newsics.com
ಶಾಲಾ ಶಿಕ್ಷಣವನ್ನೂ ಪೂರ್ಣಗೊಳಿಸದ ನಟಿ ಆಲಿಯಾ ಭಟ್ ಇಂದು ಜನಪ್ರಿಯ ನಟಿ ಮತ್ತು ಬಹುಕೋಟಿ ಒಡತಿ. ಹೌದು ಆಲಿಯಾ ಭಟ್ ಎನ್ನುವ ಸುಂದರ ಮುಖದ ನಟಿ ಪಿಯುಸಿ ಕೂಡಾ ಕಂಪ್ಲೀಟ್ ಮಾಡಿಲ್ಲ.
ಚಿತ್ರರಂಗದ ಹಲವು ತಾರೆಯರ ಮಕ್ಕಳು ಯುವ ನಟರಾಗಿ ಯಶಸ್ವಿಯಾಗಿ ಹೆಜ್ಜೆ ಹಾಕುತ್ತಿದ್ದಾರೆ. ಖ್ಯಾತ ನಿರ್ದೇಶಕರ ಮಗಳಾಗಿರುವ ಆಲಿಯಾ ಭಟ್ ಗೆ ಬಾಲಿವುಡ್ ಹೊಸದಾಗಿರಲಿಲ್ಲ. ಬೇಕಾದಷ್ಟು ಪರಿಚಯ, ಕಾಂಟ್ಯಾಕ್ಟ್ಗಳೂ ಇದ್ದವು. ಇಷ್ಟಿದ್ದರೂ ಬೃಹತ್ ಬಾಲಿವುಡ್ ಎಂಬ ಸಾಗರದಲ್ಲಿ ಈಜೋದೇನು ಅಷ್ಟು ಸುಲಭ ಅಲ್ಲವೇ ಅಲ್ಲ, ಆದರೆ ಈ ವಿಚಾರದಲ್ಲಿ ಆಲಿಯಾಗೆ ಭೇಷ್ ಹೇಳಲೇಬೇಕು
ನಿರ್ದೇಶಕ ಮಹೇಶ್ ಭಟ್ ಅವರ ಪುತ್ರಿ ಆಲಿಯಾ ಭಟ್ ಅವರು ಕರಣ್ ಜೋಹರ್ ಅವರ ಚಿತ್ರದಲ್ಲಿ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು. 12ನೇ ತರಗತಿಯನ್ನೂ ಪೂರ್ಣಗೊಳಿಸದೆ ಶಾಲೆಯನ್ನು ಮಧ್ಯದಲ್ಲಿಯೇ ಬಿಟ್ಟು ನಟನೆಯಲ್ಲಿ ಆಸಕ್ತಿ ತೋರಿದ ಆಲಿಯಾ ಭಟ್ ಅವರಿಗೆ ಸತತ ಅವಕಾಶಗಳು ಬಂದಿದ್ದು, ಇಲ್ಲಿಯವರೆಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಇತರ ಬಾಲತಾರೆಗಳಿಗಿಂತ ಭಿನ್ನವಾಗಿ, ಅವರು ಸಿಕ್ಕ ಪ್ರತಿಯೊಂದು ಅವಕಾಶವನ್ನು ಸದುಪಯೋಗಪಡಿಸಿಕೊಂಡರು.
ಆಲಿಯಾ ಭಟ್ ನಟ ರಣಬೀರ್ ಕಪೂರ್ ಅವರನ್ನು ವಿವಾಹವಾಗಿದ್ದಾರೆ. ಮಗಳು ರಾಹಾ ಕಪೂರ್ ಇದ್ದಾರೆ. ಪ್ರಸ್ತುತ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿರುವ ಆಲಿಯಾ ಭಟ್ ಚಿತ್ರಗಳ ನಿರ್ಮಾಣವನ್ನು ಮುಂದುವರೆಸಿದ್ದಾರೆ. ಅವರು ನಟಿಸುವ ಚಿತ್ರಗಳಂತೆ ಅವರು ನಿರ್ಮಿಸುವ ಚಿತ್ರಗಳೂ ಹಿಟ್ ಆಗಿವೆ. ಇನ್ನೂ ದುಬಾರಿ ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ಆಲಿಯಾ ಭಟ್ ಹಲವಾರು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗೆ ಸಾವಿರಾರು ಕೋಟಿಗಳ ಒಡೆಯ. ದಕ್ಷಿಣ ಭಾರತದ ಟ್ರಿಪಲ್ ಆರ್ ಸಿನಿಮಾದಲ್ಲೂ ನಟಿಸಿರುವ ಆಲಿಯಾ ಭಟ್ ಈಗ ಶ್ರೀಲಂಕಾದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಈಗ ನೂರು ಕೋಟಿಗೂ ಹೆಚ್ಚು ಆಸ್ತಿಯ ಒಡತಿ.