newsics.com
ಬರೋಬ್ಬರಿ 9 ವರ್ಷಗಳ ಕಾಲ ಜೀ ಕನ್ನಡ ವಾಹಿನಿಯ ಜೊತೆ ನಂಟು ಹೊಂದಿದ್ದವರು ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್. ‘ಕಾಮಿಡಿ ಕಿಲಾಡಿಗಳು’ ಮತ್ತು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋಗಳಿಗೆ ರಕ್ಷಿತಾ ಪ್ರೇಮ್ ಖಾಯಂ ತೀರ್ಪುಗಾರ್ತಿ ಆಗಿದ್ದರು. ಆದರೆ, ಕಳೆದ ವರ್ಷ.. ಅಂದ್ರೆ 2025ರಲ್ಲಿ ಜೀ ಕನ್ನಡ ವಾಹಿನಿಗೆ ರಕ್ಷಿತಾ ಪ್ರೇಮ್ ಗುಡ್ ಬೈ ಹೇಳಿದರು. ಜೀ ಕನ್ನಡ ವಾಹಿನಿಯ ಜಡ್ಜ್ ಸ್ಥಾನದಿಂದ ರಕ್ಷಿತಾ ಪ್ರೇಮ್ ಕೆಳಕ್ಕಿಳಿದರು. ಇದಕ್ಕೆ ಅಸಲಿ ಕಾರಣವೇನು?
ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿದ್ದ ನಟಿ ರಕ್ಷಿತಾ ಪ್ರೇಮ್ ʼನಾನು 9 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಒಂದು ನಿರ್ದಿಷ್ಟ ವಾಹಿನಿಯ, ನಿರ್ದಿಷ್ಟ ಶೋದಲ್ಲಿ ನಾನು ಇಲ್ಲದ್ದನ್ನ ಪ್ರಶ್ನೆ ಮಾಡಿ ಟ್ಯಾಗ್ ಮಾಡುತ್ತಿರುವ ಎಲ್ಲರಿಗೂ ನಾನು ಈ ಬಗ್ಗೆ ಸ್ಪಷ್ಟನೆ ಕೊಡುತ್ತಿದ್ದೇನೆ. ನನ್ನ ಜೀವನದಲ್ಲಿ ಬದಲಾವಣೆ ಬಯಸಿದ್ದೇನೆ. ಹೊಸದಾಗಿ ಏನನ್ನಾದ್ರೂ ಪ್ರಯತ್ನಿಸಲು ಮುಂದಾಗಿದ್ದೇನೆ. ನಾನು ಇನ್ನುಮುಂದೆ ಆ ಚಾನಲ್‌ನ ಭಾಗವಾಗಿ ಇರೋದಿಲ್ಲ. ಇಷ್ಟು ವರ್ಷ ಆ ಶೋಗಳಲ್ಲಿ ನನ್ನನ್ನ ನೋಡಿ, ಸಂತೋಷದಿಂದ ಬೆಂಬಲಿಸಿದ್ದೀರಿ. ಈ 9 ವರ್ಷಗಳ ಜರ್ನಿಯಲ್ಲಿ ಅನೇಕ ಸುಂದರ ದಿನಗಳನ್ನ ನೀಡಿದ ನಿಮಗೂ ಮತ್ತು ದೇವರಿಗೂ ಹೃದಯಪೂರ್ವಕ ಧನ್ಯವಾದಗಳು. ನಾನು ಯಾವುದೇ ಕೆಲಸ/ಸಿನಿಮಾದಲ್ಲಿ ಮತ್ತೆ ನಿಮ್ಮ ಎದುರು ಬಂದರೂ ನೀವು ಇದೇ ರೀತಿಯ ಪ್ರೀತಿ-ಪ್ರೋತ್ಸಾಹ ನನಗೆ ತೋರಿಸುತ್ತೀರಿ ಎಂದು ಭಾವಿಸಿದ್ದೇನೆʼ ಎಂದು ಹೇಳಿದ್ದಾರೆ.
