newsics.com
ಕನ್ನಡದ ‘ಪುಟ್ನಂಜ’, ‘ಸಿಂಹಾದ್ರಿಯ ಸಿಂಹ’ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಮೀನಾ ಅವರು ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. ಕನ್ನಡ, ತೆಲುಗು, ತಮಿಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದಾರೆ. 90ರ ದಶಕದಿಂದಲೂ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸುವ ಮೂಲಕ ಜನಪ್ರಿಯ ನಟಿ ಎನಿಸಿಕೊಂಡಿದ್ದಾರೆ.
ಆದರೆ, ಇತ್ತೀಚೆಗೆ ಕೇಳಿಬಂದ ಸುದ್ದಿಯೊಂದು ಅವರ ಬಿಸಿನೆಸ್ ಮೈಂಡ್ ಎಂತದ್ದು ಎಂಬುದನ್ನು ತೋರಿಸಿಕೊಟ್ಟಿದೆ.
ಸುಮಾರು 20 ವರ್ಷಗಳ ಹಿಂದೆ ಸಾಲ ಮಾಡಿ ಕಟ್ಟಿದ ಮನೆಯೊಂದು ಇಂದು ನೂರು ಕೋಟಿ ರೂಪಾಯಿಗೆ ಮಾರಾಟವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಿಂದ ಬರೋಬ್ಬರಿ 10 ಕೋಟಿ ರೂಪಾಯಿ ಸಾಲ ಪಡೆದು ತಮಿಳುನಾಡಿನಲ್ಲಿ ಒಂದು ಐಷಾರಾಮಿ ಮನೆಯನ್ನು ನಿರ್ಮಿಸಿದ್ದರು.
ಮೀನಾ ಅವರು ಅಂದೇ ರಿಯಲ್ ಎಸ್ಟೇಟ್ ಮತ್ತು ಸ್ವಂತ ಮನೆಯ ಮೇಲೆ ಹೂಡಿಕೆ ಮಾಡಿದ್ದರು. ಅಂದು ಅವರು ಪಟ್ಟ ಶ್ರಮ ಮತ್ತು ಆ ಸಾಲದ ಹೊರೆ ಇಂದು ಅವರಿಗೆ ಅತೀ ದೊಡ್ಡ ಲಾಭವನ್ನು ತಂದುಕೊಟ್ಟಿದೆ.
ಈ ಮನೆಯ ಸೌಂದರ್ಯಕ್ಕೆ ಮನಸೋತ ಅಮೆರಿಕಾದ ದಂಪತಿಗಳು, ಇದನ್ನು ಖರೀದಿಸಲು ಮುಂದೆ ಬಂದಿದ್ದಾರೆ. ಹಳೆಯ ಕಾಲದ ಕಲೆ ಮತ್ತು ವಿನ್ಯಾಸದ ಮೇಲೆ ಆಸಕ್ತಿ ಹೊಂದಿದ್ದ ಈ ದಂಪತಿಗಳು, ಮೀನಾ ಅವರ ಈ ಮನೆಯನ್ನು 100 ಕೋಟಿ ರೂಪಾಯಿ ನೀಡಿ ತಮ್ಮದಾಗಿಸಿಕೊಂಡಿದ್ದಾರೆ.
ಇವತ್ತಿನ ಕಾಲದಲ್ಲಿ ಎಷ್ಟೇ ಆಧುನಿಕ ಅಪಾರ್ಟ್‌ಮೆಂಟ್‌ಗಳು ಬಂದರೂ, ಹಳೆಯ ಕಾಲದ ವಿನ್ಯಾಸಕ್ಕೆ ಇರುವ ಬೆಲೆಯೇ ಬೇರೆ. ಮೀನಾ ಅವರು ಕಟ್ಟಿಸಿದ ಈ ಮನೆ ಕೇವಲ ಸಿಮೆಂಟ್, ಇಟ್ಟಿಗೆಯ ಕಟ್ಟಡವಲ್ಲ. ಅದು ಹಳೆಯ ಕಾಲದ ಸಾಂಪ್ರದಾಯಿಕ ವಿನ್ಯಾಸದ ಅದ್ಭುತ ಸಂಗಮ.