Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Personal Health ತಣ್ಣೀರು ಸ್ನಾನದಿಂದ ಲೈಂಗಿಕ ಉತ್ತೇಜನ ಸಾಧ್ಯವೇ? ತಜ್ಞರು ಹೇಳಿದ್ದೇನು?
ಪ್ರಮುಖಆರೋಗ್ಯರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ತಣ್ಣೀರು ಸ್ನಾನದಿಂದ ಲೈಂಗಿಕ ಉತ್ತೇಜನ ಸಾಧ್ಯವೇ? ತಜ್ಞರು ಹೇಳಿದ್ದೇನು?

Share
2 Min Read
SHARE

newsics.com/ ನ್ಯೂಸಿಕ್ಸ್

Personal Health

ತೀವ್ರ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಪುರುಷರ ಲೈಂಗಿಕ ಶಕ್ತಿ ನೇರವಾಗಿ ಕಡಿಮೆಯಾಗುತ್ತದೆಯೇ?

ಬಿಸಿ ನೀರಿನ ಸ್ನಾನದಿಂದ ಪುರುಷರ ಸಂತಾನಶಕ್ತಿಯೇ ಕಡಿಮೆಯಾಗುತ್ತದೆ ಎಂದು ಹೆದರಿಸುವವರೂ ಇದ್ದಾರೆ.

ಮುಖ್ಯವಾಗಿ ವೃಷಣಗಳ ತಾಪಮಾನ. ವೃಷಣಗಳು ದೇಹದ ಹೊರಗೆ ಇರುವುದಕ್ಕೆ ಮುಖ್ಯ ಕಾರಣ – ದೇಹದೊಳಗಿನಕ್ಕಿಂತ ಸ್ವಲ್ಪ ಕಡಿಮೆ ತಾಪಮಾನದಲ್ಲಿ ವೀರ್ಯ ಉತ್ಪಾದನೆ ಉತ್ತಮವಾಗಿರುತ್ತದೆ.

ತುಂಬಾ ಬಿಸಿ ನೀರು (hot water) ಆಗಾಗ ಬಳಸಿದರೆ ಸ್ಪರ್ಮ್ ಉತ್ಪಾದನೆ ತಾತ್ಕಾಲಿಕವಾಗಿ ಕಡಿಮೆಯಾಗಬಹುದು. ಸ್ಪರ್ಮ್ ಗುಣಮಟ್ಟದ ಮೇಲೂ ಸ್ವಲ್ಪ ಪರಿಣಾಮ ಬೀರಬಹುದು.

ಲೈಂಗಿಕ ಆಸಕ್ತಿ (libido) ಅಥವಾ ನಿಮಿರುವಿಕೆ ಮೇಲೆ ಬಿಸಿ ನೀರಿನ ನೇರ ಪರಿಣಾಮ ಸಾಮಾನ್ಯವಾಗಿ ಇರುವುದಿಲ್ಲ. ಆದರೆ, ದೀರ್ಘಕಾಲ ತುಂಬಾ ಬಿಸಿ ಸ್ನಾನದಿಂದ ದೇಹದ ಮೇಲೆ ಒತ್ತಡ ಬಿದ್ದು ಹಾರ್ಮೋನ್‌ಗಳಿಗೆ ಸಣ್ಣ ಮಟ್ಟದ ಪರಿಣಾಮ ಸಾಧ್ಯ. ಯಾವಾಗ ಸಮಸ್ಯೆ ಆಗಬಹುದು ಎಂದರೆ, ದಿನವೂ ತುಂಬಾ ಬಿಸಿ ನೀರಿನಲ್ಲಿ ಹೆಚ್ಚು ಸಮಯ (15-20 ನಿಮಿಷಕ್ಕಿಂತ ಹೆಚ್ಚು) ಸ್ನಾನ ಮಾಡಿದರೆ. ಸೌನಾ, ಸ್ಟೀಮ್ ಬಾತ್ ಹೆಚ್ಚು ಬಳಸಿದರೆ ಅಪಾಯವುಂಟಾಗಬಹುದು.

