೋಹನ್ದಾಸ್ ನಿರ್ದೇಶನದ ಈ ಚಿತ್ರದಲ್ಲಿ ನಟ ಯಶ್ ನಾಯಕರಾಗಿ ನಟಿಸುತ್ತಿದ್ದಾರೆ. ‘ಕೆಜಿಎಫ್ 2’ ನಂತರ ಯಶ್ ನಟಿಸುತ್ತಿರುವ ಸಿನಿಮಾ ಇದಾಗಿದ್ದು, ನಿರೀಕ್ಷೆಗಳು ಮುಗಿಲುಮುಟ್ಟಿವೆ. ಈ ಹಿಂದೆ ಮಾರ್ಚ್ 19ಕ್ಕೆ ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿತ್ತು, ಆದರೆ ಪಶ್ಚಿಮ ಏಷ್ಯಾದ ಯುದ್ಧದ ಕಾರಣದಿಂದ ಮುಂದೂಡಲಾಗಿತ್ತು. ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ಸುದೇವ್ ನಾಯರ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

ಸದ್ಯ, ಯಶ್ ತಮ್ಮ ಸಿನಿಮಾ ಬಗ್ಗೆ ಹಂಚಿಕೊಂಡ ಮಾತುಗಳು ಸಖತ್ ಚರ್ಚೆಯಾಗುತ್ತಿವೆ. ‘ಟಾಕ್ಸಿಕ್’ ಒಂದು ಮಹಿಳಾ ದೃಷ್ಟಿಕೋನದ ಗ್ಯಾಂಗ್‌ಸ್ಟರ್ ಸಿನಿಮಾ ಅಂತ ಯಶ್ ಹೇಳಿದ್ದಾರೆ. “ಸಾಮಾನ್ಯವಾಗಿ ಆ್ಯಕ್ಷನ್ ಸಿನಿಮಾಗಳನ್ನು ಗಂಡಸರೇ ನಿರ್ದೇಶನ ಮಾಡೋದು. ಭಾರತದಲ್ಲಿ ಇದು ಮಾಮೂಲಿ. ಆದರೆ, ಒಂದು ದೊಡ್ಡ ಬಜೆಟ್‌ನ ಆ್ಯಕ್ಷನ್ ಸಿನಿಮಾ, ಅದ್ರಲ್ಲೂ ಮಹಿಳೆಯೊಬ್ಬರ ದೃಷ್ಟಿಕೋನದಲ್ಲಿ ಮೂಡಿಬರುತ್ತಿರುವ ಗ್ಯಾಂಗ್‌ಸ್ಟರ್ ಸಿನಿಮಾ ಅನ್ನೋದು ನಿಜಕ್ಕೂ ಹೊಸತು.

ಅವರ ಆಲೋಚನೆಗಳು ತುಂಬಾನೇ ಸ್ಪಷ್ಟವಾಗಿವೆ. ತಮ್ಮ ಕೆಲಸದ ಮೇಲೆ ಅವರಿಗೆ ಅಚಲವಾದ ನಂಬಿಕೆ ಇದೆ. ಅಷ್ಟೇ ಅಲ್ಲ, ಅವರು ಒಬ್ಬ ಅದ್ಭುತ ಬರಹಗಾರ್ತಿ ಕೂಡ. ನಾನು ಅವರಿಂದ ಕಲಿಯೋದು ಸಾಕಷ್ಟಿದೆ. ಪ್ರೀತಿ, ಆಸೆ, ಭಾವನೆಗಳನ್ನ ಒಬ್ಬ ಮಹಿಳೆ ಎಷ್ಟು ವಿಭಿನ್ನವಾಗಿ ವ್ಯಕ್ತಪಡಿಸ್ತಾರೆ, ತೆರೆ ಮೇಲೆ ತರ್ತಾರೆ ಅನ್ನೋದನ್ನ ಈ ಸಿನಿಮಾದ ಜರ್ನಿಯಲ್ಲಿ ನಾನು ತಿಳ್ಕೊಂಡೆ” ಎಂದು ಯಶ್ ಹೇಳಿದ್ದಾರೆ. ಸಬೀನ್ ಫಹೀಮ್ ಜೊತೆಗಿನ ಸಂದರ್ಶನವೊಂದರಲ್ಲಿ ಯಶ್ ಈ ಮಾತುಗಳನ್ನ ಹಂಚಿಕೊಂಡಿದ್ದಾರೆ.

 

https://www.instagram.com/reel/DXf-SmECs1-/?igsh=eW9zbWc0b254bWFz

Bride escapes with lover ಪ್ರಿಯಕರನೊಂದಿಗೆ ವಧು‌ ಪರಾರಿ: ಮದುವೆ ಮನೆಯಲ್ಲಿ ಫುಲ್ ಟೆನ್ಶನ್!

TAGGED:What did actor Yash say about the movie 'Toxic'?
Share This Article
Facebook Twitter Copy Link Print
Previous Article Bride escapes with lover ಪ್ರಿಯಕರನೊಂದಿಗೆ ವಧು‌ ಪರಾರಿ: ಮದುವೆ ಮನೆಯಲ್ಲಿ ಫುಲ್ ಟೆನ್ಶನ್!
Next Article Ashwini vaishnav visit BEML ಬಿಇಎಂಎಲ್‌ಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಭೇಟಿ, ಬುಲೆಟ್ ರೈಲು ಪ್ರಗತಿ ಪರಿಶೀಲನೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಪ್ರಮುಖದೇಶಮನರಂಜನೆ

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read
ಕರ್ನಾಟಕಮನರಂಜನೆ

Toxic New Song | ಯಶ್–ತಾರಾ ಸುತಾರಿಯಾ ಜೋಡಿಯ ‘ಮನಮೋಹಕ’ ಹಾಡು ಬಿಡುಗಡೆ

1 Min Read
ವಿದೇಶಮನರಂಜನೆ

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?