Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಸಾವಿನ ಶೋಕದಲ್ಲೂ ಛಲ ಬಿಡದೆ ಸ್ಟೇಟ್ ಟಾಪರ್ ಆದ ದಿಶಾ!
ಕರ್ನಾಟಕ

ಸಾವಿನ ಶೋಕದಲ್ಲೂ ಛಲ ಬಿಡದೆ ಸ್ಟೇಟ್ ಟಾಪರ್ ಆದ ದಿಶಾ!

Share
3 Min Read
SHARE

ದ್ವಿತೀಯ ಪಿಯುಸಿ  ಫಲಿತಾಂಶದಲ್ಲಿ ದಕ್ಷಿಣ ಕನ್ನಡದ  ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ  ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ  600ಕ್ಕೆ 600 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ.

ದಿಶಾ ಪಾಲಿಗೆ ವಿಧಿ ಎಷ್ಟೊಂದು ಕ್ರೂರವಾಗಿತ್ತು ಅಂದರೆ, “ಎಕ್ಸಾಮ್ ಚೆನ್ನಾಗಿ ಬರಿ ಮಗಳೇ” ಅಂತ ತಲೆ ಸವರಿ, ಹರಸಿ ಕಳಿಸಿದ ಅಮ್ಮ, ಆಕೆ ಮೂರನೇ ಪರೀಕ್ಷೆ ಮುಗಿಸಿ ಮನೆಗೆ ಹಿಂದಿರುಗುವಷ್ಟರಲ್ಲಿ ಶಾಶ್ವತವಾಗಿ ಕಣ್ಮುಚ್ಚಿದ್ದಳು. ಪರೀಕ್ಷೆ ಮುಗಿದ ಖುಷಿಯಲ್ಲಿ ಅಮ್ಮನ ಮುಖ ನೋಡಲು ಓಡಿಬಂದ ಆ ಯುವತಿಗೆ ಮನೆಯಲ್ಲಿ ಅಮ್ಮನಿರಲಿಲ್ಲ, ಬದಲಿಗೆ ಆಕೆಯ ಮೃತದೇಹ ಹಾಗೂ ಎಂದೆಂದಿಗೂ ಮರೆಯಲಾಗದ ಕಣ್ಣೀರ ನೆನಪುಗಳಷ್ಟೇ ಅನಾಥವಾಗಿ ಬಿದ್ದಿದ್ದವು.

ಮೂರು ಪರೀಕ್ಷೆ ಮುಗಿಯುತ್ತಿದ್ದಂತೆ ಮುಗಿಲುಬಿದ್ದ ದುಃಖ

ಫೆಬ್ರವರಿ 28 ರಿಂದ ಮಾರ್ಚ್ 17ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು. ದಿಶಾ ಬಹಳ ಹುಮ್ಮಸ್ಸಿನಿಂದ ಹಾಗೂ ಅಷ್ಟೇ ಶ್ರದ್ಧೆಯಿಂದ ತನ್ನ ಮೊದಲ ಮೂರು ಪರೀಕ್ಷೆಗಳನ್ನು ಬರೆದು ಮುಗಿಸಿದ್ದಳು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ಮೂರು ಪರೀಕ್ಷೆಗಳು ಮುಗಿಯುತ್ತಿದ್ದಂತೆ ದಿಶಾ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹೆತ್ತ ತಾಯಿಯನ್ನು ಕಳೆದುಕೊಂಡಳು. ಅಮ್ಮನಿಲ್ಲದ ಆ ಘೋರ ಕ್ಷಣ ಆಕೆಯ ಪಾಲಿಗೆ ಅಕ್ಷರಶಃ ಸಿಡಿಲು ಬಡಿದಂತಿತ್ತು.

ಕಣ್ಣೀರು ಒರೆಸಿಕೊಳ್ಳುತ್ತಲೇ ಪರೀಕ್ಷಾ ಕೇಂದ್ರಕ್ಕೆ!

ತನ್ನನ್ನು ಹೆತ್ತು ಹೊತ್ತು ಬೆಳೆಸಿದ ತಾಯಿಯ ಮೃತದೇಹದ ಮುಂದೆ ನಿಂತು ರೋಧಿಸುತ್ತಿದ್ದ ಆ ಕಂದಮ್ಮನ ಕಣ್ಣೀರು ಕಲ್ಲು ಹೃದಯವನ್ನೂ ಕರಗಿಸುವಂತಿತ್ತು. ತಾಯಿಯ ಅಗಲಿಕೆಯ ಆ ಭೀಕರ ನೋವನ್ನು ಎದೆಗವಚಿಕೊಂಡು, ಉಕ್ಕಿ ಬರುವ ಕಣ್ಣೀರನ್ನು ತಡೆಯುತ್ತಲೇ ಆಕೆ ತನ್ನ ಉಳಿದ ಪರೀಕ್ಷೆಗಳನ್ನು ಬರೆಯಲು ಮುಂದಾದಳು. ಎದೆ ಸೀಳುವಂತಹ ನೋವಿದ್ದರೂ, ತನ್ನ ಅಮ್ಮನ ಕನಸನ್ನು ನನಸು ಮಾಡಬೇಕೆಂಬ ಆಕೆಯ ಛಲ ಮಾತ್ರ ಒಂದು ಚೂರು ಕಡಿಮೆಯಾಗಲಿಲ್ಲ.

