newsics.com
ಜನರು ತಮ್ಮ ಆದ್ಯತೆಗಳಿಗೆ ಅನುಗುಣವಾಗಿ ಯಾವ ರೀತಿಯ ಮದ್ಯ ಬೇಕೋ ಅದನ್ನು ಆಯ್ಕೆ ಮಾಡುತ್ತಾರೆ. ಆಲ್ಕೋಹಾಲ್ ವಿಧಗಳಲ್ಲಿ ‘ಟಕಿಲಾ’ ಶಾಟ್ ಕೂಡ ಸೇರಿದೆ. ಈ ಪಾನೀಯವನ್ನು ಹೆಚ್ಚಾಗಿ ಯುವಜನತೆ ಕುಡಿಯಲು ಇಷ್ಟಪಡುತ್ತಾರೆ. ಆದ್ರೆ ಟಕಿಲಾ ಶಾಟ್ ಕುಡಿಯುವುದರಿಂದ ಅಪಾಯ ಗ್ಯಾರಂಟಿ.
ಹೈಫೈ ಡ್ರಿಂಕ್ಸ್ ಆಗಿರುವ ಟಕಿಲಾಗೆ ಭಾರತ ಸೇರಿದಂತೆ ವಿಶ್ವದಾದ್ಯಂತ ಬೇಡಿಕೆ ಹೆಚ್ಚು. ರಾತ್ರಿ ನಡೆಯುವ ಸಣ್ಣ ಅಥವಾ ದೊಡ್ಡ ಪಾರ್ಟಿಗಳಲ್ಲಿ, ಪಬ್‌ಗಳಲ್ಲಿ ಟಕಿಲಾಗೆ ಹೆಚ್ಚಿನ ಆದ್ಯತೆ. ಆರೆಂಜ್ ಲಿಕ್ಕರ್ ಮತ್ತು ನಿಂಬೆ ಜ್ಯೂಸ್‌ನಿಂದ ತಯಾರಿಸುವ ಪಾನೀಯವನ್ನು ಟಕಿಲಾ ಎನ್ನಲಾಗುತ್ತದೆ. ಈ ಪಾನೀಯವನ್ನು ಉಪ್ಪು ಮತ್ತು ನಿಂಬೆ ಜತೆ ಸರ್ವ್ ಮಾಡಲಾಗುತ್ತದೆ. ಇದರ ಮೂಲ ಮೆಕ್ಸಿಕೋ. ಮೆಕ್ಸಿಕೋದಲ್ಲಿ ಟಕಿಲಾ ಅತ್ಯಂತ ಜನಪ್ರಿಯ ಪಾನೀಯವಾಗಿದೆ.
ಈ ಪಾನೀಯವನ್ನು ‘ಬ್ಲೂ ಅಗೇವ್ ಪ್ಲಾಂಟ್’ ಎಂಬ ವಿಶೇಷ ಹಣ್ಣನ್ನು ಬಳಸಿ ತಯಾರಿಸಲಾಗುತ್ತದೆ. ರೈತರು ಮೊದಲು ಈ ಹಣ್ಣನ್ನು ಬೆಳೆಸುತ್ತಾರೆ ಮತ್ತು ನಂತರ ಅದನ್ನು ಟಕಿಲಾ ಉತ್ಪಾದಿಸುವ ಕಂಪನಿಗಳಿಗೆ ಮಾರಾಟ ಮಾಡುತ್ತಾರೆ. ಟಕಿಲಾ ತಯಾರಿಸಲು ಕಂಪನಿಗಳು ಈ ಹಣ್ಣುಗಳನ್ನು ಸಂಸ್ಕರಿಸುತ್ತವೆ. ಭೂತಾಳೆ ಹಣ್ಣುಗಳನ್ನು ಯಂತ್ರದಿಂದ ರುಬ್ಬಿದ ನಂತರ ಅದರಿಂದ ರಸವನ್ನು ಹೊರತೆಗೆಯಲಾಗುತ್ತದೆ. ಈ ಹಣ್ಣುಗಳ ರಸವನ್ನು ಹಲವಾರು ಯಂತ್ರಗಳ ಮೂಲಕ ಬಟ್ಟಿ ಇಳಿಸಲಾಗುತ್ತದೆ. ಈ ರಸವು ಸಂಪೂರ್ಣವಾಗಿ ಟಕಿಲಾ ರೂಪದಲ್ಲಿದ್ದಾಗ, ಅದನ್ನು ಬಾಟಲ್ಗೆ ಹಾಕಲಾಗುತ್ತದೆ.
ಮೊದಲೇ ಎಲ್ಲರಿಗೂ ತಿಳಿದಿರುವಂತೆ ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ನೀವು ಆಲ್ಕೋಹಾಲ್ ಕುಡಿಯುವವರಾಗಿದ್ದರೆ ಇದನ್ನು ಕಡಿಮೆ ಮಾಡಿ. ತಜ್ಞರ ಪ್ರಕಾರ, ನೀವು ದಿನಕ್ಕೆ 50ಕ್ಕೂ ಹೆಚ್ಚು ಟಕಿಲಾ ಶಾಟ್ ತೆಗೆದುಕೊಂಡರೆ, ನಿಮ್ಮ ಜೀವಕ್ಕೆ ಅಪಾಯವಿದೆ. ಆದ್ದರಿಂದ ಟಕಿಲಾ ಕುಡಿಯುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ. ಟಕಿಲಾ ಸಾಮಾನ್ಯ ಮದ್ಯದಂತೆ ಕುಡಿಯುದಲ್ಲ. ವೋಡ್ಕಾದಂತಹ ಶಾಟ್ಗಳಲ್ಲಿ ಟಕಿಲಾವನ್ನು ಕುಡಿಯಲಾಗುತ್ತದೆ. ಟಕಿಲಾವು ಸರಿಸುಮಾರು 40 ಪ್ರತಿಶತ ಆಲ್ಕೋಹಾಲ್ ಅನ್ನು ಹೊಂದಿರುತ್ತದೆ.