ಲೆನ್ಸ್‌ಕಾರ್ಟ್ ಸಂಸ್ಥೆ ಬಿಂದಿ ಮತ್ತು ತಿಲಕ ಧರಿಸಲು ನಿರ್ಬಂಧ ಹೇರಿರುವ ವಿಚಾರ ವಿವಾದಕ್ಕೆ ತಿರುಗಿದ್ದು ಪ್ರತಿಭಟನೆಗೆ ಕಾರಣವಾಗಿದೆ. ವ್ಯಕ್ತಿಯೊಬ್ಬ ಲೆನ್ಸ್‌ಕಾರ್ಟ್‌ನಿಂದ ಕನ್ನಡಕ ಖರೀದಿಸಿ ನಂತರ ಅದನ್ನು ಪುಡಿ ಪುಡಿ ಮಾಡಿದ್ದಾನೆ. ಈ ವಿಡಿಯೊ ಭಾರಿ ವೈರಲ್ ಆಗಿದೆ.
ವ್ಯಕ್ತಿಯೊಬ್ಬರು ಲೆನ್ಸ್‌ಕಾರ್ಟ್ ಮಳಿಗೆಯಿಂದ 12,000 ರುಪಾಯಿ ಕನ್ನಡಕವನ್ನು ಖರೀದಿಸಿದ್ದಾರೆ. ಶೋರೂಂನಿಂದ ಹೊರ ಬರುತ್ತಿದ್ದಂತೆ ಆ ಹೊಸ ಕನ್ನಡಕವನ್ನು ಕಾಲಿನಿಂದ ತುಳಿದು ಅಲ್ಲೇ ಪುಡಿ ಪುಡಿ ಮಾಡಿದ್ದಾರೆ. ʼʼಹಿಂದೂ ಧರ್ಮದ ಮೇಲೆ ಇಷ್ಟು ವಿರೋಧ ಯಾಕೆ? ನಮ್ಮನ್ನು ಯಾರು ಗೌರವಿಸುವುದಿಲ್ಲವೋ ಅವರನ್ನು ನಾವು ಗೌರವಿಸುವುದಿಲ್ಲʼʼ ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.