newsics.com
ಭಾರತೀಯ ಕ್ರಿಕೆಟ್ ಲೋಕದಲ್ಲಿ ತನ್ನ ಸ್ಪಿನ್ ಬೌಲಿಂಗ್ ಮೂಲಕ ಗಮನಸೆಳೆದ ಯುಜ್ವೇಂದ್ರ ಚಹಲ್ ಕಳೆದ ಕೆಲವು ದಿನಗಳಿಂದ ತಮ್ಮ ವೈಯಕ್ತಿಕ ವಿಷಯದ ಕಾರಣದಿಂದಾಗಿ ಸುದ್ದಿಯಲ್ಲಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಸಿಗರೇಟ್ ಸೇದಿ ರಸ್ತೆಯಲ್ಲಿ ಬಿಸಾಕಿ ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಷ್ಟೇ ಅಲ್ಲದೆ ಆ ಕುರಿತಾದ ವಿಡಿಯೋ ಕೂಡಾ ಎಲ್ಲೆಡೆ ವೈರಲ್ ಆಗಿತ್ತು. ಇವೆಲ್ಲದರ ಮಧ್ಯೆ ಇದೀಗ ಚಹಲ್ ಹೊಸ ವಿವಾದದ ಈಗ ನ್ಯಾಯಾಲಯದ ಮೆಟ್ಟಿಲೇರಿದೆ. ನಟಿ ವಿರುದ್ಧ ಯುಜ್ವೇಂದ್ರ ಚಾಹಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಚಾಹಲ್ ಇನ್ಸ್ಟಾಗ್ರಾಮ್ ನಲ್ಲಿ ನನಗೆ ಖಾಸಗಿ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ತಾನ್ಯಾ ಆರೋಪಿಸಿದ್ದರು. ಚಾಹಲ್ ‘ನೀವು ಮುದ್ದಾಗಿದ್ದೀರಿ’ ಎಂದು ಸಂದೇಶ ಕಳುಹಿಸಿರುವ ಎನ್ನಲಾದ ಸ್ಕ್ರೀನ್ ಶಾಟ್ ಅನ್ನು ತಾನ್ಯಾ ಚಟರ್ಜಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದಾದ ಬಳಿಕ ಸ್ಕ್ರೀನ್ ಶಾಟ್ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆ ತಾನ್ಯಾ ವಿರುದ್ಧ ಚಾಹಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ತಾನ್ಯಾ ಆರೋಪದ ನಂತರ, ನೆಟ್ಟಿಗರು ಚಾಹಲ್ ಅವರನ್ನು ತೀವ್ರವಾಗಿ ಟೀಕಿಸಿದರು. ಯುಜ್ವೇಂದ್ರ ಚಾಹಲ್ ತಕ್ಷಣವೇ ಇದಕ್ಕೆ ಪ್ರತಿಕ್ರಿಯಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಜನರು ಈ ಕಾಮೆಂಟ್‌ಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ. ಇದು ತಮ್ಮ ಕ್ರೀಡಾ ವೃತ್ತಿಜೀವನ ಮತ್ತು ಖ್ಯಾತಿಗೆ ಗಂಭೀರ ಹಾನಿಯನ್ನುಂಟುಮಾಡುತ್ತಿದೆ ಎಂದು ಭಾವಿಸಿ ಅವರು ಈ ಕಠಿಣ ಕಾನೂನು ಕ್ರಮ ಕೈಗೊಂಡುದ್ದಾರೆ. ಒಂದು ಸಣ್ಣ ಸುದ್ದಿ ಈಗ ಔಪಚಾರಿಕ ನ್ಯಾಯಾಲಯದ ಮೆಟ್ಟಿಲುಗಳನ್ನು ಏರುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸುತ್ತಿದೆ.
.