Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > ಇರಾನ್ ಮೇಲಿನ ಯುದ್ಧ ಮುಕ್ತಾಯದ ಹಂತದಲ್ಲಿದೆ: ಡೊನಾಲ್ಡ್ ಟ್ರಂಪ್
ವಿದೇಶ

ಇರಾನ್ ಮೇಲಿನ ಯುದ್ಧ ಮುಕ್ತಾಯದ ಹಂತದಲ್ಲಿದೆ: ಡೊನಾಲ್ಡ್ ಟ್ರಂಪ್

Share
2 Min Read
SHARE

ಇರಾನ್ ಜೊತೆಗಿನ ಯುದ್ಧವು ‘ಮುಕ್ತಾಯದ ಹಂತಕ್ಕೆ ಬಂದಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಒಂದು ವೇಳೆ ತಾನು ಈಗಲೇ ಯುದ್ಧದಿಂದ ಹಿಂದೆ ಸರಿದರೂ, ಇರಾನ್ ತನ್ನನ್ನು ಮರುನಿರ್ಮಾಣ ಮಾಡಿಕೊಳ್ಳಲು ಕನಿಷ್ಠ 20 ವರ್ಷಗಳು ಬೇಕಾಗುತ್ತವೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಯುದ್ಧವು ಬಹುತೇಕ ಮುಗಿಯುವ ಹಂತದಲ್ಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಟ್ರಂಪ್ ‘ಫಾಕ್ಸ್ ನ್ಯೂಸ್‌’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ನಾನು ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು, ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಿರುತ್ತಿತ್ತು. ಅವರ ಬಳಿ ಪರಮಾಣು ಅಸ್ತ್ರ ಇದ್ದಿದ್ದರೆ, ನೀವು ಅಲ್ಲಿರುವ ಪ್ರತಿಯೊಬ್ಬರನ್ನು ‘ಸರ್’ ಎಂದು ಕರೆಯಬೇಕಾಗುತ್ತಿತ್ತು ಎಂದು ಟ್ರಂಪ್ ಹೇಳಿದ್ದಾರೆ.

ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಏಪ್ರಿಲ್‌ 22ರಂದು ಕೊನೆಗೊಳ್ಳಲಿದ್ದು, ಅದಕ್ಕೂ ಮುನ್ನ ಅಂದರೆ ಮುಂದಿನ ಎರಡು ದಿನಗಳಲ್ಲಿ ಇಸ್ಲಾಮಾಬಾದ್‌ನಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಸುವ ಪ್ರಸ್ತಾಪವನ್ನು ಪಾಕಿಸ್ತಾನವು ಅಮೆರಿಕ ಮತ್ತು ಇರಾನ್‌ ಮುಂದಿಟ್ಟಿದೆ ಎಂದು ‘ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್’ ಪತ್ರಿಕೆ ವರದಿ ಮಾಡಿದೆ.

ನೀವು ಅಲ್ಲಿಯೇ ಇರಬೇಕು, ಏಕೆಂದರೆ ಮುಂದಿನ ಎರಡು ದಿನಗಳಲ್ಲಿ ಏನಾದರೂ ಸಂಭವಿಸಬಹುದು, ಮತ್ತು ನಾವು ಅಲ್ಲಿಗೆ ಹೋಗಲು ಹೆಚ್ಚು ಆಸಕ್ತಿ ಹೊಂದಿದ್ದೇವೆ ಎಂದು ಟ್ರಂಪ್ ‘ದಿ ನ್ಯೂಯಾರ್ಕ್ ಪೋಸ್ಟ್’ಗೆ ತಿಳಿಸಿದ್ದಾರೆ.

ಎರಡನೇ ಸುತ್ತಿನ ಮಾತುಕತೆಯ ಸಾಧ್ಯತೆಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರ ಕಾರ್ಯವೈಖರಿಯೇ ಕಾರಣ ಎಂದು ಟ್ರಂಪ್ ಶ್ಲಾಘಿಸಿದ್ದಾರೆ. ಫೀಲ್ಡ್ ಮಾರ್ಷಲ್ ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿರುವುದರಿಂದಲೇ ಇದು ಸಾಧ್ಯವಾಗುತ್ತಿದೆ ಎಂದೂ ಟ್ರಂಪ್‌ ಹೇಳಿದ್ದಾರೆ.

ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ಜೆ.ಡಿ.ವ್ಯಾನ್ಸ್‌ ನೇತೃತ್ವದ ಅಮೆರಿಕ ನಿಯೋಗ ಮತ್ತು ಸಂಸತ್‌ನ ಸ್ಪೀಕರ್‌ ಮೊಹಮ್ಮದ್ ಬಾಖಿರ್‌ ಖಾಲೀಬಾಫ್ ನೇತೃತ್ವದ ಇರಾನ್‌ನ ನಿಯೋಗದ ನಡುವೆ ಏಪ್ರಿಲ್‌ 11ರಂದು ಇಸ್ಲಾಮಾಬಾದ್‌ನಲ್ಲಿ ಮಾತುಕತೆ ನಡೆದಿತ್ತು. 21 ಗಂಟೆಗಳ ಸುದೀರ್ಘ ಮಾತುಕತೆಯ ಬಳಿಕವೂ ಒಪ್ಪಂದಕ್ಕೆ ಬರಲು ಎರಡೂ ಕಡೆಯವರು ವಿಫಲರಾಗಿದ್ದರು.

ಕೆಲವು ಮೂಲಗಳ ಪ್ರಕಾರ ಎರಡನೇ ಸುತ್ತಿನ ಮಾತುಕತೆ ಇಸ್ಲಾಮಾಬಾದ್‌ನಲ್ಲಿ ಗುರುವಾರ ನಡೆಯುವ ಸಾಧ್ಯತೆಯಿದೆ. ಆದರೆ ಅಮೆರಿಕದ ಅಧಿಕಾರಿಯೊಬ್ಬರು ಮಾತುಕತೆ ಜಿನೀವಾದಲ್ಲಿ ನಡೆಯುವ ಸಾಧ್ಯತೆಯಿದೆ ಎಂದಿದ್ದಾರೆ.

ಮೊದಲ ಸುತ್ತಿನ ಮಾತುಕತೆಯಲ್ಲಿ ಪಾಲ್ಗೊಂಡ ಅದೇ ನಿಯೋಗವು ಎರಡನೇ ಸುತ್ತಿನಲ್ಲಿ ಪಾಲ್ಗೊಳ್ಳಲಿದೆಯೇ ಎಂಬುದೂ ಸ್ಪಷ್ಟವಾಗಿಲ್ಲ.

ಕಾಂಗ್ರೆಸ್ ಪಕ್ಷದಿಂದ ‘MLC’ ಅಬ್ದುಲ್ ಜಬ್ದಾರ್ ಅಮಾನತು : ಡಿಸಿಎಂ ಡಿಕೆಶಿ ಆದೇಶ.!

TAGGED:War on Iran is nearing its end: Donald Trump
Share This Article
Facebook Twitter Copy Link Print
Previous Article ಕಾಂಗ್ರೆಸ್ ಪಕ್ಷದಿಂದ ‘MLC’ ಅಬ್ದುಲ್ ಜಬ್ದಾರ್ ಅಮಾನತು : ಡಿಸಿಎಂ ಡಿಕೆಶಿ ಆದೇಶ.!
Next Article ʼʼಫಸ್ಟ್‌ ನೈಟ್‌ ಆಗಬೇಕಂದ್ರೆ 90 ಲಕ್ಷ ರುಪಾಯಿ ಕೊಡಿʼʼ; ಪತಿ ಬಳಿ ಡಿಮ್ಯಾಂಡ್‌ ಇಟ್ಟ ಪತ್ನಿ

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ವಿದೇಶಪ್ರಮುಖ

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read
ವಿದೇಶಪ್ರಮುಖ

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read
ವಿದೇಶಪ್ರಮುಖ

ರೆಡ್‌ ಝೋನ್‌ಗೆ ಎಂಟ್ರಿ ಕೊಡಲಿದೆ ಜಗತ್ತು, ಜೂನ್‌ನಿಂದ ವಿನಾಶ ಆರಂಭ

3 Min Read
ಪ್ರಮುಖವಿದೇಶ

ಅತ್ಯಂತ ದುಬಾರಿ ಟ್ರೋಫಿ ಮೇಲೆ ಎಲ್ಲರ ಕಣ್ಣು; ಫಿಫಾ ವಿಶ್ವಕಪ್ ಆರಂಭ ಯಾವಾಗ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?