‘ಅಮ್ಮಾ.. ನಾನು ಮಾಡಿಬಿಟ್ಟೆ..’

ಫಲಿತಾಂಶ ಬಂದಾಗ ತನಗೆ 600ಕ್ಕೆ 600 ಅಂಕ ಬಂದಿದೆ ಎಂದು ತಿಳಿಯುತ್ತಿದ್ದಂತೆ ದಿಶಾ ಗಟ್ಟಿಯಾಗಿ ಕೂಗಿದಳು. “ಅಮ್ಮಾ.. ನಾನು ಮಾಡಿಬಿಟ್ಟೆ, ನಿನ್ನ ಆಸೆಯಂತೆ ನಾನು ಸ್ಟೇಟ್‌ಗೆ ಫಸ್ಟ್ ಬಂದೆ” ಎಂದುಹೇಳಿದಳು. ತನ್ನ ಗೆಲುವನ್ನು ಅಪ್ಪಿಕೊಂಡು ಸಂಭ್ರಮಿಸಲು ಇಂದು ತನ್ನ ಹೆತ್ತವ್ವನೇ ಇಲ್ಲವಲ್ಲ ಎಂಬ ನೋವು ಅವಳ ಕಣ್ಣೀನಲ್ಲಿ ಕಾಣುತ್ತಿತ್ತು.

‘ಅಮ್ಮನೇ ನನ್ನ ಬೆನ್ನಿನ ಆಸರೆಯಾಗಿದ್ದಳು’

“ನಾನು ಚೆನ್ನಾಗಿ ಓದಬೇಕು, ದೊಡ್ಡ ಸಾಧನೆ ಮಾಡಬೇಕು ಎಂದು ಅಮ್ಮ ಸದಾ ಹೇಳುತ್ತಿದ್ದಳು. ಅವಳು ಇದ್ದಾಗ ನನಗೆ ಸಿಕ್ಕಾಪಟ್ಟೆ ಸಹಾಯ ಮಾಡುತ್ತಿದ್ದಳು. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಆಕೆಯ ಪ್ರೀತಿಯಿತ್ತು. ಇಂದು ಈ ರಿಸಲ್ಟ್ ನೋಡಲು ಅವಳಿದ್ದಿದ್ದರೆ ಎಷ್ಟೊಂದು ಸಂತೋಷ ಪಡುತ್ತಿದ್ದಳೋ.. ಈಗಲೂ ಮೇಲಿಂದ ನೋಡಿ ಅಮ್ಮ ಖಂಡಿತ ಸಂತೋಷ ಪಡುತ್ತಿದ್ದಾಳೆ ಅಂತ ನನಗೆ ಗೊತ್ತು” ಎಂದು ಗದ್ಗದಿತಳಾಗಿ ದಿಶಾ ನುಡಿದಿದ್ದಾಳೆ.

ಪರೀಕ್ಷಾ ಕೇಂದ್ರದಲ್ಲಿ ಕಣ್ಣೀರ ಧಾರಾಕಾರ

ಮನೆಯಲ್ಲಿ ತಾಯಿಯಿಲ್ಲದ ಶೂನ್ಯತೆ ಕಾಡುತ್ತಿದ್ದರೆ, ಇತ್ತ ಪರೀಕ್ಷಾ ಕೇಂದ್ರದಲ್ಲಿ ದಿಶಾಳ ಕಣ್ಣುಗಳಿಂದ ಅಶ್ರುಧಾರೆ ಹರಿಯುತ್ತಲೇ ಇತ್ತು. ಪ್ರತಿ ಬಾರಿ ಉತ್ತರ ಬರೆಯುವಾಗಲೂ ಅಮ್ಮನ ನೆನಪುಗಳು ಆಕೆಯನ್ನು ಕಾಡುತ್ತಿದ್ದವು. ಆದರೂ ಕಣ್ಣೀರನ್ನು ಒರೆಸಿಕೊಳ್ಳುತ್ತಾ, ತನ್ನ ತಾಯಿಯ ಮೇಲಿದ್ದ ಅಪಾರ ಪ್ರೀತಿಯನ್ನೇ ಶಕ್ತಿಯನ್ನಾಗಿ ಪರಿವರ್ತಿಸಿಕೊಂಡಳು. ಅಮ್ಮನ ಕನಸಿಗೆ ಎಂದಿಗೂ ದ್ರೋಹ ಬಗೆಯಬಾರದು ಎಂಬ ದೃಢ ಸಂಕಲ್ಪವೇ ಆಕೆಯನ್ನು ನೂರಕ್ಕೆ ನೂರು ಅಂಕ ಗಳಿಸುವಂತೆ ಮಾಡಿತು.

