Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಫ್ಯಾನ್‌ನಿಂದ ಬಿಸಿ ಗಾಳಿ ಬರುತ್ತಿದೆಯೇ? ಈ ‘ಐಸ್ ಬೌಲ್ ಹ್ಯಾಕ್’ ಟ್ರೈ ಮಾಡಿ
ಲೈಫ್‌ಸ್ಟೈಲ್

ಫ್ಯಾನ್‌ನಿಂದ ಬಿಸಿ ಗಾಳಿ ಬರುತ್ತಿದೆಯೇ? ಈ ‘ಐಸ್ ಬೌಲ್ ಹ್ಯಾಕ್’ ಟ್ರೈ ಮಾಡಿ

Share
2 Min Read
SHARE

ಇತ್ತೀಚಿನ ದಿನಗಳಲ್ಲಿ ಭಾರತದ ಅನೇಕ ಮನೆಗಳು, ಅಂಗಡಿಗಳು ಮತ್ತು ಕಚೇರಿಗಳಲ್ಲಿ ಟೇಬಲ್ ಫ್ಯಾನ್‌ಗಳನ್ನು ಬಳಸಲಾಗುತ್ತದೆ. ನಿಮಗೆಲ್ಲರಿಗೂ ಅನುಭವಕ್ಕೆ ಬಂದಿರುವ ಹಾಗೆ ಭೀಕರ ಬಿಸಿಲು ಮತ್ತು ಸುಡುವ ಬೇಸಿಗೆಯಲ್ಲಿ, ಫ್ಯಾನ್ ತಣ್ಣನೆಯ ಗಾಳಿ ಬದಲು ಬಿಸಿ ಗಾಳಿಯನ್ನು ಹೊರಹಾಕಲು ಪ್ರಾರಂಭಿಸುತ್ತದೆ. ಫ್ಯಾನ್ ಬಿಸಿ ಗಾಳಿಯನ್ನು ನೀಡಿದಾಗ ಕೋಣೆಯ ಉಷ್ಣಾಂಶವೂ ಹೆಚ್ಚಾಗುತ್ತದೆ. ಇದರಿಂದ ಸೆಕೆ ಇನ್ನು ಜಾಸ್ತಿಯಾಗುತ್ತದೆ. ಇಂತಹ ಸಮಯದಲ್ಲಿ ಈ ‘ಐಸ್ ಬೌಲ್ ಹ್ಯಾಕ್’ (Ice Bowl Hack) ನಿಮಗೆ ತುಂಬಾ ಸಹಾಯ ಮಾಡುತ್ತದೆ. ಫ್ಯಾನ್ ಮುಂದೆ ಒಂದು ಪಾತ್ರೆಯಲ್ಲಿ ಐಸ್ ಇಡುವುದರಿಂದ ಗಾಳಿ ತಣ್ಣಗಾಗುತ್ತದೆ. ಇದು ಕೇವಲ ಮಿಥ್ಯೆಯಲ್ಲ, ಬದಲಿಗೆ ಅನೇಕ ಫ್ಯಾನ್ ತಯಾರಿಕಾ ಕಂಪನಿಗಳೇ ಸೂಚಿಸಿರುವ ಪದ್ಧತಿಯಾಗಿದೆ. ಈ ವಿಧಾನವು ಅಗ್ಗದ ದರದ್ದಾಗಿದ್ದು, ಅಳವಡಿಸಲು ಕೂಡ ಸುಲಭವಾಗಿದೆ.

