Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಮಗು ಬೇಕಂದ್ರೆ ನಿನ್ನ ಹೆಂಡ್ತಿನ ನನ್ನ ಜತೆ ಕಳ್ಸು ಎಂದ ಟಿಸಿಎಸ್ ಬಾಸ್: ಐಟಿ ಉದ್ಯೋಗಿ ಹೇಳಿದ್ದೇನು?
ಕರ್ನಾಟಕಪ್ರಮುಖ

ಮಗು ಬೇಕಂದ್ರೆ ನಿನ್ನ ಹೆಂಡ್ತಿನ ನನ್ನ ಜತೆ ಕಳ್ಸು ಎಂದ ಟಿಸಿಎಸ್ ಬಾಸ್: ಐಟಿ ಉದ್ಯೋಗಿ ಹೇಳಿದ್ದೇನು?

Share
2 Min Read
SHARE

ನಾಸಿಕ್‌ನ ಟಿಸಿಎಸ್ (TCS) ಶಾಖೆಯಲ್ಲಿ ಬಯಲಾಗಿರುವ ಈ ಘಟನೆಗಳು ಕಾರ್ಪೊರೇಟ್ ಜಗತ್ತನ್ನೇ ಬೆಚ್ಚಿಬೀಳಿಸಿವೆ. ಕೇವಲ ಕೆಲಸದ ಒತ್ತಡದ ಬಗ್ಗೆ ಕೇಳುತ್ತಿದ್ದ ಐಟಿ ಕ್ಷೇತ್ರದಲ್ಲಿ, ಈಗ ಮತಾಂತರದ ಸಂಚು ಮತ್ತು ನೈತಿಕ ಅಧಃಪತನದ ಆಘಾತಕಾರಿ ಕಥೆಗಳು ಹೊರಬರುತ್ತಿವೆ.

ಒಂದೆಡೆ ಮಹಿಳಾ ಉದ್ಯೋಗಿಗಳ ಮೇಲೆ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿಬರುತ್ತಿದ್ದರೆ, ಮತ್ತೊಂದೆಡೆ ಟಿಸಿಎಸ್‌ನ ನಾಸಿಕ್ ಶಾಖೆಯ ಪುರುಷ ಉದ್ಯೋಗಿಯೊಬ್ಬರು ತಮಗಾದ ಅಮಾನವೀಯ ಕಿರುಕುಳವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇದು ಕೇವಲ ಕಚೇರಿಯ ಕಿರುಕುಳವಾಗಿರದೆ, ಒಬ್ಬ ವ್ಯಕ್ತಿಯ ಧರ್ಮ, ವೈಯಕ್ತಿಕ ಜೀವನ ಮತ್ತು ಘನತೆಯನ್ನು ಹತ್ತಿಕ್ಕುವ ವ್ಯವಸ್ಥಿತ ಸಂಚಿನಂತೆ ಕಾಣುತ್ತಿದೆ.

ನೈತಿಕತೆಯ ಎಲ್ಲ ಮಿತಿ ಮೀರಿದ ಬಾಸ್
ಇಂಡಿಯಾ ಟುಡೇ ಜೊತೆ ಮಾತನಾಡಿದ ಸಂತ್ರಸ್ತ ಉದ್ಯೋಗಿ, ಟೀಮ್ ಲೀಡರ್ ತೌಸಿಫ್ ಅತ್ತರ್ ಮತ್ತು ಸಹೋದ್ಯೋಗಿ ಡ್ಯಾನಿಶ್ ಶೇಖ್ ನೀಡಿದ ಕಿರುಕುಳದ ಬಗ್ಗೆ ವಿವರಿಸಿದ್ದಾರೆ. 2022ರಲ್ಲಿ ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಆರಂಭವಾದ ಈ ಕಿರುಕುಳ 2026ರ ಮಾರ್ಚ್‌ವರೆಗೆ ಮುಂದುವರೆದಿದೆ.