ನೋವನ್ನೇ ಮೆಟ್ಟಿಲಾಗಿ ಮಾಡಿಕೊಂಡ ಸಾಧಕಿ
ತಾಯಿಯ ಸಾವಿನಂತಹ ದೊಡ್ಡ ಆಘಾತ ಬಂದರೂ ದಿಶಾ ಮಾಡಿದ ಸಾಧನೆ ನಿಜವಾಗಿಯೂ ಅದ್ವಿತೀಯ. ಬೆಟ್ಟದಷ್ಟು ದುಃಖ ಇದ್ದರೂ ಗುರಿಯ ಮೇಲೆ ಗಮನ ಕಳೆದುಕೊಳ್ಳದ ಆಕೆಯ ಮನೋಬಲ ಇಂದಿನ ಲಕ್ಷಾಂತರ ಯುವಜನರಿಗೆ ಸ್ಫೂರ್ತಿ. ರಾಜ್ಯಕ್ಕೆ 1st ಸ್ಥಾನ ಬಂದರೂ ಅಮ್ಮನಿಲ್ಲದ ಖಾಲಿತನ ದಿಶಾಳನ್ನು ಕಾಡುತ್ತಿದೆ.

2nd PUC result ಪ್ರಕಟ: ರಾಜ್ಯಕ್ಕೆ ಉಡುಪಿ ಪ್ರಥಮ; ಕೊನೆಯ ಸ್ಥಾನ ಯಾವ ಜಿಲ್ಲೆಗೆ?

 

2nd PUC result ಪ್ರಕಟ: ರಾಜ್ಯಕ್ಕೆ ಉಡುಪಿ ಪ್ರಥಮ; ಕೊನೆಯ ಸ್ಥಾನ ಯಾವ ಜಿಲ್ಲೆಗೆ?

TAGGED:Disharemained steadfast even in the midst of mourning!who became the state topper
Share This Article
Facebook Twitter Copy Link Print
Previous Article 2nd PUC result ಪ್ರಕಟ: ರಾಜ್ಯಕ್ಕೆ ಉಡುಪಿ ಪ್ರಥಮ; ಕೊನೆಯ ಸ್ಥಾನ ಯಾವ ಜಿಲ್ಲೆಗೆ?
Next Article ನಾಪತ್ತೆಯಾದ ಕೇರಳ ಬಾಲಕಿ ಕೇಸಿಗೆ ಟ್ವಿಸ್ಟ್;  ಬಾಲಕಿ ತಾಯಿ ಹೇಳಿದ್ದೇನು?

Popular Posts

ಯೂಟ್ಯೂಬ್ ವ್ಲಾಗ್ಸ್‌, ರೀಲ್ಸ್, ಬ್ರ್ಯಾಂಡ್ ಪ್ರಮೋಟ್ ಮಾಡುವ ಸೋನುಗೆ ಬರುವ ಆದಾಯ ಎಷ್ಟು?; ಟ್ರೋಲರ್ಸ್ ಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಸೋನು ಶ್ರೀನಿವಾಸ್ ಗೌಡ

2 Min Read

Voter ID ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ವೋಟರ್ ಐಡಿ ಕಡ್ಡಾಯ ಎಂದ ಸಿಎಂ ಡಿಕೆ

2 Min Read

ಗೃಹಲಕ್ಷ್ಮಿ ಯೋಜನೆಯಲ್ಲಿ ಏನೆಲ್ಲಾ ಚೇಂಜ್ ಆಗ್ತಿದೆ; ಅರ್ಜಿ ಸಲ್ಲಿಸಲು ಏನು ಮಾಡ್ಬೇಕು?

2 Min Read

Rain shortage ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಶೇ.21 ಕೊರತೆ!

2 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read
ಕರ್ನಾಟಕದೇಶಪ್ರಮುಖ

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read
ಕರ್ನಾಟಕಪ್ರಮುಖ

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read
ಕರ್ನಾಟಕದೇಶಪ್ರಮುಖ

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Social Networks

Facebook-f Instagram Twitter
Welcome Back!

Sign in to your account

Lost your password?