Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ʼʼಫಸ್ಟ್‌ ನೈಟ್‌ ಆಗಬೇಕಂದ್ರೆ 90 ಲಕ್ಷ ರುಪಾಯಿ ಕೊಡಿʼʼ; ಪತಿ ಬಳಿ ಡಿಮ್ಯಾಂಡ್‌ ಇಟ್ಟ ಪತ್ನಿ
ದೇಶ

ʼʼಫಸ್ಟ್‌ ನೈಟ್‌ ಆಗಬೇಕಂದ್ರೆ 90 ಲಕ್ಷ ರುಪಾಯಿ ಕೊಡಿʼʼ; ಪತಿ ಬಳಿ ಡಿಮ್ಯಾಂಡ್‌ ಇಟ್ಟ ಪತ್ನಿ

Share
2 Min Read
SHARE

ʼʼಫಸ್ಟ್‌ ನೈಟ್‌ ಆಗಬೇಕಂದ್ರೆ 90 ಲಕ್ಷ ರುಪಾಯಿ ಕೊಡಿ ಎಂದು ಮದುವೆ ಮುಗಿಯುತ್ತಿದ್ದಂತೆಯೇ ಪತಿ ಬಳಿ ಪತ್ನಿ ಡಿಮ್ಯಾಂಡ್‌ ಇಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮುಖಕ್ಕೆ ಹಾಕಿರುವ ಮುಸುಕು ತೆಗೆಯಬೇಕೆಂದರೆ 90 ಲಕ್ಷ ರುಪಾಯಿ ಕೊಡಬೇಕೆಂದು ಪತ್ನ ಆಗ್ರಹಿಸಿದ್ದಾಳೆ. ಪತಿ 90 ಲಕ್ಷ ರುಪಾಯಿ ನೀಡುವವರೆಗೂ ಆತನೊಂದಿಗೆ ಯಾವುದೇ ರೀತಿಯ ದೈಹಿಕ ಸಂಬಂಧ ಹೊಂದಲು ಪತ್ನಿ ನಿರಾಕರಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ .

ಆಗ್ರಾ ನಿವಾಸಿಗಳಾದ ಗೌರವ್ ಮತ್ತು ಕಲ್ಪನಾ ಸುಮಾರು ಒಂದು ವರ್ಷದ ಹಿಂದೆ ಏಪ್ರಿಲ್ 29ರಂದು ವಿವಾಹವಾದರು. ಆದರೆ ಫಸ್ಟ್‌ ನೈಟ್‌ ಒಂದು ದಿನವೂ ನಡೆಯಲಿಲ್ಲ. ಗೌರವ್‌ನ ಸಹೋದರಿ ಮುಸ್ಕಾನ್ ಸಲ್ಲಿಸಿದ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಪ್ರಕಾರ, ಕಲ್ಪನಾ ತನ್ನ ಪತಿಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ನಿರಾಕರಿಸಿದ್ದಾಳೆ. ಬದಲಾಗಿ ಆತನನ್ನು ಅವಮಾನಿಸಿದ್ದಾಳೆ.

ಕಲ್ಪನಾ ಸಹೋದರರೊಂದಿಗೆ ಸೇರಿ ತನ್ನ ಎಲ್ಲ ಮತ್ತು ಅತ್ತೆಯ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ಆರೋಪಿಸಲಾಗಿದೆ. ಅಲ್ಲದೆ ಕಲ್ಪನಾ ಪತಿ ಗೌರವ್ ಮತ್ತು ಆತನ ಕುಟುಂಬದ ಮೇಲೆ 90 ಲಕ್ಷ ರುಪಾಯಿ ನೀಡುವಂತೆ ಪದೇ ಪದೇ ಒತ್ತಡ ಹೇರುತ್ತಿದ್ದಳು ಎನ್ನಲಾಗಿದೆ.

ಜುಲೈ ಮೊದಲ ವಾರದಲ್ಲಿ ಕಲ್ಪನಾ ತನ್ನ ಹೆತ್ತವರ ಮನೆಗೆ ತೆರಳಿ, 90 ಲಕ್ಷ ರುಪಾಯಿ ಕೊಡಿ ಇಲ್ಲದಿದ್ದರೆ ಸಾಯಲು ಸಿದ್ಧನಾಗು ಎಂದು ಬೆದರಿಕೆ ಹಾಕಿದ್ದಳು. ಅಂದಿನಿಂದ ಅವಳು ಹಿಂತಿರುಗಿಲ್ಲ ಎಂದು ಗೌರವ್‌ ಹೇಳಿದ್ದಾನೆ. ಕಲ್ಪನಾ ಕುಟುಂಬವು ಗೌರವ್ ಕುಟುಂಬವನ್ನು ಜೀವಂತವಾಗಿ ಸುಡುವುದಾಗಿ ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಲಾಗಿದೆ.