ತಾತ್ಕಾಲಿಕ ಬಂಜೆತನಕ್ಕೆ ಆಹ್ವಾನ

2007ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ಪ್ರಕಾರ, ಹೆಚ್ಚಾದ ಬಿಸಿ ನೀರಿನ ಸ್ನಾನ ಪುರುಷ ಬಂಜೆತನಕ್ಕೆ ಕಾರಣವಾಗಬಹುದು. ನೀರಿನ ತಾಪಮಾನ 37 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿದ್ದು, 30 ನಿಮಿಷಕ್ಕಿಂತ ಹೆಚ್ಚು ಸಮಯ ಸ್ನಾನ ಮಾಡಿದರೆ ವೀರ್ಯಾಣುಗಳ ಗುಣಮಟ್ಟ ಮತ್ತು ಅವುಗಳ ಸಂಖ್ಯೆ ಎರಡೂ ಕೂಡ ತಾತ್ಕಾಲಿಕವಾಗಿ ಕುಸಿಯಬಹುದು. ಬಿಸಿ ನೀರಿನಿಂದ ಸ್ನಾನ ಮಾಡುವುದನ್ನು ನಿಲ್ಲಿಸಿದ ತಿಂಗಳುಗಳ ಬಳಿಕ ವೀರ್ಯಾಣುಗಳ ಸಂಖ್ಯೆ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಇದರ ಜತೆಗೆ ಬಿಗಿಯಾದ ಬಟ್ಟೆ ಧರಿಸುವುದು, ಧೂಮಪಾನ ಮಾಡುವುದು ಮತ್ತು ಇತರ ಕೆಲವು ಜೀವನಶೈಲಿ ವೀರ್ಯಾಣುಗಳ ಸಂಖ್ಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಹಾಗಾದರೆ ಸುರಕ್ಷಿತ ಯಾವುದು? ಮಧ್ಯಮ ಬಿಸಿ ನೀರು ಉತ್ತಮ. ಹೆಚ್ಚು ಬಿಸಿ ನೀರನ್ನು ನಿರಂತರವಾಗಿ ಬಳಸಬೇಡಿ. ಸಂತಾನೋತ್ಪತ್ತಿ ಬಗ್ಗೆ ಯೋಚಿಸುತ್ತಿದ್ದರೆ ವಿಶೇಷವಾಗಿ ಜಾಗ್ರತೆ ಬೇಕು.

ತಣ್ಣೀರು ಸ್ನಾನ ದೇಹಕ್ಕೆ ಹಲವಾರು ಲಾಭಗಳನ್ನು ಕೊಡಬಹುದು. ತಣ್ಣೀರು ದೇಹಕ್ಕೆ ತಾಕಿದಾಗ ರಕ್ತ ನಾಳಗಳು ಕಿರಿದಾಗುತ್ತವೆ. ನಂತರ ಮತ್ತೆ ವಿಸ್ತಾರವಾಗುತ್ತವೆ. ಇದರಿಂದ ರಕ್ತ ಸಂಚಾರ ಉತ್ತಮವಾಗುತ್ತದೆ. ತಣ್ಣೀರು ಸ್ನಾನ ಮಾಡಿದಾಗ ದೇಹ ಅಲರ್ಟ್‌ ಆಗುತ್ತದೆ. ಒತ್ತಡ ಕಡಿಮೆಯಾಗಿ, ಮೂಡ್‌ ಸುಧಾರಿಸುತ್ತದೆ. ಬೆಳಗ್ಗೆ ಸ್ನಾನ ಮಾಡಿದರೆ ದಿನವಿಡೀ ಫ್ರೆಶ್‌ ಫೀಲ್‌ ಇರುತ್ತದೆ.

