newsics.com
ಮುಂಬೈ: ಸೇತುವೆಯಿಂದ ಸಮುದ್ರಕ್ಕೆ ಹಾರಲು ಯತ್ನಿಸಿದ ಮಹಿಳೆಯನ್ನು ಕ್ಯಾಬ್ ಚಾಲಕ ಮತ್ತು ಸಂಚಾರ ಪೊಲೀಸರು ರಕ್ಷಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಸದ್ಯ ಈ ಸಂಬಂಧ ವಿಡಿಯೋ ವೈರಲ್ ಆಗಿದೆ. ಕ್ಯಾಬ್ ಚಾಲಕ, ಮಹಿಳೆ ಸೇತುವೆಯಿಂದ ಜಿಗಿಯಲು ಪ್ರಯತ್ನಿಸುತ್ತಿದ್ದಂತೆ ಆಕೆಯ ಕೂದಲು ಹಿಡಿದುಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು.
ಕಾರು ನಿಲ್ಲಿಸಿ ಮಹಿಳೆ ರಸ್ತೆ ದಾಟುತ್ತಿರುವ ಬಗ್ಗೆ ಕರೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಉಪಸ್ಥಿತಿಯ ಬಗ್ಗೆ ಪೊಲೀಸರಿಗೆ ಎಚ್ಚರಿಕೆ ನೀಡಿದ ನಂತರ, ಗಸ್ತು ವಾಹನವು ಸ್ಥಳಕ್ಕೆ ಧಾವಿಸಿತು. ಪೊಲೀಸರು ಆಕೆಯನ್ನು ಮಾತನಾಡಿಸಿದ್ದಾರೆ. ಸಮುದ್ರಕ್ಕೆ ಹಾರುವ ಯತ್ನದಲ್ಲಿದ್ದ ಮಹಿಳೆ, ಯಾರ ಮಾತಿಗೂ ಕಿವಿಗೊಡೆ ಸೇತುವೆ ಮೇಲಿಂದ ಜಿಗಿದಳು. ಆದರೆ, ಕ್ಯಾಬ್ ಚಾಲಕ ಮತ್ತು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಆಕೆಯನ್ನು ಹಿಡಿದು ರಕ್ಷಿಸುವಲ್ಲಿ ಯಶಸ್ವಿಯಾದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವರದಿಯ ಪ್ರಕಾರ ಮುಲುಂಡ್ ಮೂಲದ ಮಹಿಳೆ, 31 ವರ್ಷದ ಸಂಜಯ್ ಯಾದವ್ ಅವರನ್ನು ಸೇತುವೆಯ ಮೇಲೆ ಕ್ಯಾಬ್ ನಿಲ್ಲಿಸುವಂತೆ ಕೇಳಿಕೊಂಡಿದ್ದರು. ದೃಶ್ಯಗಳ ಪ್ರಕಾರ, ಮಹಿಳೆ ಅಟಲ್ ಸೇತುವಿನ ಸುರಕ್ಷತಾ ತಡೆಗೋಡೆಯ ಮೇಲೆ ಕುಳಿತಿದ್ದಳು. ಸಮುದ್ರಕ್ಕೆ ಏನನ್ನೋ ಎಸೆದ ಮಹಿಳೆ ತಾನೂ ಕೂಡ ಜಿಗಿಯಲು ಪ್ರಯತ್ನಿಸಿದಳು.
ಪೊಲೀಸರನ್ನು ನೋಡಿದ ಮಹಿಳೆ ಸಮುದ್ರಕ್ಕೆ ಹಾರಲು ಪ್ರಯತ್ನಿಸಿದಳು ಎಂದು ಹೇಳಲಾಗಿದೆ. ಆದರೆ, ಸಮಯಕ್ಕೆ ಸರಿಯಾಗಿ ಆಕೆಯ ಕೂದಲನ್ನು ಹಿಡಿದುಕೊಂಡ ಚಾಲಕನು ಮಹಿಳೆಯನ್ನು ರಕ್ಷಿಸಿದನು.