ಸೆಪ್ಟೆಂಬರ್ 3ರಂದು ಕಲ್ಪನಾ ಸಹೋದರ ರಾಹುಲ್ ತನ್ನ ತಂದೆಯ ಬ್ಯಾಂಕ್ ವಿವರಗಳನ್ನು ಕಳುಹಿಸಿ, ತಾವು ಕೇಳಿದ ಮೊತ್ತವನ್ನು ಕೊಡುವಂತೆ ದುಂಬಾಲು ಬಿದ್ದಿದ್ದ. ಅಲ್ಲದೆ ಮಾರ್ಚ್ 25ರಂದು ಕಲ್ಪನಾ ತನ್ನ ತಂದೆ (ನರೇಂದ್ರ), ಸಹೋದರರು (ವಿಕಾಸ್ ಮತ್ತು ರಾಹುಲ್) ಹಾಗೂ ಆಕೆಯನ್ನು ಮದುವೆಯಾಗಲಿರುವ ಮುನ್ನಾ ಮಾಸ್ಟರ್‌ನೊಂದಿಗೆ ಗೌರವ್ ಮನೆಗೆ ದಾಳಿ ಇಟ್ಟಿದ್ದರು. ಕುಟುಂಬವನ್ನು ಒಳಗೆ ಕೂಡಿಹಾಕಿ ನಿಂದನೆ ಮಾಡಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.

ಗೌರವ್ ಬದುಕಲು ಬಯಸಿದರೆ 90 ಲಕ್ಷ ರುಪಾಯಿ ವ್ಯವಸ್ಥೆ ಮಾಡುವಂತೆ ಕಲ್ಪನಾ ಕುಟುಂಬವು ಗಡುವು ಕೂಡ ನೀಡಿತ್ತು ಎನ್ನಲಾಗಿದೆ. ಗೌರವ್ ತಂದೆ ಉಮ್ಮದ್ ಸಿಂಗ್ 67 ವರ್ಷದವರಾಗಿದ್ದು, ಅವರು ಹೃದ್ರೋಗ ಮತ್ತು ದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರನ್ನೂ ಅವಮಾನಿಸಲಾಗಿದೆ. ಇಂಥವರು ಇದ್ದರೆಷ್ಟು, ಸತ್ತರೆಷ್ಟು ಎಂದೆಲ್ಲ ತೆಗಳಿದ್ದಾರೆ ಎಂಡು ಕುಟುಂಬಸ್ಥರು ತಿಳಿಸಿದ್ದಾರೆ.

ಅಷ್ಟೇ ಅಲ್ಲ, ಆರೋಪಿಗಳು ಮನೆಯಲ್ಲಿ ಅಳವಡಿಸಲಾದ ಪೈಪ್ಡ್ ನೈಸರ್ಗಿಕ ಅನಿಲ (ಪಿಎನ್‌ಜಿ) ಸಂಪರ್ಕವನ್ನು ತಿರುಚಿ, ಘಟನೆಯನ್ನು ಅಪಘಾತವೆಂದು ಬಿಂಬಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕೊನೆಗೂ ಪೊಲೀಸರು ಧಾವಿಸಿ ಗೌರವ್‌ ಕುಟುಂಬವನ್ನು ರಕ್ಷಿಸಿತು.

ಕಲ್ಪನಾ ಮತ್ತು ಆಕೆಯ ಕುಟುಂಬದವರು ಆಗಾಗ ತಮ್ಮ ಮನೆಯ ಸುತ್ತಲೂ ಓಡಾಡುತ್ತಾ, ಬೆದರಿಕೆ ಹಾಕುತ್ತಾ ಭಯದ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ ಎಂದು ಗೌರವ್‌ ಆರೋಪಿಸಿದ್ದಾನೆ. ಮುನ್ನಾ ಮಾಸ್ಟರ್, ಹಣ ಸುಲಿಗೆ ಮಾಡಲು ಉದ್ದೇಶಪೂರ್ವಕ ಪಿತೂರಿ ನಡೆಸಿದ್ದಾಗಿ ಒಪ್ಪಿಕೊಂಡಿರುವುದಾಗಿ ಎಂದು ಹೇಳಲಾಗಿದೆ. ಸದ್ಯ ಪೊಲೀಸ್ ತನಿಖೆ ನಡೆಯುತ್ತಿದೆ.

 

ಇರಾನ್ ಮೇಲಿನ ಯುದ್ಧ ಮುಕ್ತಾಯದ ಹಂತದಲ್ಲಿದೆ: ಡೊನಾಲ್ಡ್ ಟ್ರಂಪ್

TAGGED:"Give me Rs 90 lakhs if you want to be my first night"; Wife demands from husband
Share This Article
Facebook Twitter Copy Link Print
Previous Article ಇರಾನ್ ಮೇಲಿನ ಯುದ್ಧ ಮುಕ್ತಾಯದ ಹಂತದಲ್ಲಿದೆ: ಡೊನಾಲ್ಡ್ ಟ್ರಂಪ್
Next Article ಮತ್ತೊಂದು ಸುತ್ತಿನ ಮಾತುಕತೆಗೆ ಸಿದ್ಧತೆ ನಡೆಸಿದ ಅಮೆರಿಕ-ಇರಾನ್

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?