ಕೆಲವು ಅಧ್ಯಯನಗಳು ಹೇಳುವಂತೆ, ತಣ್ಣೀರು ಸ್ನಾನದಿಂದ ರೋಗ ಪ್ರತಿರೋಧ ಶಕ್ತಿ ಉತ್ತಮವಾಗುತ್ತದೆ. ಸ್ನಾಯು ನೋವು ಕಡಿಮೆಯಾಗುತ್ತದೆ. ವ್ಯಾಯಾಮದ ನಂತರ ತಣ್ಣೀರು ಸ್ನಾನ ಮಾಡಿದರೆ ಸ್ನಾಯು ಉರಿಯೂತ ಕಡಿಮೆ. ಆದ್ದರಿಂದ ಅಥ್ಲೀಟ್ಸ್‌ ಹೆಚ್ಚು ಇದನ್ನು ಬಳಸುತ್ತಾರೆ. ಸಂಜೆ ಸ್ವಲ್ಪ ತಣ್ಣೀರು ಸ್ನಾನ ಮಾಡಿದರೆ ದೇಹ ರಿಲ್ಯಾಕ್ಸ್‌ ಆಗುವುದರಿಂದ ನಿದ್ರೆಯ ಗುಣಮಟ್ಟ ಉತ್ತಮವಾಗುತ್ತದೆ. ಆದರೆ ತುಂಬಾ ಚಳಿ ಇದ್ದಾಗ ದಿಡೀರ್‌ ಕೋಲ್ಡ್‌ ಬಾತ್‌ ಅಪಾಯಕರ. ಹೃದಯ ಸಮಸ್ಯೆ ಇದ್ದವರು ತಣ್ಣೀರು ಸ್ನಾನವನ್ನು ನಿಧಾನವಾಗಿ ಶುರು ಮಾಡಬೇಕು.

Sexual life ಲೈಂಗಿಕ ಉತ್ಸಾಹ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ…l

ಗಂಡ-ಹೆಂಡತಿ ನಡುವಿನ ಯಾವುದೇ ಬಗೆಯ ಲೈಂಗಿಕ ಕ್ರಿಯೆ ಅಪರಾಧವಲ್ಲ: ತೀರ್ಪು ನೀಡಿದ ಹೈಕೋರ್ಟ್

ಮೌಖಿಕ ಲೈಂಗಿಕ ಕ್ರಿಯೆಯಿಂದ ಬಾಯಿ ಕ್ಯಾನ್ಸರ್ ಅಪಾಯ?

Relationship ಕಡಿಮೆ ಲೈಂಗಿಕ ಸಂಪರ್ಕ ಹೊಂದುವವರಲ್ಲಿ ಹತ್ತಾರು ಆರೋಗ್ಯ ಸಮಸ್ಯೆ!

TAGGED:Can cold showers increase sexual arousal? What do experts say?
Share This Article
Facebook Twitter Copy Link Print
Previous Article ದಳಪತಿ ವಿಜಯ್ ಡಿವೋರ್ಸ್ ಕೇಸ್‌ಗೆ ಟ್ವಿಸ್ಟ್!..
Next Article ASTRO ಶನಿ ಮಹರ್ದಶೆ ಶುರು: ಈ ರಾಶಿಗಳ ಜನರಿಗೆ 19 ವರ್ಷ ರಾಜಯೋಗ!

Popular Posts

ಪ್ರತಿಭಟನೆ ವೇಳೆ CJP ನಾಯಕ ‘ಅಭಿಜಿತ್ ದೀಪ್ಕೆ’ಗೆ ಕಪಾಳ ಮೋಕ್ಷ ; ವೈರಲ್ ವಿಡಿಯೋ ನೋಡಿ

1 Min Read

ಹೆಂಡತಿ ಇನ್ನೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದು ನೋಡಿ ಗಂಡ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 16-06-2026, ಮಂಗಳವಾರ, ಹೇಗಿದೆ ಇಂದಿನ ನಿಮ್ಮ ಗ್ರಹಗತಿ?

4 Min Read
ಕರ್ನಾಟಕದೇಶಪ್ರಮುಖ

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read
ಕರ್ನಾಟಕಪ್ರಮುಖ

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read
ಕರ್ನಾಟಕದೇಶಪ್ರಮುಖ

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Social Networks

Facebook-f Instagram Twitter
Welcome Back!

Sign in to your account

Lost your password?