Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > ಪಾಕಿಸ್ತಾನದಲ್ಲಿ ನಡೆಯುತ್ತಿರುವ ಅಮೆರಿಕ-ಇರಾನ್ ಮಾತುಕತೆಯ ಪ್ರಮುಖ ವಿಷಯಗಳೇನು?
ವಿದೇಶ

ಪಾಕಿಸ್ತಾನದಲ್ಲಿ ನಡೆಯುತ್ತಿರುವ ಅಮೆರಿಕ-ಇರಾನ್ ಮಾತುಕತೆಯ ಪ್ರಮುಖ ವಿಷಯಗಳೇನು?

Share
3 Min Read
SHARE

 ಪಶ್ಚಿಮ ಏಷ್ಯಾ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್‌ನ ಉನ್ನತ ಅಧಿಕಾರಿಗಳು ಶನಿವಾರ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಸಭೆ ಸೇರಿದ್ದಾರೆ.

ಪಾಕಿಸ್ತಾನದಲ್ಲಿ ನಡೆಯುತ್ತಿರುವ ಅಮೆರಿಕ-ಇರಾನ್ ಮಾತುಕತೆಯ ಪ್ರಮುಖ ವಿಷಯಗಳೇನು?

ಒಂದು ಸಾಲಿನಲ್ಲಿಪಶ್ಚಿಮ ಏಷ್ಯಾ ಯುದ್ಧವನ್ನು ಅಂತ್ಯಗೊಳಿಸುವ ಉದ್ದೇಶದಿಂದ ಅಮೆರಿಕ ಮತ್ತು ಇರಾನ್ ಪ್ರತಿನಿಧಿಗಳು ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆ ನಡೆಸುತ್ತಿದ್ದಾರೆ.ಪ್ರಮುಖ ಅಂಶಗಳು• ಲೆಬನಾನ್ ಕದನ ವಿರಾಮದ ಬೇಡಿಕೆಲೆಬನಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮತ್ತು ಕದನ ವಿರಾಮ ಜಾರಿಗೊಳಿಸಲು ಇರಾನ್ ಬಲವಾಗಿ ಆಗ್ರಹಿಸುತ್ತಿದೆ.• ಆರ್ಥಿಕ ನಿರ್ಬಂಧಗಳ ಸಡಿಲಿಕೆತನ್ನ ದೇಶದ ಮೇಲೆ ಹೇರಲಾಗಿರುವ ಆರ್ಥಿಕ ನಿರ್ಬಂಧಗಳನ್ನು ಹಿಂಪಡೆಯಬೇಕೆಂದು ಇರಾನ್ ಒತ್ತಾಯಿಸುತ್ತಿದ್ದರೆ, ಅಮೆರಿಕವು ಪರಮಾಣು ಕಾರ್ಯಕ್ರಮಗಳ ನಿಯಂತ್ರಣವನ್ನು ಷರತ್ತಾಗಿ ವಿಧಿಸಿದೆ.• ಹೊರ್ಮುಜ್ ಜಲಸಂಧಿಯ ಹತೋಟಿಜಲಸಂಧಿಯ ಮೇಲೆ ನಿಯಂತ್ರಣ ಮತ್ತು ಶುಲ್ಕ ಸಂಗ್ರಹಿಸಲು ಇರಾನ್ ಬಯಸುತ್ತಿದೆ, ಆದರೆ ಅಮೆರಿಕವು ಅಲ್ಲಿ ಮುಕ್ತ ಸಂಚಾರವನ್ನು ಬಯಸುತ್ತಿದೆ.• ಕ್ಷಿಪಣಿ ಸಾಮರ್ಥ್ಯ ಮತ್ತು ಯುರೇನಿಯಂಇರಾನ್‌ನ ಕ್ಷಿಪಣಿ ಸಾಮರ್ಥ್ಯವನ್ನು ಕಡಿತಗೊಳಿಸಲು ಅಮೆರಿಕ ಮತ್ತು ಇಸ್ರೇಲ್ ಒತ್ತಾಯಿಸುತ್ತಿವೆ; ಜೊತೆಗೆ ಯುರೇನಿಯಂ ಸಮೃದ್ಧೀಕರಣದ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿವೆ.• ಸೇನಾ ಹಿಂತೆಗೆತದ ನಿರೀಕ್ಷೆಅಮೆರಿಕದ ಸೈನ್ಯವನ್ನು ಮಧ್ಯಪ್ರಾಚ್ಯದಿಂದ ಹಿಂಪಡೆಯುವಂತೆ ಇರಾನ್ ಒತ್ತಾಯಿಸುತ್ತಿದೆ, ಆದರೆ ಶಾಂತಿ ಒಪ್ಪಂದವಾಗುವವರೆಗೆ ಸೇನೆ ತಂಗಿರಲಿದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.ಪ್ರಮುಖ ಅಂಕಿಅಂಶಗಳು2,000ಹಿಜ್ಬುಲ್ಲಾ ಬಂಡುಕೋರರ ದಾಳಿಯಲ್ಲಿ ಮೃತಪಟ್ಟವರುಆರು ವಾರಯುದ್ಧದ ಅವಧಿಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ.

