Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಐದು ವರ್ಷದ ಮೊಮ್ಮಗಳ ಮೇಲೆ ಪೊಲೀಸ್ ಅಜ್ಜಿಯ ಕ್ರೌರ್ಯ
ದೇಶಪ್ರಮುಖ

ಐದು ವರ್ಷದ ಮೊಮ್ಮಗಳ ಮೇಲೆ ಪೊಲೀಸ್ ಅಜ್ಜಿಯ ಕ್ರೌರ್ಯ

Share
1 Min Read
SHARE

ಅಜ್ಜಿಯೊಬ್ಬರು ತನ್ನ ಐದು ವರ್ಷದ ಮೊಮ್ಮಗಳ ಕೈ-ಕಾಲು ಕಟ್ಟಿಹಾಕಿ ರಣ ಬಿಸಿಲಿನಲ್ಲಿ ಮನೆಯಹೊರಗೆ ಮಲಗಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಮಗುವಿನ ಅಜ್ಜಿ ಮಕ್ಕಳ ರಕ್ಷಣೆಗಾಗಿ ಪೊಲೀಸ್ ಇಲಾಖೆಯಲ್ಲಿ ಇರುವ ‘ಮಹಿಳಾ ಮಿತ್ರ’ (ಮಹಿಳಾ ಹೆಲ್ಪ್‌ಡೆಸ್ಕ್) ಆಗಿ ಕೆಲಸ ಮಾಡುವ ಅಧಿಕಾರಿಯಾಗಿದ್ದು, ಈಕೆಯೇ ಮ್ಮೊಮ್ಮಗಳ ಮೇಲೆ ಕ್ರೌರ್ಯ ಮೆರೆದಿದ್ದಾಳೆ.

ಪಂಜಾಬ್ ನ ಫರೀದ್ ಕೋಟ್ ನಲ್ಲಿ ಈ ಘಟನೆ ನಡೆದಿದೆ. ಅಜ್ಜಿ ಫರೀದ್‌ಕೋಟ್‌ನ ದೋಗರ್ ಬಸ್ತಿ ನಿವಾಸಿ ಎಎಸ್‌ಐ ಸರಬ್ಜಿತ್ ಕೌರ್ ಎಂದು ತಿಳಿದುಬಂದಿದೆ. ತನ್ನ 5 ವರ್ಷದ ಮೊಮ್ಮಗಳ ಕೈ ಮತ್ತು ಕಾಲುಗಳನ್ನು ಬಟ್ಟೆಯಿಂದ ಮನೆಯ ಗೇಟ್‌ಗೆ ಕಟ್ಟಿಹಾಕಿದ್ದರು. ರಣ ಬಿಸಿಲಿನಲ್ಲಿ ಮಗು ಅಳುತ್ತಾ ಮಲಗಿದ್ದರೂ ಅಜ್ಜಿಗೆ ಕಿಂಚಿತ್ತೂ ಕರುಣೆ ಬಂದಿಲ್ಲ. ಮಗುವನ್ನು ಸುಡುಬಿಸಿಲಿನಲ್ಲಿ ಹಾಗೆಯೇ ಬಿಟ್ಟು ಹೋಗಿದ್ದಾಳೆ.

ಮಗುವಿನ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಓಡಿ ಬಂದಿದ್ದಾರೆ. ಮಗುವಿನ ಸ್ಥಿತಿ ಕಂಡು ಕಂಗಾಲಾಗಿದ್ದಾರೆ. ಮಗು ಬಿಸಿಲಿನಲ್ಲಿ ನರಳುತ್ತಿರುವುದನ್ನು ಕಂಡ ಸಾರ್ವಜನಿಕರು ತಕ್ಷಣ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ ಮತ್ತು ಮಗುವಿನ ಕಟ್ಟುಗಳನ್ನು ಬಿಚ್ಚಿ ರಕ್ಷಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪಂಜಾಬ್ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.

ಬಾಲಕಿಯ ತಂದೆ-ತಾಯಿ ಕೆಲಸದ ನಿಮಿತ್ತ ಪೋರ್ಚುಗಲ್‌ನಲ್ಲಿ ವಾಸಿಸುತ್ತಿದ್ದಾರೆ. ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆಂಬ ಭರವಸೆಯ ಮೇಲೆ ಅಜ್ಜಿಯ ಬಳಿ ಬಿಟ್ಟು ಹೋಗಿದ್ದರು. ಆದರೆ ಅಜ್ಜಿಯೇ ಮಗುವಿನ ಮೇಲೆ ಈ ರೀತಿ ಕ್ರೌರ್ಯ ಮೆರಿದ್ದಾಳೆ.