ಸಂತ್ರಸ್ತ ಉದ್ಯೋಗಿ ಮತ್ತು ಅವರ ಪತ್ನಿಗೆ ಹಲವು ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಈ ಸೂಕ್ಷ್ಮ ವಿಷಯವನ್ನೇ ಗುರಿಯಾಗಿಸಿಕೊಂಡ ವ್ಯಕ್ತಿ, ವೈದ್ಯಕೀಯ ಚಿಕಿತ್ಸೆಯಿಂದ ಮಗು ಪಡೆಯಲು ಸಾಧ್ಯವಿಲ್ಲ, ಮಗು ಬೇಕಾದರೆ ನಿನ್ನ ಹೆಂಡತಿಯನ್ನು ನನ್ನ ಬಳಿಗೆ ಕಳುಹಿಸು ಎಂದು ವಿಕೃತವಾಗಿ ಹೇಳಿದ್ದಾರೆಂದು ಕಣ್ಣೀರಿಟ್ಟಿದ್ದಾರೆ.

ಬಲವಂತದ ನಮಾಜ್ ಮತ್ತು ಮತಾಂತರದ ಸಂಚು
ಕಟ್ಟಾ ಹಿಂದೂ ನಂಬಿಕೆಯುಳ್ಳ ಈ ಉದ್ಯೋಗಿ ರುದ್ರಾಕ್ಷಿ ಮಾಲೆ ಧರಿಸುವುದನ್ನೇ ಆತ ವಿವಾದ ಮಾಡಿದ್ದ, 2023ರ ಈದ್ ಸಂದರ್ಭದಲ್ಲಿ ಸಂತ್ರಸ್ತನನ್ನು ಮನೆಗೆ ಕರೆದೊಯ್ದು, ಬಲವಂತವಾಗಿ ತಲೆಗೆ ಟೋಪಿ ಹಾಕಿ, ನಮಾಜ್ ಮಾಡಿಸಿ ಆ ಫೋಟೋಗಳನ್ನು ಕಂಪನಿಯ ಅಧಿಕೃತ ಗ್ರೂಪ್‌ಗಳಲ್ಲಿ ಹಂಚಿ ಅವಮಾನಿಸಲಾಗಿತ್ತು.

ಹಿಂದೂ ದೇವರುಗಳನ್ನು ಅಪಹಾಸ್ಯ ಮಾಡುವುದು, ಮಾಂಸಾಹಾರ ಸೇವಿಸಲು ಒತ್ತಾಯಿಸುವುದು ಮತ್ತು ಕಲ್ಮಾ ಪಠಿಸುವಂತೆ ಪೀಡಿಸುವುದು ನಿರಂತರವಾಗಿ ನಡೆಯುತ್ತಿತ್ತು. ಸಂತ್ರಸ್ತನ ತಂದೆಗೆ ಪಾರ್ಶ್ವವಾಯು ಆದಾಗ, ನಿಮ್ಮ ತಂದೆ ಇಸ್ಲಾಂಗೆ ಮತಾಂತರಗೊಂಡರೆ ಮಾತ್ರ ಚೇತರಿಸಿಕೊಳ್ಳುತ್ತಾರೆ ಎಂದು ಆರೋಪಿ ಹೇಳಿದ್ದ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.

ಕೆಲಸದ ಸ್ಥಳವೇ ಯುದ್ಧಭೂಮಿ
ಕೇವಲ ಮಾನಸಿಕವಲ್ಲದೆ ದೈಹಿಕವಾಗಿಯೂ ಸಂತ್ರಸ್ತನನ್ನು ಕಾಡಲಾಗಿತ್ತು. ಸಂತ್ರಸ್ತ ಪ್ರತಿಭಟಿಸಿದಾಗ ತೌಸಿಫ್ ಅತ್ತರ್ ಆತನ ಮೇಲೆ ಟೇಬಲ್ ಫ್ಯಾನ್ ಎಸೆದು ಕೊಲ್ಲುವ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಸಂತ್ರಸ್ತನನ್ನು ಕೆಲಸದಿಂದ ತೆಗೆಯಲು ಪ್ರಧಾನ ಕಚೇರಿಗೆ ಸುಳ್ಳು ದೂರುಗಳನ್ನು ನೀಡುವ ಮೂಲಕ ಆತನ ವೃತ್ತಿಜೀವನವನ್ನೇ ಹಾಳು ಮಾಡಲು ಈ ತಂಡ ಯತ್ನಿಸಿತ್ತು.

ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತೌಸಿಫ್ ಅತ್ತರ್, ಡ್ಯಾನಿಶ್ ಶೇಖ್ ಮತ್ತು ಮಾನವ ಸಂಪನ್ಮೂಲ (HR) ವಿಭಾಗದ ನಿದಾ ಖಾನ್ ಸೇರಿದಂತೆ 9 ಮಂದಿಯನ್ನು ಬಂಧಿಸಿದ್ದಾರೆ. ಈ ತಂಡವು ಕೇವಲ ಈತನನ್ನು ಮಾತ್ರವಲ್ಲದೆ, ಮಹಿಳಾ ಉದ್ಯೋಗಿಗಳಿಗೂ ಲೈಂಗಿಕ ಕಿರುಕುಳ ನೀಡಿ ಮದುವೆಯಾಗಲು ಪೀಡಿಸುತ್ತಿತ್ತು ಎಂಬುದು ಎಫ್‌ಐಆರ್‌ನಿಂದ ತಿಳಿದುಬಂದಿದೆ.

ಈ ಘಟನೆಯು ಕಾರ್ಪೊರೇಟ್ ವಲಯದಲ್ಲಿ ಉದ್ಯೋಗಿಗಳ ಸುರಕ್ಷತೆ ಮತ್ತು ಅಲ್ಲಿ ನಡೆಯುತ್ತಿರುವ ಧಾರ್ಮಿಕ ಪ್ರಚೋದನೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ದೇಶದ ಪ್ರತಿಷ್ಠಿತ ಐಟಿ ಸಂಸ್ಥೆಯೊಂದರ ಒಳಗೆ ಇಂತಹ ಘಟನೆಗಳು ವರ್ಷಗಟ್ಟಲೆ ನಡೆಯುತ್ತಿದ್ದರೂ ಮ್ಯಾನೇಜ್‌ಮೆಂಟ್ ಗಮನಕ್ಕೆ ಬರದಿರುವುದು ಆಶ್ಚರ್ಯದ ಸಂಗತಿಯಾಗಿದೆ.

TAGGED:marry your wife: Explosive statement by IT employeeTCS boss says if you want a child
Share This Article
Facebook Twitter Copy Link Print
Previous Article ಐದು ವರ್ಷದ ಮೊಮ್ಮಗಳ ಮೇಲೆ ಪೊಲೀಸ್ ಅಜ್ಜಿಯ ಕ್ರೌರ್ಯ
Next Article 40ರ ಆಂಟಿ ಪ್ರೇಮದಲ್ಲಿ ಬಿದ್ದು ಮನೆಬಿಟ್ಟು ಓಡಿ ಹೋದ 21ರ ಹರೆಯದ ಹುಡುಗ

Popular Posts

BP Harish ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಮೊಟ್ಟೆ ಏಟು

1 Min Read

NHAI Local Pass ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ಮೊಬೈಲ್‌ನಲ್ಲೇ ಸಿಗಲಿದೆ NHAI ಡಿಜಿಟಲ್ ಲೋಕಲ್ ಟೋಲ್ ಪಾಸ್

3 Min Read

Jammu Kashmir ಭೀಕರ ಉಗ್ರರ ದಾಳಿ; ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹುತಾತ್ಮ

1 Min Read

Jana Nayagan ‘ಜನ ನಾಯಗನ್’ ಪ್ರೀಮಿಯರ್ ಶೋಗೆ ಬೆಂಗಳೂರಲ್ಲಿ1000, ಹೊಸೂರಿನಲ್ಲಿ180

1 Min Read

You Might Also Like

ಕರ್ನಾಟಕಪ್ರಮುಖ

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read
Crimeಕರ್ನಾಟಕ

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read
ದೇಶಪ್ರಮುಖ

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Social Networks

Facebook-f Instagram Twitter
Welcome Back!

Sign in to your account

Lost your password?