Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ನೇಪಾಳದಲ್ಲಿ ಪ್ರತಿಭಟನೆ: ಗೃಹ ಸಚಿವರ ರಾಜೀನಾಮೆ
ಪ್ರಮುಖಈ ದಿನವಿದೇಶ

ನೇಪಾಳದಲ್ಲಿ ಪ್ರತಿಭಟನೆ: ಗೃಹ ಸಚಿವರ ರಾಜೀನಾಮೆ

Share
2 Min Read
SHARE

 

newsics.com

ಕಳೆದ ವರ್ಷ ನೇಪಾಳದಲ್ಲಿ ಭುಗಿಲೆದ್ದ ವಿದ್ಯಾರ್ಥಿ ಪ್ರತಿಭಟನೆಗಳ ಬಳಿಕ ಅಲ್ಲಿನ ಸರ್ಕಾರ ಉರುಳಿತ್ತು. ಇದೀಗ ಚುನಾವಣೆಯಲ್ಲಿ ರ‍್ಯಾಪರ್‌ ಕಂ ರಾಷ್ಟ್ರೀಯ ನಾಯಕ ಬಾಲೆನ್ ಶಾ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ತಿಂಗಳಿನಲ್ಲಿ ಹೊಸ ಸರ್ಕಾರದ ವಿರುದ್ದ ಜನಾಕ್ರೋಶ ಭುಗಲೆದಿದ್ದು, ಈ ಆಕ್ರೋಶಕ್ಕೆ‌ ಗೃಹಸಚಿವರ ತಲೆದಂಡವಾಗಿದೆ.

ವಿದ್ಯಾರ್ಥಿಗಳು, ರಾಜಕೀಯ ಗುಂಪುಗಳು ಮತ್ತು ಸಾಮಾನ್ಯ ನಾಗರಿಕರು ಸೇರಿದಂತೆ ಪ್ರತಿಭಟನಾಕಾರರು ಕಠ್ಮಂಡು ಮತ್ತು ಇತರ ನಗರಗಳಲ್ಲಿ ಬೀದಿಗಿಳಿದಿದ್ದಾರೆ. ಸದ್ಯ ಈ ಪ್ರತಿಭಟನೆಗಳು ಬೀದಿಗಳಿಂದ ದೇಶದ ಆಡಳಿತ ಕೇಂದ್ರವಾದ ಸಿಂಘಾ ದರ್ಬಾರ್‌ಗೆ ಹರಡಿವೆ. ಈ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿರುವುದು ಭಾರತದಿಂದ ತರುವ ಸರಕುಗಳ ಮೇಲಿನ ಕಡ್ಡಾಯ ಸುಂಕ ಸೇರಿದಂತೆ ವಿದ್ಯಾರ್ಥಿ ಯೂನಿಯನ್‌ ಬ್ಯಾನ್‌ ಮಾಡಿರುವುದು.

ನೇಪಾಳದಲ್ಲಿ ಭಾರತದ ಗಡಿಗೆ ಹೊಂದಿಕೊಂಡಿರುವ ಪ್ರಾಂತ್ಯದ ಜನರು ಬಹುತೇಕವಾಗಿ ತಮ್ಮ ದೈನಂದಿನ ಜೀವನದ ಮೇಲೆ ಭಾರತೀಯ ವಸ್ತುಗಳನ್ನು ಅವಲಂಬಿಸಿದ್ದಾರೆ. ಆದರೆ, ಇದೀಗ ಬಾಲೆನ್‌ ಶಾ ಸರ್ಕಾರ ಭಾರತದಿಂದ ತರುವ 100 ರೂ.ಗಿಂತ ಹೆಚ್ಚಿನ ಮೌಲ್ಯದ ಸರಕುಗಳ ಮೇಲೆ ಕಡ್ಡಾಯ ಕಸ್ಟಮ್ಸ್ ಸುಂಕ ವಿಧಿಸಿ ಆದೇಶ ಹೊರಡಿಸಿದೆ. ಇದು ತಮ್ಮ ದೈನಂದಿನ ಜೀವನವೆಚ್ಚವನ್ನು ಹೆಚ್ಚು ಮಾಡಲಿದೆ ಎಂದು ಸಾರ್ಜನಿಕರಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಸರ್ಕಾರ ಜನಸಾಮಾನ್ಯರ ಹಾಗೂ ಈ ದೇಶಗಳಲ್ಲಿನ ವಾಸ್ತವಿಕ ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಟೀಕೆ ವ್ಯಕ್ತವಾಗುತ್ತಿದೆ.

