ದುಬೈನದುಬೈ ಎಂದಾಗ ತಕ್ಷಣ ನೆನಪಿಗೆ ಬರುವ ಕಟ್ಟಡಗಳ ಪೈಕಿ ಬುರ್ಜ್ ಅಲ್ ಅರಬ್. ವಿಶ್ವದ ಏಕೈಕ 7 ಸ್ಟಾರ್ ಹೊಟೆಲ್ ಇರುವ ಈ ಕಟ್ಟದ ಬಂದ್ ಆಗುತ್ತಿದೆ.
ದುಬೈನಲ್ಲಿ ಗಗನ ಚುಂಬಿ ಕಟ್ಟಗಳೇ ರಾರಾಜಿಸುತ್ತದೆ. ದುಬೈ ಕುರಿತು ಹೇಳುವಾಗ, ನೆನಪಿಸಿಕೊಳ್ಳುವಾಗ ಹಲವು ಐಕಾನಿಕ್ ಕಟ್ಟಡಗಳು ಕಣ್ಣಮುಂದೆ ಬರುತ್ತದೆ. ವಿಶ್ವದ ಅತೀ ಎತ್ತರದ ಬುರ್ಜ್ ಖಲೀಫಾ, ಬುರ್ಜ್ ಅಲ್ ಅರಬ್ ಸೇರಿದಂತೆ ಹಲವು ವಿಶೇಷ ವಿನ್ಯಾಸದ ಕಟ್ಟಡಗಳು ಗಮನ ಸೆಳೆಯುತ್ತದೆ. ಈ ಪೈಕಿ 7 ಸ್ಟಾರ್ ಹೊಟೆಲ್ ಇರುವ ಐಕಾನಿಕ್ ಬುರ್ಜ್ ಅಲ್ ಅರಬ್ ಕಟ್ಟಡ ಇದೀಗ ಬಂದ್ ಆಗುತ್ತಿದೆ.
ಬುರ್ಜ್ ಅಲ್ ಅರಬ್ ಕಟ್ಟಡ ದುಬೈನ ಅತ್ಯಂತ ಆಕರ್ಷಕ ಕಟ್ಟಡ. ಬೋಟ್ ರೀತಿಯಲ್ಲಿರುವ ಈ ಕಟ್ಟಡ ಪ್ರವಾಸಿಗರ ಕಣ್ಮನ ಸೆಳೆಯುವ ಕಟ್ಟಡ. ಕಳೆದ 25 ವರ್ಷಗಳಿಂದ ಈ ಐಕಾನಿಕ್ ಕಟ್ಟಡ ದುಬೈನಲ್ಲಿ ತಲೆ ಎತ್ತಿ ನಿಂತಿದೆ. ಆದರೆ ಇದೀಗ ಈ ಕಟ್ಟಡವನ್ನು ಮುಚ್ಚಲಾಗುತ್ತಿದೆ.
ಐಕಾನಿಕ್ ಕಟ್ಟಡ ಮುಚ್ಚಲು ಪ್ರಮುಖ ಕಾರಣ ನವೀಕರಣ. ಬರೋಬ್ಬರಿ 18 ತಿಂಗಳ ಕಾಲ ಈ ಕಟ್ಟಡ ಮುಚ್ಚಲಾಗುತ್ತಿದೆ. ಕಟ್ಟಡ ಇಂಟಿರೀಯರ್ ಸೇರಿದಂತೆ ಹಲವು ಕಾಮಗಾರಿಗಳು ನಡೆಸಲು ಒಂದೂವರೆ ವರ್ಷಗಳ ಕಾಲ ಕಟ್ಟಡ ಮುಚ್ಚಲಾಗುತ್ತಿದೆ. ಇದು ಹಲವರ ಬೇಸರಕ್ಕೂ ಕಾರಣವಾಗಿದೆ.
ಬುರ್ಜ್ ಅಲ್ ಅರಬ್ ವಿಶ್ವದ ಏಕೈಕ 7 ಸ್ಟಾರ್ ಹೊಟೆಲ್. ಅತ್ಯಂತ ಐಷಾರಾಮಿ ಹೊಟೆಲ್ ಇದಾಗಿದೆ. ಈ ಹೊಟೆಲ್‌ನಲ್ಲಿ ಒಂದು ದಿನ ತಂಗಲು ಆರಂಭಿಕ ಬೆಲೆ 1600 ಯುಎಸ್ ಡಾಲರ್. ಅಂದರೆ 1.35 ಲಕ್ಷ ರೂನಿಂದ 1.40 ಲಕ್ಷ ರೂಪಾಯಿ. ಇನ್ನು ಹೈ ಸ್ಯೂಟ್ ಕೊಠಡಿ ಬೆಲೆ 3000 ಯುಎಸ್ ಡಾಲರ್‌ನಿಂದ 5000 ಯುಎಸ್ ಡಾಲರ್ ವರೆಗಿದೆ.
1900ರಲ್ಲಿ ಶೇಕ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ಟೊಮ್ ಸೂಚನೆಯಂತೆ ಬುರ್ಜ್ ಅಲ್ ಅರಬ್ ಕಟ್ಟಡ ನಿರ್ಮಾಣ ತಯಾರಿ ಆರಂಭಗೊಂಡಿತ್ತು. ಐಫೆಲ್ ಟವರ್, ಒಪೆರಾ ಹೌಸ್ ರೀತಿ ವಿಶ್ವವನ್ನೇ ಸೆಳೆಯುವ ಕಟ್ಟಡವಾಗಬೇಕು ಅನ್ನೋ ನಿರ್ದೇಶನ ನೀಡಿದ್ದರು. ಇದರಂತೆ ಈ ಕಟ್ಟಡ ಕಾಮಗಾರಿ ಪೂರ್ಣಗೊಂಡು 1999ರಲ್ಲಿ ಉದ್ಘಾಟನೆಗೊಂಡಿತ್ತು.