ಅಂದರೆ ಕಳೆದ ವರ್ಷ ಕಾಮಿಡಿ ಖಿಲಾಡಿಗಳು ಪ್ರೋಮೋ ರಿಲೀಸ್ ಆದಾಗ ಅದರಲ್ಲಿ ರಕ್ಷಿತಾ ಪ್ರೇಮ್ ಇಲ್ಲದ್ದನ್ನ ನೋಡಿ ಅನೇಕರು ಈ ಬಗ್ಗೆ ಪ್ರಶ್ನೆ ಮಾಡಿದ್ದರು. ಅವರ ಸೋಷಿಯಲ್ ಮೀಡಿಯಾದಲ್ಲಂತೂ ಅನೇಕರು ಇದರ ಬಗ್ಗೆಯೇ ಪ್ರಶ್ನಿಸಿದ್ದರು. ಆಗ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಈ ವಿಷಯ ಹೇಳಿಕೊಂಡಿದ್ದರು..
ನೀವು ಜೀ ಕನ್ನಡ ವಾಹಿನಿಯ ಕಾರ್ಯಕ್ರಮಗಳ ಜಡ್ಜ್ ಸ್ಥಾನವನ್ನ ಬಿಟ್ಟಿದ್ದೇಕೆ, ವಾಹಿನಿಯನ್ನ ತೊರೆದಿದ್ದು ಯಾಕೆ ಎಂದು ನೇರವಾಗಿಯೇ ಪ್ರಶ್ನೆ ಮಾಡಿದ್ದರು. ಅದಕ್ಕೆ ರಕ್ಷಿತಾ ಪ್ರಾಮಾಣಿಕ ಉತ್ತರ ನೀಡಿದ್ದಾರೆ.
ನಾನು ಪ್ರಾಮಾಣಿಕವಾಗಿ, ಸತ್ಯವನ್ನೇ ಹೇಳಬೇಕು ಎಂದರೆ..ಜೀ ವಾಹಿನಿಯಲ್ಲಿ ಇಂಟರ್ನಲ್ ಟೀಮ್ ಬದಲಾಯಿತು. ಆಮೇಲೆ ನನಗೆ ಸಮಸ್ಯೆಗಳು ಶುರುವಾದವು. ಅದೇ ಕಾರಣಕ್ಕೆ ನಾನು ವಾಹಿನಿಯನ್ನ ತೊರೆದೆ. ಆದರೆ ಅಲ್ಲಿರುವ ಅನೇಕರ ಜೊತೆ ಈಗಲೂ ನಾನು ತುಂಬ ಚೆನ್ನಾಗಿದ್ದೇನೆ. ನನಗೆ ಸುಂದರ ನೆನಪುಗಳು ಸಿಕ್ಕಿವೆ. ಅವೆಲ್ಲವೂ ನನ್ನ ಹೃದಯದಲ್ಲಿವೆ. ಆದರೆ ಕೆಲವರಿಗೆ ಎಲ್ಲವೂ ಸರಿಯಾಗಿ ಆಗುವುದು ಬೇಕಿರುವುದಿಲ್ಲ. ಅಂಥವರು ಪ್ರತಿ ಕೆಲಸವನ್ನೂ ಕೆಡಿಸುತ್ತಾರೆ. ನಾನು ಮೂವ್ ಆನ್ ಆಗಿದ್ದೇನೆ..ಅವರೂ ಮೂವ್ ಆನ್ ಆಗಿರುತ್ತಾರೆ ಎಂದು ನಾನು ಊಹಿಸಿದ್ದೇನೆʼ ಎಂದು ಹೇಳಿದ್ದಾರೆ. ರಕ್ಷಿತಾ ಜೀ ಕನ್ನಡ ವಾಹಿನಿ ಬಿಟ್ಟಾಗಲೇ ಅನೇಕರಿಗೆ ಅನುಮಾನ ಇತ್ತು. ಅಲ್ಲೇನೋ ಸಮಸ್ಯೆ ಆಗಿರೋದ್ರಿಂದಲೇ ಅವರು ಬಿಟ್ಟಿರಬಹುದು ಎಂದು ತುಂಬ ಜನ ಊಹಿಸಿದ್ದರು. ಆದರೆ ರಕ್ಷಿತಾ ವಾಹಿನಿಯನ್ನ ಬಿಟ್ಟ ಮೇಲೆ ಏನನ್ನೂ ಹೇಳಿರಲಿಲ್ಲ.