ಕಳೆದ ಬಾರಿ ನೇಪಾಳದಲ್ಲಿ ಭ್ರಷ್ಟಚಾರದ ಆಡಳಿತ ಎಂದು ಆರೋಪಿಸಿ ನಡೆದ ಜೆನ್‌-ಝಿ ಪ್ರತಿಭಟನೆಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದೇ ವಿದ್ಯಾರ್ಥಿ ಸಂಘಗಳು. ಇದೀಗ ನೇಪಾಳದ ಸರ್ಕಾರ ವಿದ್ಯಾರ್ಥಿ ಸಂಘಗಳನ್ನು ಬ್ಯಾನ್‌ ಮಾಡಲು ಮುಂದಾಗಿದೆ. ಇದು ಸದ್ಯ ತಮ್ಮ ಸ್ವತಂತ್ರದ ಹಕ್ಕನ್ನನು ಕಸಿದುಕೊಳ್ಳುವ ಪ್ರಯತ್ನವೆಂದು ಕೂಗು ಕೇಳಿಬರುತ್ತಿದ್ದು, ಸರ್ಕಾರ ಸಂವಾದದಲ್ಲಿ ತೊಡಗಿಸಿಕೊಳ್ಳುವ ಬದಲು ದಮನಕಾರಿ ವಿಧಾನವನ್ನು ಅಳವಡಿಸಿಕೊಂಡಿದೆ ಎಂದು ವಿದ್ಯಾರ್ಥಿ ಮುಖಂಡರು ಆರೋಪಿಸಿದ್ದಾರೆ. ಇದು ಸದ್ಯ ನೇಪಾಳದ ಯುವ ಸಮುದಾಯದಲ್ಲಿ ಸರ್ಕಾರದ ವಿರುದ್ದ ಅಸಮಾಧಾನವನ್ನು ಹೆಚ್ಚಿಸುತ್ತಿದ್ದು, ದೇಶಾದ್ಯಂತ ಸಾವಿರಾರು ವಿದ್ಯಾರ್ಥಿಗಳು, ಶಾಲಾ ಮತ್ತು ಕಾಲೇಜು ಗುಂಪುಗಳ ನೇತೃತ್ವದಲ್ಲಿ ಅನೇಕ ಪ್ರತಿಭಟನಾ ರ‍್ಯಾಲಿಗಳನ್ನು ನಡೆಸುತ್ತಿವೆ.
ಇವೆಲ್ಲದರ ಜೊತೆಗೆ ಈ ಹೋರಾಟಗಳು ರಾಜಕೀಯ ತಿರುವನ್ನು ಪಡೆದುಕೊಂಡಿದ್ದು, ನೇಪಾಳದ ಗೃಹ ಸಚಿವ ಸುಡಾನ್ ಗುರುಂಗ್ ರಾಜೀನಾಮೆ ನೀಡಬೇಕೆಂಬ ಬೇಡಿಕೆ ಹೆಚ್ಚಿತ್ತು.

TAGGED:There are calls for the resignation of Nepal's Home Minister.
Share This Article
Facebook Twitter Copy Link Print
Previous Article ಲೆನ್ಸ್‌ಕಾರ್ಟ್‌ನಲ್ಲಿ 12 ಸಾವಿರ ರೂ. ಮೌಲ್ಯದ ಕನ್ನಡಕ ಖರೀದಿಸಿ ಅಲ್ಲೇ ಒಡೆದುಹಾಕಿದ ವ್ಯಕ್ತಿ; ವೈರಲ್ ವಿಡಿಯೋ ನೋಡಿ
Next Article ಟ್ರಂಪ್ ನಿದ್ದೆಗೆಡಿಸಿರುವ ಇರಾನ್ ಸೊಳ್ಳೆ ಪಡೆ

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?