ಒಣ ಹವಾಮಾನದಲ್ಲಿ ಇದು ಹೆಚ್ಚು ಪರಿಣಾಮಕಾರಿ
ಈ ವಿಧಾನವು ವಿಶೇಷವಾಗಿ ಒಣ ಹವಾಮಾನದಲ್ಲಿ (Dry weather) ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಮತ್ತು ಶಾಖದಿಂದ ತಕ್ಷಣದ ಸಮಾಧಾನ ನೀಡುತ್ತದೆ. ಇನ್ನು ಉತ್ತಮ ಕೂಲಿಂಗ್ ಬೇಕೆಂದರೆ ಪ್ರೀಮಿಯಂ ರೇಂಜ್‌ನ ಟೇಬಲ್ ಫ್ಯಾನ್‌ಗಳನ್ನು ಬಳಸಬಹುದು.

ಐಸ್ ಬೌಲ್ ಹ್ಯಾಕ್ ಸುಳ್ಳಲ್ಲ

ತೀವ್ರವಾದ ಬೇಸಿಗೆಯಲ್ಲಿ ಸೀಲಿಂಗ್ ಫ್ಯಾನ್ ಆಗಿರಲಿ ಅಥವಾ ಟೇಬಲ್ ಫ್ಯಾನ್ ಆಗಿರಲಿ, ಎಲ್ಲವೂ ಬಿಸಿ ಗಾಳಿಯನ್ನೇ ಹೊರಹಾಕುತ್ತವೆ. ಇದನ್ನು ತಪ್ಪಿಸಲು ನೀವು ಟೇಬಲ್ ಫ್ಯಾನ್ ಮುಂದೆ ಐಸ್ ತುಂಬಿದ ಬೌಲ್ ಇಡಬಹುದು. ಇದರಿಂದ ಕೋಣೆಯಲ್ಲಿ ತಂಪಾದ ಗಾಳಿಯ ಸಂಚಾರ ಉಂಟಾಗುತ್ತದೆ ಮತ್ತು ಉಷ್ಣತೆ ಕಡಿಮೆಯಾಗುತ್ತದೆ. ಇದು ವದಂತಿಯಲ್ಲ ಎಂಬುದು ಸತ್ಯ. ‘bestheating’ ಮತ್ತು ಫ್ಯಾನ್ ತಯಾರಿಸುವ ‘alfafans’ ನಂತಹ ಕಂಪನಿಗಳು ಕೂಡ ತಮ್ಮ ಲೇಖನಗಳಲ್ಲಿ ಈ ಉಪಾಯವನ್ನು ಸರಿ ಎಂದು ಹೇಳಿವೆ.

ಟೇಬಲ್ ಫ್ಯಾನ್ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?
ಫ್ಯಾನ್ ಮುಂದೆ ಐಸ್ ಇಟ್ಟರೆ ಗಾಳಿ ಹೇಗೆ ತಣ್ಣಗಾಗುತ್ತದೆ ಎಂದು ತಿಳಿಯುವ ಮೊದಲು, ಫ್ಯಾನ್ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯಬೇಕು. ಏಕೆಂದರೆ ಟೇಬಲ್ ಫ್ಯಾನ್‌ನಲ್ಲಿ ತಿರುಗುವ ಬ್ಲೇಡ್‌ಗಳಿರುತ್ತವೆ. ಇವು ಕೋಣೆಯ ಗಾಳಿಯನ್ನು ಚಲಿಸುವಂತೆ ಮಾಡುತ್ತವೆಯೇ ಹೊರತು, ಗಾಳಿಯನ್ನು ತಂಪು ಮಾಡುವುದಿಲ್ಲ. ಬದಲಿಗೆ, ಈ ಗಾಳಿಯು ನಮ್ಮ ದೇಹದ ಬೆವರನ್ನು ಆರಿಸುವ ಮೂಲಕ ನಮಗೆ ತಂಪಿನ ಅನುಭವ ನೀಡುತ್ತದೆ.

ಐಸ್ ಬೌಲ್ ಹೇಗೆ ತಣ್ಣನೆಯ ಗಾಳಿ ನೀಡುತ್ತದೆ?