ಲೆಬನಾನ್‌ನಲ್ಲಿ ಕದನ ವಿರಾಮ ಜಾರಿಗೊಳಿಸುವುದು, ತನ್ನ ಮೇಲೆ ಹೇರಿರುವ ನಿರ್ಬಂಧಗಳನ್ನು ತೆಗೆದುಹಾಕುವ ಬಗ್ಗೆ ಅಮೆರಿಕ ಬದ್ಧತೆ ಪ್ರದರ್ಶಿಸಿದ ನಂತರವೇ ಔಪಚಾರಿಕ ಮಾತುಕತೆಗಳು ಪ್ರಾರಂಭವಾಗಬಹುದು ಎಂದು ಇರಾನ್ ಪಟ್ಟು ಹಿಡಿದಿದೆ. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ಚರ್ಚೆಯಾಗಲಿರುವ ಪ್ರಮುಖ ವಿಷಯಗಳು ಇಲ್ಲಿವೆ:

ಲೆಬನಾನ್‌ನಲ್ಲಿ ಕದನ ವಿರಾಮಕ್ಕೆ ಇರಾನ್ ಆಗ್ರಹಿಸುತ್ತಿದೆ. ಮಾರ್ಚ್‌ನಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ ಇರಾನ್ ಬೆಂಬಲಿತ ಹಿಜ್ಬುಲ್ಲಾ ಬಂಡುಕೋರರ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸುಮಾರು 2,000 ಜನರು ಮೃತರಾಗಿದ್ದಾರೆ. ಲೆಬನಾನ್ ಕಾರ್ಯಾಚರಣೆಯು ಕದನ ವಿರಾಮದ ಭಾಗವಲ್ಲ ಎಂದು ಇಸ್ರೇಲ್ ಮತ್ತು ಅಮೆರಿಕ ಹೇಳಿದ್ದರೆ, ಇದು ಅದರ ಭಾಗವೇ ಎಂದು ಇರಾನ್ ಪ್ರತಿಪಾದಿಸುತ್ತಿದೆ.

ತನ್ನ ಆಸ್ತಿಗಳ ಮೇಲಿನ ಮುಟ್ಟುಗೋಲನ್ನು ಹಿಂಪಡೆಯಲು ಮತ್ತು ವರ್ಷಗಳಿಂದ ತನ್ನ ಆರ್ಥಿಕತೆಯನ್ನು ಹೈರಾಣಾಗಿಸಿರುವ ನಿರ್ಬಂಧಗಳನ್ನು ಕೊನೆಗೊಳಿಸಲು ಅಮೆರಿಕವನ್ನು ಇರಾನ್ ಒತ್ತಾಯಿಸುತ್ತಿದೆ. ಇರಾನ್ ತನ್ನ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳಲ್ಲಿ ರಿಯಾಯಿತಿ ನೀಡಿದಲ್ಲಿ ಮಾತ್ರ ಮಹತ್ವದ ನಿರ್ಬಂಧಗಳ ಸಡಿಲಿಕೆಗೆ ಸಿದ್ಧವಿರುವುದಾಗಿ ಅಮೆರಿಕ ಹೇಳಿದೆ.

ಹೊರ್ಮುಜ್ ಜಲಸಂಧಿಯ ಮೇಲೆ ತನ್ನ ಅಧಿಕಾರವನ್ನು ಒಪ್ಪಿಕೊಳ್ಳಬೇಕು ಇರಾನ್ ಬಯಸುತ್ತಿದೆ. ಅಲ್ಲಿ ಶುಲ್ಕವನ್ನು ಸಂಗ್ರಹಿಸುವುದು ಮತ್ತು ಪ್ರವೇಶವನ್ನು ನಿಯಂತ್ರಿಸುವುದು ಅದರ ಉದ್ದೇಶವಾಗಿದೆ. ಆದರೆ, ಯಾವುದೇ ಶುಲ್ಕ ಅಥವಾ ಮಿತಿಗಳಿಲ್ಲದೆ ತೈಲ ಟ್ಯಾಂಕರ್‌ಗಳು ಮತ್ತು ಇತರ ಸಂಚಾರಕ್ಕೆ ಇದನ್ನು ಮುಕ್ತವಾಗಿಡಬೇಕು ಎಂದು ಅಮೆರಿಕ ಬಯಸಿದೆ.

