newsics.com
ನವದೆಹಲಿ : ಶುಬ್ಮನ್ ಗಿಲ್ ತಮ್ಮ ಅದ್ಭುತ ಕ್ರಿಕೆಟ್ ಪ್ರದರ್ಶನ ಮತ್ತು ಸೌಂದರ್ಯದಿಂದ ಅಪಾರ ಪ್ರಮಾಣದ ಮಹಿಳಾ ಅಭಿಮಾನಿಗಳನ್ನ ಹೊಂದಿದ್ದಾರೆ.
ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿರುವ ಗಿಲ್ಗೆ ಹಲವಾರು ಯುವತಿಯರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ರೂಮರ್ಸ್ ಕೇಳಿಬರುತ್ತಿದೆ.
ಮುಂಬೈನ ರೆಸ್ಟೋರೆಂಟ್ನಲ್ಲಿ ಶುಭ್ಮನ್ ಗಿಲ್ ಅವರೊಂದಿಗೆ ಒಟ್ಟಿಗೆ ಊಟ ಮಾಡಿದ್ದ ಫೋಟೋವೊಂದು ಸಾಕಷ್ಟು ವೈರಲ್ ಆಗಿತ್ತು. ಆ ನಂತರ ಲವ್ ವದಂತಿಗಳ ಹೊರತಾಗಿಯೂ, ಶುಭಮನ್ ಮತ್ತು ಸಾರಾ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಎಲ್ಲೂ ಬಹಿರಂಗಪಡಿಸಲಿಲ್ಲ.
ಸೋನಮ್ ಬಾಜ್ವಾ ಅವರು ಶುಬ್ಮನ್ ಗಿಲ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. ಪಂಜಾಬಿ ಟಾಕ್ ಶೋನಲ್ಲಿ ಸೋಮನ್ ಮತ್ತು ಶುಬ್ಮನ್ ಪರಸ್ಪರ ಲವ್ನಲ್ಲಿದ್ದಾರೆಂಬ ಸುದ್ದಿ ಕೂಡ ಸಖತ್ ಸದ್ದು ಮಾಡಿತ್ತು.
ಸ್ಪಾನಿಸ್ ಬ್ಯೂಟಿ ಮರಿಯಾ ಅರಯೋಗ್ ಅವರ ಹೆಸರು ಕೂಡ ಸ್ಟಾರ್ ಕ್ರಿಕೆಟಿಗ ಶುಬ್ಮನ್ ಗಿಲ್ ಅವರೊಂದಿಗೆ ಕೇಳಿಬರುತ್ತಿದೆ.
ಕಿರುತೆರೆ ನಟಿ ರಿಧಿಮಾ ಪಂಡಿತ್ ಕೂಡ ತಮ್ಮ ಹೆಸರನ್ನು ಶುಬ್ಮನ್ ಗಿಲ್ ಅವರೊಂದಿಗೆ ಆಗಾಗ್ಗೆ ಕೇಳಿಬರುತ್ತಿದೆ. ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಇದ್ದವು. ಈ ಗಾಸಿಪ್ ಗಳಿಗೆ ಅಂತ್ಯ ಹಾಡಲು, ಸ್ವತಃ ರಿಧಿಮಾ ನಾನು ಇದುವರೆಗೂ ಗಿಲ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿಲ್ಲ ಎಂದು ತಿಳಿಸಿದ್ದರು.
ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್ ಹಾಗೂ ಗಿಲ್ ಹೆಚ್ಚು ಚರ್ಚೆಯ ವಿಷಯವಾಗಿದೆ. ಶುಬ್ಮನ್ ಗಿಲ್ ಅವರೊಂದಿಗಿನ ಸಂಬಂಧದ ಬಗ್ಗೆ ಅವರು ವದಂತಿಗಳ ಕೇಂದ್ರಬಿಂದುವಾಗಿದ್ದಾರೆ