ಫ್ಯಾನ್ ಗಾಳಿಯನ್ನು ತಂಪು ಮಾಡಲು ಐಸ್ ಬಳಸುವುದು ಸುಲಭದ ಹಾದಿ. ಗಾಳಿಯು ಐಸ್ ಮೇಲಿಂದ ಹಾದು ಹೋದಾಗ, ಅದು ತುಂಬಾ ತಣ್ಣಗಾಗುತ್ತದೆ. ನಂತರ ಅದೇ ತಂಪಾದ ಗಾಳಿಯನ್ನು ಫ್ಯಾನ್ ಕೋಣೆಯಾದ್ಯಂತ ಹರಡುತ್ತದೆ. ಈ ಕಾರಣದಿಂದ ಫ್ಯಾನ್ ಎದುರು ಐಸ್ ಇಟ್ಟರೆ ತಂಪು ಹೆಚ್ಚಾಗುತ್ತದೆ.

ಐಸ್ ಬೌಲ್ ಅನ್ನು ಎಲ್ಲಿ ಇಡಬೇಕು?
ಐಸ್ ತುಂಬಿದ ಬೌಲ್ ಅನ್ನು ನೇರವಾಗಿ ಫ್ಯಾನ್‌ನ ಎದುರು ಇರಿಸಿ. ಫ್ಯಾನ್‌ನಿಂದ ಬರುವ ಗಾಳಿಯ ಹರಿವು ಐಸ್ ಮೇಲಿಂದಲೇ ಹಾದುಹೋಗುವಂತೆ ನೋಡಿಕೊಳ್ಳಿ. ಗಾಳಿಯು ಐಸ್‌ನ ಸಂಪರ್ಕಕ್ಕೆ ಬಂದ ತಕ್ಷಣ ಅದು ತಂಪಾಗುತ್ತದೆ ಮತ್ತು ನಿಮಗೆ ತಂಪನೆಯ ಗಾಳಿಯ ಅನುಭವ ನೀಡುತ್ತದೆ. ಬೌಲ್‌ನಲ್ಲಿ ಸಾಕಷ್ಟು ಐಸ್ ಇರಲಿ, ಅದು ದೀರ್ಘಕಾಲ ಕರಗದೆ ಬರುವಂತಿರಲಿ.

ಡೇಟಿಂಗ್ ಆ್ಯಪ್‌ ಮೂಲಕ ಕೋಟಿ ಕೋಟಿ ಹಣ ಲೂಟಿ ಮಾಡಿದ್ದ ವಂಚಕ ಅರೆಸ್ಟ್

TAGGED:Hot air coming from the fan? Try this 'ice bowl hack'
Share This Article
Facebook Twitter Copy Link Print
Previous Article ಡೇಟಿಂಗ್ ಆ್ಯಪ್‌ ಮೂಲಕ ಕೋಟಿ ಕೋಟಿ ಹಣ ಲೂಟಿ ಮಾಡಿದ್ದ ವಂಚಕ ಅರೆಸ್ಟ್
Next Article ಹೊಟ್ಟೆಯ ಬೊಜ್ಜು ಬೆಣ್ಣೆಯಂತೆ ಕರಗಿಸಲು ಯಾವ ಟೀ ಉತ್ತಮ?

Popular Posts

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Devegowda grand daughter video viral |ಮರಿ ಮೊಮ್ಮಗಳೊಂದಿಗೆ ಆಟವಾಡಿದ ದೇವೇಗೌಡ-ಚೆನ್ನಮ್ಮ ದಂಪತಿಯ ಭಾವನಾತ್ಮಕ ವಿಡಿಯೋ ವೈರಲ್

2 Min Read

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

You Might Also Like

ಆರೋಗ್ಯ

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ವಿದೇಶ

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read
ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read
ಪ್ರಮುಖಲೈಫ್‌ಸ್ಟೈಲ್

Pan Card ನಿಮ್ಮ ಪ್ರಮುಖ ಪ್ಯಾನ್‌ ಕಾರ್ಡ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?