ಆರು ವಾರಗಳ ಯುದ್ಧದಲ್ಲಿ ಉಂಟಾದ ಎಲ್ಲಾ ಹಾನಿಗಳಿಗೆ ಇರಾನ್ ಪರಿಹಾರವನ್ನು ಕೋರುವ ನಿರೀಕ್ಷೆಯಿದೆ. ಈ ಬಗ್ಗೆ ಅಮೆರಿಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಯುರೇನಿಯಂ ಸಮೃದ್ಧೀಕರಣಕ್ಕೆ ಅವಕಾಶ ನೀಡಬೇಕೆಂದು ಇರಾನ್ ಬಯಸುತ್ತಿದೆ. ಆದರೆ ಅಮೆರಿಕ ಇದನ್ನು ತಳ್ಳಿಹಾಕಿದೆ. ಇದು ಮಾತುಕತೆಗೆ ಒಳಪಡದ ವಿಷಯ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇರಾನ್‌ನ ಕ್ಷಿಪಣಿ ಸಾಮರ್ಥ್ಯಗಳನ್ನು ತೀವ್ರವಾಗಿ ಕಡಿತಗೊಳಿಸಬೇಕೆಂದು ಇಸ್ರೇಲ್ ಮತ್ತು ಅಮೆರಿಕ ಎರಡೂ ಬಯಸುತ್ತಿವೆ. ಆದರೆ ತನ್ನ ಬೃಹತ್ ಕ್ಷಿಪಣಿ ಭಂಡಾರದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಇರಾನ್ ಹೇಳಿದೆ.

ನಿಯೋಜಿಸಲಾಗಿರುವ ಅಮೆರಿಕದ ಸೈನ್ಯವನ್ನು ಹಿಂಪಡೆಯುವುದು, ಎಲ್ಲಾ ಯುದ್ಧಗಳನ್ನುನಿಲ್ಲಿಸುವುದು ಮತ್ತು ಆಕ್ರಮಣಕಾರಿ ಧೋರಣೆ ತೋರುವುದಿಲ್ಲ ಎಂಬ ಬದ್ಧತೆಯನ್ನು ಇರಾನ್ ಅಮೆರಿಕದಿಂದ ನಿರೀಕ್ಷಿಸುತ್ತಿದೆ. ಶಾಂತಿ ಒಪ್ಪಂದ ಏರ್ಪಡುವವರೆಗೆ ಮಧ್ಯಪ್ರಾಚ್ಯದಲ್ಲಿ ಸೇನೆ ಉಳಿಸಿಕೊಳ್ಳುವುದಾಗಿ ಟ್ರಂಪ್ ಹೇಳಿದ್ದಾರೆ. ಒಪ್ಪಂದಕ್ಕೆ ಸಹಕರಿಸದಿದ್ದರೆ ಯುದ್ಧವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.

ನಿದ್ದೆ ಮಾಡಿದರೂ ಸುಸ್ತಾಗುತ್ತಿದೆಯೇ? ಹಾಗಾದ್ರೆ ಎಚ್ಚರವಹಿಸಿ.!

TAGGED:What are the main issues of the US-Iran talks taking place in Pakistan?
Share This Article
Facebook Twitter Copy Link Print
Previous Article ನಿದ್ದೆ ಮಾಡಿದರೂ ಸುಸ್ತಾಗುತ್ತಿದೆಯೇ? ಹಾಗಾದ್ರೆ ಎಚ್ಚರವಹಿಸಿ.!
Next Article ಕೊಪ್ಪಳದಲ್ಲೂ ಲವ್ ಜಿಹಾದ್: ಯುವತಿಯರ ಅಶ್ಲೀಲ ವಿಡಿಯೋಗಳು ಪತ್ತೆ

Popular Posts

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

You Might Also Like

ದೇಶಪ್ರಮುಖವಿದೇಶ

ಗಲ್ಫ್ ಕಡಲ ತೀರದಲ್ಲಿ ತೀವ್ರ ಉದ್ವಿಗ್ನತೆ: ಭಾರತೀಯ ನಾವಿಕರ ರಕ್ಷಣೆಗೆ ಕೇಂದ್ರ ಸರ್ಕಾರ ಹೈ ಅಲರ್ಟ್!

1 Min Read
ದೇಶಪ್ರಮುಖವಿದೇಶ

Giant Lizard ಅಮೆರಿಕದ ನಿದ್ದೆಗೆಡಿಸಿದ 4 ಅಡಿ ಉದ್ದ, 5 ಕೆಜಿ ತೂಕದ ದೈತ್ಯ ಹಲ್ಲಿ

2 Min Read
ದೇಶಪ್ರಮುಖವಿದೇಶ

ಎಲೋನ್ ಮಸ್ಕ್ ಒಡೆತನದ SpaceX ಮತ್ತು Starlink ಟಾರ್ಗೆಟ್ ಎಂದ ಇರಾನ್!

1 Min Read
ವಿದೇಶದೇಶಪ್ರಮುಖ

ಪಿಒಕೆಯಲ್ಲಿ ಪ್ರತಿಭಟನಾಕಾರರ ಮೇಲೆ ಪಾಕ್ ಸೇನೆ ಗುಂಡಿನ ದಾಳಿ, 16 ಜನ ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?