https://youtube.com/shorts/T_aMW9fkptU?si=5dNoX3esn0X-svY6
newsics.com
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಅಂದ್ರೆ ಅಲ್ಲಿ ಎಲ್ಲವೂ ಹೈಟೆಕ್, ಎಲ್ಲವೂ ಡಿಫರೆಂಟ್. ಇದೀಗ ಬೆಂಗಳೂರಿನ ರಸ್ತೆ ಬದಿಯ ಎಳನೀರು ಅಂಗಡಿಯೊಂದು ಇಡೀ ದೇಶದ ಗಮನ ಸೆಳೆದಿದೆ. ಸಾಮಾನ್ಯವಾಗಿ ನಾವು ಎಳನೀರನ್ನು ಒಂದಕ್ಕೆ ಇಂತಿಷ್ಟು ಎಂದು ಬೆಲೆ ನೀಡಿ ಕುಡಿಯುತ್ತೇವೆ. ಆದರೆ ಬೆಂಗಳೂರಿನ ಈ ಅಂಗಡಿಯಲ್ಲಿ ಎಳನೀರನ್ನು ಲೀಟರ್ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತಿದೆ.
ಬೆಂಗಳೂರಿನಲ್ಲಿ 1 ಲೀಟರ್ ಎಳನೀರಿನ ಬೆಲೆ 180 ರೂಪಾಯಿಯಂತೆ! ಹೀಗಂತ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ವೈರಲ್ ಆಗ್ತಿದೆ. ಈ ಚಿತ್ರವು ಬೆಂಗಳೂರಿನ ರಸ್ತೆಬದಿ ಎಳನೀರು ಮಾರಾಟ ಮಾಡುವ ಅಂಗಡಿಯನ್ನು ತೋರಿಸುತ್ತದೆ. ರಿತು ಜೂನ್ ಎಂಬುವವರು ತಮ್ಮ X (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡ ಫೋಟೋವೊಂದು ಈಗ ಇಂಟರ್ನೆಟ್ನಲ್ಲಿ ಸಂಚಲನ ಮೂಡಿಸಿದೆ. ಬೆಂಗಳೂರಿನ ರಸ್ತೆ ಬದಿಯ ಸಣ್ಣ ಅಂಗಡಿಯೊಂದರ ಮುಂದೆ ದೊಡ್ಡ ಬೋರ್ಡ್ನಲ್ಲಿ 1 ಲೀಟರ್ ಎಳನೀರಿಗೆ 180 ರೂಪಾಯಿ ಎಂದು ಬರೆಯಲಾಗಿದೆ.
ಈ ಫೋಟೋವನ್ನು ಹಂಚಿಕೊಂಡಿರುವ ಅವರು, “ನಾನು ಬೆಂಗಳೂರಿನಲ್ಲಿ ಮಾತ್ರ ಎಳನೀರನ್ನು ಲೀಟರ್ ಲೆಕ್ಕದಲ್ಲಿ ಮಾರಾಟ ಮಾಡುವುದನ್ನು ನೋಡಿದ್ದೇನೆ. ಇದೇ ಪೀಕ್ ಬೆಂಗಳೂರು ಅಂದ್ರೆ! ಎಂದು ಅಡಿಟಿಪ್ಪಣಿ ನೀಡಿದ್ದಾರೆ.
ಸಾಮಾನ್ಯವಾಗಿ ಭಾರತದಲ್ಲಿ ಎಳನೀರು ಪ್ರತಿ ಕಾಯಿಗೆ ಸುಮಾರು 30-60 ರೂಪಾಯಿ ಅಥವಾ ಹೆಚ್ಚು ಬೆಲೆಗೆ ಮಾರಾಟವಾಗುತ್ತದೆ. ಆದರೆ ಇಲ್ಲಿ ಲೀಟರ್ಗೆ ಬೆಲೆ ಹಾಕಿ ಮಾರಾಟ ಮಾಡುತ್ತಿರುವುದು ಅಸಾಮಾನ್ಯವಾಗಿ ಕಂಡುಬಂದಿದೆ.
ಒಂದು ತೆಂಗಿನಲ್ಲಿ ಸುಮಾರು 200-400 ml ನೀರು ಇರುತ್ತದೆ. ಆದ್ದರಿಂದ 1 ಲೀಟರ್ಗೆ 2-5 ಕಾಯಿಗಳಷ್ಟು ಬೇಕಾಗುತ್ತದೆ. ₹180 ಬೆಲೆಯು ಕೆಲವರಿಗೆ ಅತಿ ಹೆಚ್ಚು ಎನಿಸಿದೆ. ಇನ್ನು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಶುರುವಾಗಿದೆ. “ಬೆಂಗಳೂರಿನಲ್ಲಿ ಎಲ್ಲವೂ ದುಬಾರಿ, ಇದು Peak Bengaluru!” ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.