ಘಟನೆ ಬೆಳಕಿಗೆ ಬಂದ ತಕ್ಷಣ ಫರೀದ್‌ಕೋಟ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಜ್ಞಾ ಜೈನ್ ಅವರು ಕೌರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಪೊಲೀಸ್ ಪಡೆಯಲ್ಲಿ ಶಿಸ್ತು ಮತ್ತು ಮಾನವೀಯತೆ ಮುಖ್ಯ. ಅಧಿಕಾರಿಯೊಬ್ಬರು ಮಗುವಿನ ಮೇಲೆ ಇಂತಹ ಕ್ರೌರ್ಯ ತೋರುವುದು ಸ್ವೀಕಾರಾರ್ಹವಲ್ಲ ಎಂದು ಡಿಎಸ್ಪಿ ತರ್ಲೋಚನ್ ಸಿಂಗ್ ತಿಳಿಸಿದ್ದಾರೆ.

ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ಒಪ್ಪಿಸಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದ್ದು, ಅಜ್ಜಿಯ ವಿಕೃತ ವರ್ತನೆಯ ಹಿಂದೆ ಬೇರೆ ಏನಾದರೂ ಕಾರಣಗಳಿವೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

TAGGED:An inhumane incident has come to light in which a grandmother tied the hands and feet of her five-year-old granddaughter
Share This Article
Facebook Twitter Copy Link Print
Previous Article ಸನ್ ಆಫ್ ಸರ್ದಾರ್ 2 ಬಗ್ಗೆ ಮೃಣಾಲ್ ಠಾಕೂರ್ ಅಸಮಾಧಾನ
Next Article ಮಗು ಬೇಕಂದ್ರೆ ನಿನ್ನ ಹೆಂಡ್ತಿನ ನನ್ನ ಜತೆ ಕಳ್ಸು ಎಂದ ಟಿಸಿಎಸ್ ಬಾಸ್: ಐಟಿ ಉದ್ಯೋಗಿ ಹೇಳಿದ್ದೇನು?

Popular Posts

ಯೂಟ್ಯೂಬ್ ನೋಡಿ ನಕಲಿ ನೋಟು ಮುದ್ರಿಸುತ್ತಿದ್ದ ದಂಪತಿ ಅರೆಸ್ಟ್

1 Min Read

ಪ್ರಭಾಸ್ ಜೊತೆ ನಟಿಸಲಿರುವ ಕಿಚ್ಚ ಸುದೀಪ್? ಸಿನಿಮಾ ಯಾವುದು?

2 Min Read

ತತ್ಕಾಲ್ ಟಿಕೆಟ್ ಕೇವಲ 1 ನಿಮಿಷದಲ್ಲಿ ಕನ್‌ಫರ್ಮ್ ಆಗಬೇಕಾ?! ಈ 4 ಸೀಕ್ರೆಟ್ ಟ್ರಿಕ್ಸ್ ಫಾಲೋ ಮಾಡಿ

3 Min Read

ಮಜಾ ಭಾರತ ಖ್ಯಾತಿಯ ಹಾಸ್ಯ ಕಲಾವಿದನ ಸಾವಿನ ಸುತ್ತ ಅನುಮಾನದ ಹುತ್ತ!

2 Min Read

You Might Also Like

ಪ್ರಮುಖ

ಮಹಿಳೆಯರಿಗೆ ಕೇಂದ್ರ ಸರ್ಕಾರದ ಬಂಫರ್ ಗಿಫ್ಟ್: ಪ್ರತಿ ತಿಂಗಳು ಖಾತೆಗೆ ಸೇರಲಿದೆ ₹7,000 ಸ್ಟೈಫಂಡ್!

2 Min Read
ವರ್ಸೈಲ್ಸ್‌ನಲ್ಲಿ ಇರಾನ್ - ಅಮೆರಿಕ ಒಪ್ಪಂದಕ್ಕೆ ಟ್ರಂಪ್ ಸಹಿ ; ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ಮಹತ್ವದ ಹೆಜ್ಜೆ
ಪ್ರಮುಖಮನರಂಜನೆ

ಧರ್ಮಸ್ಥಳ ಬುರುಡೆ ಪ್ರಕರಣ: ತಮ್ಮ ಮೇಲಿನ ಆರೋಪಗಳ ಬಗ್ಗೆ ನಟ ಪ್ರಕಾಶ್ ರಾಜ್ ಹೇಳಿದ್ದೇನು?

2 Min Read
ಪ್ರಮುಖಮನರಂಜನೆ

ಸಿಎಂ ವಿಜಯ್​ ಬೇಟಿಯಾದ ಸಮಂತಾ; ದಳಪತಿ ಬಗ್ಗೆ ಹೇಳಿದ್ದೇನು?

2 Min Read
ಕರ್ನಾಟಕಪ್ರಮುಖ

ಇನ್ಮುಂದೆ ರಾಜ್ಯ ಸರ್ಕಾರಿ ನೌಕರರಿಗೆ ಕರ್ತವ್ಯ ಆಪ್ ನಲ್ಲಿ ಹಾಜರಾತಿ ಕಡ್ಡಾಯ; ಸರ್ಕಾರದಿಂದ ಖಡಕ್ ಆದೇಶ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?