newsics.com
ಪ್ರಿಯಾಂಕಾ ಚೋಪ್ರಾ ಜೀವನ ಈಗ ಹಾಲು-ಜೇನಿನಂತೆ ಸವಿಯಾಗಿದೆ. ಹೌದು, ಫಾರಿನರ್ ಗಂಡನ ಜೊತೆ ದೇಸಿ ಗರ್ಲ್ ವಿದೇಶದಲ್ಲಿಯೇ ಸೆಟ್ಲ್ ಆಗಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಜೋನಸ್ ಅವರು ಖ್ಯಾತ ಗಾಯಕ ನಿಕ್ ಜೋನಸ್ ಅವರನ್ನು ಮದುವೆಯಾಗಿ ವಿದೇಶದಲ್ಲಿಯೇ ನೆಲೆಸಿದ್ದಾರೆ. ನಟಿ ಸದ್ಯ ಹಾಲಿವುಡ್ ನಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಮುದ್ದಾದ ಜೋಡಿಯ ಹಾಟ್ ಫೊಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಿಕ್ ಜೋನಸ್ ಪತ್ನಿ ಪ್ರಿಯಾಂಕಾ ಚೋಪ್ರಾ ಜೊತೆ ಲಿಪ್ ಲಾಕ್ ಮಾಡಿದ್ದು, ಕ್ಯಾಲಿಫೋರ್ನಿಯಾದಲ್ಲಿ ಪತ್ನಿ ಜೊತೆಗೆ ಕಪಲ್ ಟೈಮ್ ಎಂಜಾಯ್ ಮಾಡಿದ್ದಾರೆ.
ಅದರಲ್ಲೂ ಇತ್ತೀಚೆಗೆ ನಿಕ್ ಜೋನಸ್ ಅವರು ಲವ್ಲೀ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ನಿಕ್ ಪ್ರಿಯಾಂಕಾ ಅವರನ್ನು ಹತ್ತಿರಕ್ಕೆ ಎಳೆದು ವಾ್ವ ಎನ್ನುತ್ತಾ ಕಿಸ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಈ ಪೋಸ್ಟ್ ಶೇರ್ ಮಾಡಿದ್ದು ಮೈ ಫಾರೆವರ್ ಡೇಟ್ ಎಂದು ಕ್ಯಾಪ್ಶನ್ ಕೂಡಾ ಕೊಟ್ಟಿದ್ದಾರೆ.